ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ಹಸ್ತಾಂತರ, ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಹಾಗೂ ಎಲ್ಲ ತಾಲ್ಲೂಕು ಸಮಿತಿಗಳ ಸಹಯೋಗದಲ್ಲಿ ಬೀದರ್ ನಗರದ ಜನವಾಡ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಭವನದಿಂದ ಆರಂಭಗೊಂಡು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಸಂವಿಧಾನದ ಕಲಂ 25, 26ರ ಅನ್ವಯ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಯಾ ಜಾತಿಗಳ ದೇವಸ್ಥಾನ, ಟ್ರಸ್ಟ್‌ಗಳಿಗೆ ಆಯಾ ಜಾತಿಗಳ ಪ್ರಮುಖರ ಆಡಳಿತ ಮಂಡಳಿಗಳಿವೆ. ಆದರೆ, ಬೋಧಗಯಾದಲ್ಲಿ ಇದಕ್ಕೆ ವಿರುದ್ಧವಾದ ಆಡಳಿತ ಮಂಡಳಿ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಭಂತೆ ಧರ್ಮಾಪಾಲ್ ರೇಕುಳಗಿ ಮೌಂಟ್ ಮನ್ನಾಎಖೆಳ್ಳಿ, ಭಂತೆ ಬೋದಿ ರತ್ನ ಆನಂದ ಬುದ್ದ ವಿಹಾರ ಹಿಪ್ಪಳಗಾಂವ, ಭಂತೆ ಬೋಧಿ ಧಮ್ಮ ಸನ್ನತ್ತಿ ಬುದ್ಧ ವಿಹಾರ ಹುಪ್ಪಳಾ, ಭಂತೆ ಸಂಘ ರಖಿತ ವೈಶಾಲಿ ನಗರ ಆಣದೂರ ಹಾಗೂ ಭಂತೆ ಧಮ್ಮದೀಪ ದೇವನಾಂಪ್ರಿಯ ಬುದ್ಧ ವಿಹಾರ್ ಹಾಲಹಾಳ್ಳಿ(ಕೆ) ನೇತ್ರತ್ವ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ದಾಪ್ಯ ವೇತನ ಬಾರದೆ ವೃದ್ಧ ದಂಪತಿ ಪರದಾಟ; ಕಣ್ಣು ಹಾಯಿಸುವರೇ ಅಧಿಕಾರಿಗಳು?
ಭಾರತೀಯ ಬೌದ್ಧ ಮಹಾಸಭೆಯ ರಾಜ್ಯ ಅಧ್ಯಕ್ಷ ಮನೋಹರ್ ಮೋರೆ , ರಾಜ್ಯ ಕಾರ್ಯದರ್ಶಿ ವೈಶಾಲಿ ಮೋರೆ ಜಿಲ್ಲಾಧ್ಯಕ್ಷ ರಾಜಪ್ಪ ಗುನಳ್ಳಿಕರ್, ಬೀದರ ತಾಲೂಕಾ ಅಧ್ಯಕ್ಷ ಶಿವಕುಮಾರ ಸದಾಫುಲೆ , ಭಾಲ್ಕಿ ತಾಲೂಕ ಅಧ್ಯಕ್ಷ ವಿಜಯಕುಮಾರ ಗಾಯಕವಾಡ, ಬಸವಕಲ್ಯಾಣ ತಾಲೂಕ ಅಧ್ಯಕ್ಷ ಮೈಸೆ ಮನೋಹರ್, ಔರಾದ ತಾಲೂಕ ಅಧ್ಯಕ್ಷ ಸೋಪಾನರಾವ ಡೋಂಗ್ರೆ, ಹಿರಿಯರಾದ ವಿಠಲ್ ದಾಸ್ ಪ್ಯಾಗೆ , ಶಿವಶರಣಪ್ಪ ಹುಗ್ಗೆ ಪಾಟೀಲ್, ಮಾರುತಿ ಬೌದ್ದೆ, ಕಾಶಿನಾಥ ಚೆಲವಾ, ಮಹೇಶ್ ಗೋರನಾಳಕರ, ಅರುಣ್ ಪಟೇಲ್, ಸೂರ್ಯಕಾಂತ್ ಭಾವಿದೊಡ್ಡಿ, ಡಾ. ಕಾಶಿನಾಥ್ ಚೆಲುವಾ, ಸೂರ್ಯಕಾಂತ ಸಿಂಗೆ, ನರಸಪ್ಪ ಮೇಟಿ, ತಳವೀರ ಸಿಂಗ್ ಸಾಮ್ರಾಟ್, ಕಂಟೆಪ್ಪ ರೂದನೂರ್, ಜಗನ್ನಾಥ್ ಬಡಿಗೇರ, ಜಗನ್ನಾಥ್ ಕಾಂಬಳೆ ಸಂತೋಷ್ ಫೂಲೆ, ಮಂಜುಳಾ ಭಾವಿದೊಡ್ಡಿ, ಚಂದ್ರಕಲಾ ಬಡಿಗೇರ್, ಧನರಾಜ್ಯೋತಿ ,ಗೌತಮ್ ಮೀಸೆ, ಹಾಗೂ ಭಾರತೀಯ ಬೌದ್ಧ ಮಹಾ ಸಭೆಯ ಜಿಲ್ಲಾ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೂ ಸಮತಾ ಸೈನಿಕ ದಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.