ಬೀದರ್‌ | ಜನರ ಸಮಸ್ಯೆಗಳಿಗೆ ಧ್ವನಿಯಾದ ಪತ್ರಿಕೆಗಳು : ಡಾ.ಭೀಮಾಶಂಕರ ಬಿರಾದಾರ

Date:

Advertisements

ಪತ್ರಕರ್ತರು ಒಂದೇ ಒಂದು ದಿನ ತಮ್ಮ ಬರಹ ನಿಲ್ಲಿಸಿದರೆ, ಮಾಧ್ಯಮಗಳು ಸ್ತಬ್ಧಗೊಳ್ಳುವವು. ಲೋಕದ ಚರಿತ್ರೆ , ಸಾಂಸ್ಕೃತಿಕ ದಾಖಲೆಯೇ ಸ್ಥಗಿತಗೊಳ್ಳುವ ಅಪಾಯ ಎದುರಾಗುತ್ತದೆ ಎಂದು ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರಹೇಳಿದರು.

ಹುಲಸೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿಅವರು ವಿಶೇಷ ಉಪನ್ಯಾಸ ನೀಡಿದರು.

ʼಸ್ಥಳೀಯ ಚರಿತ್ರೆ ಮತ್ತು ಸ್ಥಳೀಯ ಸಾಂಸ್ಕೃತಿಕ ಲೋಕದ ದಾಖಲೀಕರಣಕ್ಕೆ ಮಾಧ್ಯಮ ಕೆಲಸ ಮಹತ್ವದ್ದು. ವಿದ್ಯುನ್ಮಾನ ಮಾಧ್ಯಮ ರಾಜಧಾನಿ ಕೇಂದ್ರಿತ ಸುದ್ದಿಗೆ ಹೆಚ್ಚು ಮಹತ್ವ ನೀಡುತ್ತಿವೆ. ಸಣ್ಣ ಪುಟ್ಟ ಊರುಗಳ, ನಿರ್ಲಕ್ಷಿತ ಸಮುದಾಯಗಳ, ಜನ ಸಮುದಾಯದ ಸಮಸ್ಯೆ ಸವಾಲುಗಳು ಕಡೆಗೆ ಬೆಳಕು ಹರಿಸಬೇಕಾದ ಅನಿವಾರ್ಯತೆ ಇದೆ. ಮುದ್ರಣ ಮಾಧ್ಯಮಕ್ಕೆ ಜನಪರ ಕಾಳಜಿ, ಬದ್ಧತೆ ಮತ್ತು ಒಲವು ಉಳಿಸಿಕೊಂಡಿವೆʼ ಎಂದು ಅಭಿಪ್ರಾಯಪಟ್ಟರು.

Advertisements

ʼಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣ, ರೈತ, ಮಹಿಳಾ, ದಲಿತ-ಬಂಡಾಯ ಮೊದಲಾದ ಚಳುವಳಿಗಳನ್ನು ರೂಪಿಸಿದ, ಸಮಾಜವನ್ನು ಜಾಗೃತವಾಗಿ ಇರಿಸಿದ ಮಾಧ್ಯಮ ಈ ಕಾಲಘಟ್ಟದಲ್ಲಿ ಉದ್ಯಮವಾಗಿ ರೂಪಗೊಂಡಿದೆ . ಬಂಡವಾಳಶಾಹಿ, ಪ್ರಭುತ್ವಗಳ ಅಡಿಯಾಳು ಆಗದ ಎಚ್ಚರ ಮಾಧ್ಯಮಗಳಿಗೆ ಇದ್ದರೆ ಅಂಥ ಮಾಧ್ಯಮಗಳಿಂದ ಪ್ರಜ್ಞಾವಂತ ಜಗತ್ತು ಕಟ್ಟಲು ಸಾಧ್ಯʼ ಎಂದರು

ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ʼಪತ್ರಕರ್ತರ ಕುಟುಂಬದವರ ವೈದ್ಯಕೀಯ ಸೌಲಭ್ಯಕ್ಕಾಗಿ ಪತ್ರಕರ್ತ ಸಂಜೀವಿನಿ ಕಾರ್ಡ್ ಬಂದಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ಉಚಿತ ಬಸ್ ಪಾಸ್, 60 ವರ್ಷ ದಾಟಿದ ಪತ್ರಕರ್ತರಿಗೆ 15 ಸಾವಿರ ಮಾಶಾಸನ ಸರ್ಕಾರದಿಂದ ದೊರೆಯುವಂತೆ ಕಾರ್ಯನಿರತ ಕರ್ನಾಟಕ ಪತ್ರಕರ್ತರ ಸಂಘ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆʼ ಎಂದರು.

ಪಿಎಸ್ಐ ಶಿವಪ್ಪಾ ಮೇಟಿ ಮಾತನಾಡಿ, ʼಪತ್ರಿಕೆಯವರು ಸಮಸ್ಯೆ ಮುನ್ನೆಲೆಗೆ ತಂದರೆ ಸಂಬಂಧಿತ ಅಧಿಕಾರಿಗಳು ಬಗೆಹರಿಸುತ್ತಾರೆ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನ ನೀಡಿದರೆ ನಾಲ್ಕನೇ ಅಂಗ ಮಾಧ್ಯಮಕ್ಕೆ ವಿಶೇಷ ಅಧಿಕಾರ ಸಮಾಜವೇ ನೀಡಿದೆʼ ಎಂದರು.

WhatsApp Image 2025 08 01 at 8.50.13 AM

ಬಸವಕಲ್ಯಾಣ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ಥಂಡ ಜೋಷಿ ಮಾತನಾಡಿ, ʼಪತ್ರಿಕೆ, ಆಡಳಿತ ಮತ್ತು ಸಾರ್ವಜನಿಕ ವಲಯ ಇವುಗಳ ನಡುವೆ ಅಂತರ್ ಸಂಬಂಧವಿದೆ. ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಈ ಭಾಗದ ಅಭಿವೃದ್ಧಿಯಲ್ಲಿ, ಬೆಳವಣಿಗೆಯಲ್ಲಿ, ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆ ಬಗೆಹರಿಸುವಲ್ಲಿ ಮಾಧ್ಯಮಗಳ ಕಾಳಜಿ ದೊಡ್ಡದು. ಈ ತಾಲೂಕಿನ ಬೆಳವಣಿಗೆಗಾಗಿ ಪತ್ರಕರ್ತರು ಪ್ರಾಮಾಣಿಕವಾಗಿ ಶ್ರಮಿಸಿʼ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಸರ್ಕಾರದ ಯೋಜನೆ ಅನುಷ್ಠಾನಕ್ಕೆ ತರಲು ಪತ್ರಿಕೆಗಳ ಪಾತ್ರ ಮಹತ್ವದ್ದು. ಕನ್ನಡದ ಕೆಲಸಗಳಿಗಾಗಿ, ಗಡಿ ಸಮಸ್ಯೆ ಬಗೆಹರಿಸಲು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಭಿವೃದ್ಧಿ ಬಗ್ಗೆ ಮಾಧ್ಯಮ ಕಾಳಜಿ ವಹಿಸಿವೆ. ಉದಯೋನ್ಮುಖ ತಾಲೂಕು ಹುಲಸೂರಿನ ಅಭಿವೃದ್ಧಿಯ ಬಗೆಗೆ ಮಾಧ್ಯಮ ದಿಕ್ಸೂಚಿಯಾಗಲಿʼ ಎಂದು ಆಶಿಸಿದರು.

ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಸೂರ್ಯಕಾಂತ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿದರು.

ಇದನ್ನೂ ಓದಿ : ಬೀದರ್‌ | ವಿಶ್ವಾಸಾರ್ಹತೆ ಉಳಿಸಿಕೊಂಡ ಮುದ್ರಣ ಮಾಧ್ಯಮ : ದೇವಯ್ಯ ಗುತ್ತೇದಾರ್

ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಾರಾಣಿ ಭೋಸ್ಲೆ, ಯುವ ಮುಖಂಡ ಅರವಿಂದ ಹರಪಲ್ಲೆ, ಉದಯಕುಮಾರ್ ಮುಳೆ,
ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ನಂದೋಡೆ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮೇಂದ್ರ ಭೋಸ್ಲೆ, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಸಂತೋಷ ಚೆಟ್ಟಿ, ಪ್ರದೀಪ್ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಡಿ.ಕೆ.ಪ್ರಹ್ಲಾದ್, ದತ್ತಾತ್ರೆ ಸಾಬನೆ, ಶಿವರಾಜ ಖಪಲೆ ನಿರೂಪಿಸಿದರು. ಗುರುಪ್ರಸಾದ್ ಮೆಂಟೆ ಸ್ವಾಗತಿಸಿದರು. ಬಸವಕುಮಾರ ಕೌಟೆ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಹುಲಸೂರಕರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X