ಜಿಲ್ಲೆಯ ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಶಾಲೆಯ ಶಿಕ್ಷಕ, ಶಿಕ್ಷಕಿಯನ್ನು ಡಿಡಿಪಿಐ ಸಲೀಂ ಪಾಷಾ ಅವರು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜೂನ್ 28 ರಂದು ಶಾಲೆಯ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬಳೇ ಇದ್ದಾಗ ಶಿಕ್ಷಕ ದೌರ್ಜನ್ಯ ಎಸಗಿದ್ದ. ಬಾಲಕಿ ವಿಷಯವನ್ನು ಕುಟುಂಬದವರಿಗೆ ಹಂಚಿಕೊಂಡಿದ್ದಳು. ವಿಷಯ ಬಹಿರಂಗಪಡಿಸಿದಂತೆ ಕುಟುಂಬದವರಿಗೆ ಶಿಕ್ಷಕಿ ಬಾಲಕಿಯ ಕುಟುಂಸ್ಥರಿಗೆ ಬೆದರಿಕೆ ಹಾಕಿ, ದೌರ್ಜನ್ಯವೆಸಗಿದ ಶಿಕ್ಷಕನ ಬೆಂಬಲಕ್ಕೆ ನಿಂತಿದ್ದರು.
ಈ ಕುರಿತು ಬಾಲಕಿಯ ತಂದೆ ಸೋಮವಾರ (ಜೂ.1) ಇಬ್ಬರ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದರು. ಸೋಮವಾರ ರಾತ್ರಿ ಶಿಕ್ಷಕ, ಶಿಕ್ಷಕಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದರ ಬೆನ್ನಲೇ ಇಬ್ಬರನ್ನು ಅಮಾನತು ಮಾಡಲಾಗಿದೆ. ರಾಜ್ಯ ಮಕ್ಕಳ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.