ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿ, ಭಾರೀ ಮೊತ್ತದ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತರ್ ರಾಜ್ಯ ಮಟ್ಟದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೀದರ್ ಜಿಲ್ಲೆಯ ಮುನ್ನಾಖೇಳ್ಳಿ ಪೊಲೀಸ್ ತಂಡವು ರಾಷ್ಟ್ರೀಯ ಹೆದ್ದಾರಿ 65ರ ಚಿಟಗುಪ್ಪ ತಾಲೂಕಿನ ಮಂಗಲಗಿ ಟೋಲ್ ಬಳಿ ಗಾಂಜಾ ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿ 118 ಕೆಜಿ ಗಾಂಜಾ ಹಾಗೂ ಒಂದು ಕಾರು ಜಪ್ತಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರಾವಳಿ ಗಡಿ ಗ್ರಾಮಗಳಲ್ಲಿ ‘ವೈಬ್ರಂಟ್ ವಿಲೇಜ್ ಪ್ರೋಗಾಮ್’ ಜಾರಿಗೆ ಕೇಂದ್ರ ಚಿಂತನೆ: ಅಬ್ದುಲ್ ಅಹದ್
ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಬೆನ್ನಟ್ಟಿದ್ದ ವೇಳೆ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಮುನ್ನಾಖೇಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಮುನ್ನಾಖೇಳ್ಳಿ ಪೊಲೀಸರಿಗೆ ಬೀದರ್ ಎಸ್‌ಪಿ ಚನ್ನಬಸವಣ್ಣ ಎಸ್ ಎಲ್ ಮೆಚ್ಚುಗೆ ಸೂಚಿಸಿ, ಬಹುಮಾನ ಘೋಷಿಸಿದ್ದಾರೆ.