ದಲಿತ್ ಯುನಿಟಿ ಮೂವ್ಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಪ್ರಕಾಶ್ ರಾವಣ್ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ವಿನೋದ್ ರತ್ನಾಕರ್ ತಿಳಿಸಿದ್ದಾರೆ.
ʼದಾದಾ ಸಾಹೇಬ್ ಕಾನ್ಶೀರಾಮ್ ಅವರ ಜನ್ಮದಿನ ಅಂಗವಾಗಿ ಶನಿವಾರ ಸಂಘಟನೆಯ ರಾಜ್ಯಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಕಾಶ ರಾವಣ ಅವರು 26 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ಗೌತಮ್ ದೊಡ್ಡಿ ಡಾಕುಳಗಿ ಅವರು 11 ಮತ ಪಡೆದು ಎರಡನೇ ಸ್ಥಾನದಲ್ಲಿದ್ದರು. ಒಟ್ಟು 37 ಮತದಾರರು ಮತ ಚಲಾಯಿಸಿದ್ದರುʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಡಾ.ಅಂಬೇಡ್ಕರ್ ಮತ್ತು ಕಾನ್ಶೀರಾಮ್ ಅವರ ಬಹುಜನ ತತ್ವ ಅನುಸರಿಸಿ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯತತ್ವನ್ನು ಸ್ಥಾಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಹುಜನ ಚಳುವಳಿಯನ್ನು ನಿರಂತರವಾಗಿ ಮುಂದುವರಿಸುವ ಅಗತ್ಯ ಇದೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಔರಾದ್ ಕ್ಷೇತ್ರದ 40 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ : ಶಾಸಕ ಪ್ರಭು ಚವ್ಹಾಣ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರ
ಸಂಘಟನೆಯ ಪ್ರಮುಖರಾದ ಶ್ರೀಕಾಂತ್ ಮೂಲಭಾರತಿ, ದಿಲೀಪ್ ಚಂದಾ, ಮಹಾಂತೇಶ ಹಳ್ಳಿಖೇಡಕರ್, ಪ್ರವೀಣ್ ರತ್ನಾಕರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.