ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಮಂಡಳಿ ವತಿಯಿಂದ 136ನೇ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಬೀದರ್ ನಗರದಲ್ಲಿ ಆಚರಿಸಿಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಫಾಯತ ಅಲಿ ಮಾತನಾಡಿ, ʼಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿದ್ದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಯೋತ್ಪಾದಕ ಶಕ್ತಿಗಳನ್ನು ನಿಯಂತ್ರಿಸಲು ವಿಫಲವಾಗಿದೆʼ ಎಂದು ಆರೋಪಿಸಿದರು.
ಬೀದರ್ ತಾಲೂಕಾ ಅಖಿಲ ಭಾರತ ದಲಿತ ಹಕ್ಕುಗಳ ಚಳುವಳಿ ಅಧ್ಯಕ್ಷ ಜೈಶೀಲ ಮಾತನಾಡಿ, ʼಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ದಲಿತರ ಮೇಲೆ ಆಗುತ್ತಿರುವ ಅತ್ಯಾಚಾರಗಳು ತಡೆಯುವಲ್ಲಿ ವಿಫಲವಾಗಿದೆʼ ಎಂದು ದೂರಿದರು.
ಸಿಪಿಐ ಜಿಲ್ಲಾ ಮುಖಂಡ ಬಾಬುರಾವ ಹೊನ್ನಾ ಮಾತನಾಡಿ, ʼಖಾಸಗಿಕರಣ, ಜಾಗತೀಕರಣ ಮತ್ತು ಉದಾರೀಕರಣದಿಂದಾಗಿ ಜಗತ್ತಿನಲ್ಲಿ ಬಲಪಂಥಿಯ ಶಕ್ತಿಗಳು ಮೇಲುಗೈ ಸಾಧಿಸುತ್ತಿವೆ. ಭಾರತದಲ್ಲಿ ಕೂಡ ಬಲಪಂಥಿಯ ಕೇಂದ್ರ ಸರ್ಕಾರವು ಕೋಮುವಾದಿ ಫ್ಯಾಸಿಸ್ಟ್ ಸ್ವರೂಪ ಹೊಂದಿದೆ. ಈ ಕೋಮುವಾದಿ ಫ್ಯಾಸಿಸ್ಟ್ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು ತೆಗೆದು ಹಾಕುತ್ತಾ, ಕಾರ್ಪೋರೇಟ್ ಮನೆತನಗಳಿಗೆ ಅನುವುಮಾಡಿಕೊಡುತ್ತಿದೆʼ ಎಂದರು.
ಕಾರ್ಮಿಕ ವಿರೋಧಿ 4-ಕಾಯ್ದೆಗಳನ್ನು ರದ್ದುಪಡಿಸಬೇಕು. ಎಪಿಎಂಸಿ ಖಾಸಗೀಕರಣ ಗೊಳಿಸುವುದನ್ನು ಹಿಂಪಡೆಯಬೇಕು. ಬೆಂಗಳೂರಿನ ಬಿಬಿಎಂಪಿಯಲ್ಲಿ ಕಾರ್ಮಿಕರನ್ನು ಖಾಯಂಗೊಳಿಸಿದಂತೆ ಬೀದರ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ನಿರ್ಣಯಗಳು ಕೈಗೊಳ್ಳಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತರಿಗೆ ಸೂಕ್ತ ರಕ್ಷಣೆ; ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೊಣೆ : ಸಚಿವ ಈಶ್ವರ ಖಂಡ್ರೆ
ಪಾಂಡುರಂಗ ಪ್ಯಾಗೆ ಭಾಲ್ಕಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಪ್ರಮುಖರಾ ನಜೀರ ಹುಸೇನ್ ಇರಾಣಿ, ಪ್ರಭು ತಗಣಿಕರ್, ನಜೀರ್ ಅಹ್ಮದ್ ಚೊಂಡಿ, ಸುನೀಲ ವರ್ಮಾ ಸೇರಿದಂತೆ ಮತ್ತತಿರರಿದ್ದರು.