ಬೀದರ್ ಜಿಲ್ಲೆಯಾದ್ಯಂತ ರಂಜಾನ್-ಹೋಳಿ ಹಬ್ಬವನ್ನು ಶಾಂತಿ, ಸೌಹಾರ್ದತೆಗೆ ಧಕ್ಕೆ ಬಾರದಂತೆ ಆಚರಿಸಬೇಕೆಂದು ಬೀದರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಕರೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ʼಹೋಳಿ ಹಬ್ಬದ ದಿನದಂದು ಮಧ್ಯಾಹ್ನ 12:30 ಗಂಟೆಯವರೆಗೆ ಎಲ್ಲರೂ ಬಣ್ಣದಾಟವನ್ನು ಆಡಿ ಮುಗಿಸಬೇಕು. ಹೋಳಿ ದಿನ ಯಾವುದೇ ವ್ಯಕ್ತಿಗಳಿಗೆ ಬಣ್ಣದಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕುʼ ಎಂದರು.
ʼರಂಜಾನ್ ಹಬ್ಬದ ಪ್ರಯುಕ್ತ ಓಲ್ಡ್ ಸಿಟಿಯಲ್ಲಿ ವ್ಯಾಪಾರ ಮಾಡಲು ವ್ಯಾಪರಸ್ಥರಿಗೆ ಮೊದಲ ಇಪ್ಪತ್ತು ದಿ ರಾತ್ರಿ 1 ಗಂಟೆಯವರೆಗೆ, ಕೊನೆಯ ಹತ್ತು ದಿನ ಬೆಳಿಗಿನವರೆಗೆ ಕಾಲಾವಕಾಶ ಕಲ್ಪಿಸಿಕೊಡಲಾಗುವುದುʼ ಎಂದರು.
ನಗರಸಭೆ ಅಧ್ಯಕ್ಷ ಎಂ.ಡಿ. ಗೌಸ್ ಮಾತನಾಡಿ, ʼಪ್ರತಿ ವರ್ಷದಂತೆ ಈ ವರ್ಷ ಕೂಡ ಹಿಂದೂ-ಮುಸ್ಲಿಂ ಬಾಂಧವರು ಪ್ರೀತಿ, ಬಾಂಧವ್ಯದಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕುʼ ಎಂದರು.
ಸಭೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಲೆಯಿಂದ 187 ಹಾಲಿನ ಪೌಡರ್ ಕಳವು ಪ್ರಕರಣ : ಇಬ್ಬರು ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ
ನಗರಸಭೆ ಸದಸ್ಯರಾದ ಇರ್ಶಾದ್ ಪೈಲ್ವಾನ್, ಅಬ್ದುಲ್ ಅಜೀಜ್ ಮುನ್ನಾ, ಡಾ.ಮಕ್ಸೂದ್ ಚಂದಾ, ಶಾಹಿನ್ ಪವೇಜ್, ಎಂ.ಕೆ.ಬೇಗ್, ನಂದಕಿಶೋರ್ ಶರ್ಮಾ, ಸೂರ್ಯಕಾಂತ ಶೆಟಕಾರ, ಮನೋಹರ ದಂಡೆ, ಡಿವೈಎಸ್ಪಿ ಶಿವನಗೌಡ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.