ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೀದರ್ ನಗರದ ಕರ್ನಾಟಕ ಪದವಿಪೂರ್ವ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ 28 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಕಾಲೇಜಿಗೆ ಶೇ 75.29 ರಷ್ಟು ಫಲಿತಾಂಶ ದೊರೆತಿದ್ದು, 165 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 57 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಜಿಲ್ಲೆಯ ವಾಣಿಜ್ಯ ವಿಭಾಗದ ಅನುದಾನಿತ ಕಾಲೇಜುಗಳ ಟಾಪ್ 10 ವಿದ್ಯಾರ್ಥಿಗಳಲ್ಲಿ ಕರ್ನಾಟಕ ಕಾಲೇಜಿನ ನಾಲ್ವರು ಸೇರಿದ್ದಾರೆ. ಶೇ 95 ರಷ್ಟು ಅಂಕ ಗಳಿಸಿರುವ ಶ್ರೇಯಾ ಮಲ್ಲಿಕಾರ್ಜುನ ಜಿಲ್ಲೆಯ ಅನುದಾನಿತ ಕಾಲೇಜುಗಳಲ್ಲೇ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಪ್ನಾ ರಾಜಕುಮಾರ ಶೇ 94.67, ಸಮತಾ ಮುಖೇಶ ಮಹೇಶ್ವರ ಶೇ 94.50, ಭವಾನಿ ಪಂಡಿತ ಶೇ 94.33, ಶ್ರುತಿ ಗುಪ್ತಾ ಶೇ 91.67, ಭೂಮಿಕಾ ಚನ್ನಬಸಪ್ಪ ಶೇ 91.50, ಬಿ. ಸಂಜನಾ ಶೇ 91.33, ಶ್ರೀದೇವಿ ಗುಂಡಪ್ಪ ಶೇ 91.33, ಅರ್ಪಿತ ಕುಮಾರ ಸಂಜುಕುಮಾರ ಶೇ 91.17, ಸರ್ವೇಶ ಪ್ರಭಾಕರ ಶೇ 91.17, ವೈಷ್ಣವಿ ಭೀಮರಾವ್ ಶೇ 90.33, ಅಂಜಲಿ ಶಿವಾಜಿರಾವ್ ಶೇ 90, ಸುಮೇಧಾ ಸಮ್ಮೇಟ ಧನ್ನೂರ ಶೇ 89.50, ಶಿವಾನಂದ ರಾಚಪ್ಪ ಶೇ 88.33, ವೈಷ್ಣವಿ ಮಲ್ಲಿಕಾರ್ಜುನ ಶೇ 88, ಅಂಕಿತಾ ಸಂಜುಕುಮಾರ ಶೇ 88, ರಿಯಾ ವಿಜಯಕುಮಾರ ಶೇ 87.83, ಮೀನಾ ಮೋಹನರಾವ್ ಶೇ 86.33, ಚಂದ್ರಕಾಂತ ತುಕಾರಾಮ ಶೇ 85.17, ಎಜ್ರೆಲ್ ಯೇಶಪ್ಪ ಶೇ 85 ಅಂಕ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ದತ್ತುಕುಮಾರ ದಿಗಂಬರ ಶೇ 92.66, ಅವಿನಾಶ ಶಿವಪುತ್ರ ಶೇ 90, ಪರೇಶ ಸಂತೋಷ ಶೇ 88.83, ದತ್ತಾತ್ರಿ ಶಿವರಾಜ ಶೇ 88.16, ರಂಜನಾ ಜೈಚಂದ್ ಶೇ 87.66, ಮಹೇಶ್ ಬಂಡೆಪ್ಪ ಶೇ 85.33, ವಿಜ್ಞಾನ ವಿಭಾಗದಲ್ಲಿ ಪೂಜಾ ಜಿ. ಧನರಾಜ್ ಶೇ 86.66, ಭವಾನಿ ರಾಜೇಶ್ ಶೇ 86.16 ರಷ್ಟು ಅಂಕ ಪಡೆದು ಸಾಧನೆ ತೋರಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? Second PUC Result | ಪಿಯುಸಿ ಫಲಿತಾಂಶ : 19 ರಿಂದ 22ನೇ ಸ್ಥಾನಕ್ಕೆ ಕುಸಿದ ಬೀದರ್
ವಿದ್ಯಾರ್ಥಿಗಳ ಸಾಧನೆಗೆ ಕೆಆರ್ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಉಪಾಧ್ಯಕ್ಷ ಬಿ.ಜಿ. ಶೆಟಕಾರ್, ಕಾರ್ಯದರ್ಶಿ ಸತೀಶ ಪಾಟೀಲ, ಜಂಟಿ ಕಾರ್ಯದರ್ಶಿ ಶಿವಾನಂದ ಗಾದಗೆ, ಆಡಳಿತಾಧಿಕಾರಿ ಪ್ರೊ. ಎಸ್.ಕೆ. ಸಾತನೂರ, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಕಾಲೇಜಿನ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.