ಬೀದರ್ ನಗರದ ಖಾಸಗಿ ಶಾಲೆಯೊಂದರ ನರ್ಸರಿಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ನಡೆದಿದ್ದು, ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುರುವಾರ (ಜು.24) ಪ್ರಕರಣ ದಾಖಲಾಗಿದೆ.
ಈ ಘಟನೆ ನಿನ್ನೆ (ಜು.23) ನಡೆದಿದೆ. ಎಂದಿನಂತೆ ಶಾಲೆಗೆ ಹೋಗಿ ಮನೆಗೆ ಮರಳಿದ್ದಳು. ಮಗಳ ಶಾಲಾ ಉಡುಪು ತೆಗೆಯುವಾಗ ರಕ್ತಸ್ರಾವವಾಗಿರುವುದು ತಾಯಿಗೆ ಗೊತ್ತಾಗಿದೆ. ಖಾಸಗಿ ಅಂಗದಿಂದ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಕೊಡಿಸಿದ್ಡಾರೆ. ಬಳಿಕ ಮಹಿಳಾ ಠಾಣೆಗೆ ದೂರು ಕೊಟ್ಟಿದ್ದಾರೆ.
ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಮನೆ ಮಹಡಿ ಮೇಲೆ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಉಪನ್ಯಾಸಕ!