ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿಯ ತುರ್ತು ಸಭೆಯನ್ನು ಕರೆದು ಚರ್ಚಿಸಿದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ʼಪಾಕಿಸ್ತಾನ ದೇಶವು ಭಯೋತ್ಪದಕರಿಗೆ ಬೆಂಬಲಿಸುತ್ತ, ಭಾರತದಲ್ಲಿ ಅಶಾಂತಿ ನಿರ್ಮಿಸಲು ಪ್ರಯತ್ನಿಸುತ್ತಿದೆ. ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು 27 ಅಮಾಯಕ ಜನರ ಹತ್ಯೆ ಮಾಡಿರುವುದು ಖಂಡನೀಯʼ ಎಂದರು.
ʼಭಯೋತ್ಪಾದಕರ ಕೃತ್ಯಯನ್ನು ಲಷ್ಕರ್-ಎ-ತಯಬಾ ಉಗ್ರಗಾಮಿ ಸಂಘಟನೆಗೆ ನಿಷ್ಠೆ ಹೊಂದಿರುವ ʼದಿ ರೆಸಿಸ್ಟೆನ್ಸ್ ಫ್ರಂಟ್ʼ ಗುಂಪು ಭಯೋತ್ಪಾದಕರ ಕೃತ್ಯದ ಹೊಣೆ ಹೊತ್ತಿದೆ. ಇದರಿಂದಾಗಿ ಈ ಕೃತ್ಯದಲ್ಲಿ ಪಾಕಿಸ್ತಾನ ದೇಶ ನೇರವಾಗಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ. ಈ ಘಟನೆಯನ್ನು ಕೋಮು ಗಲಭೆಗೆ ಉಪಯೋಗಿಸದಂತೆ ಭಾರತ ಸರ್ಕಾರ ನಿಗಾ ವಹಿಸಬೇಕುʼ ಎಂದು ಕೋರಿದರು.
ಕೂಡಲೇ ಸಂಸದ ಸಭೆಯನ್ನು ಕರೆದು ಸರ್ವ ಸಂಸದರ ಅಭಿಪ್ರಾಯದಂತೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಏ.26ಕ್ಕೆ ಸಂವಿಧಾನ ಸಂರಕ್ಷಕರ ಸಮಾವೇಶ
ಸಿಪಿಐ ಜಿಲ್ಲಾ ಮಂಡಳಿ ಸದಸ್ಯರಾದ ಬಾಬುರಾವ ಹೊನ್ನಾ, ಪಾಂಡುರಂಗ ಪ್ಯಾಗೆ, ಪ್ರಭು ಹೊಚ್ಚಕನಳ್ಳಿ, ನಜೀರ್ ಅಹ್ಮದ್ ಚೊಂಡಿ,,ಮಹ್ಮದ್ ಖದೀರಸಾಬ್, ಪ್ರಭು ತಗಣಿಕರ್, ಖಮರ್ ಪಟೇಲ್ ರೇಕುಳಗಿ, ಸುನೀಲ ವರ್ಮಾ, ಜೈಶೀಲ, ಭೀಮಣ್ಣಾ ಬಂಡೆ, ರಾಮಣ್ಣ ಅಲ್ಮಾಸಪೂರ ಇದ್ದರು.