ಬಸವಣ್ಣನವರ ತತ್ವ ಚಿಂತನೆ ಹಳ್ಳಿ-ಹಳ್ಳಿಗಳಲ್ಲಿ ನೆಲೆಯೂರುವ ಅಗತ್ಯವಿದೆ. ಶರಣರ ಸಾಮರಸ್ಯ ಪರಿಕಲ್ಪನೆ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಹುಲಸೂರ ತಾಲ್ಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ʼಕೇಡಿಲ್ಲದ ಸಮಾಜದ ನಿರ್ಮಾಣವೇ ಬಸವವಾದವಾಗಿದೆ. ಚಲನಶೀಲ ಸಮಾಜವನ್ನು ರೂಪಿಸುವ ಸಿದ್ಧಾಂತವನ್ನು ಬಸವವಾದ ಪ್ರತಿಪಾದಿಸುತ್ತದೆʼ ಎಂದರು.
ʼಆಸೆ ಆಮಿಷಗಳಿಲ್ಲದೆ, ಸ್ಥಾನ ಮಾನಗಳನ್ನು ಅಪೇಕ್ಷಿಸದೆ ಬಸವಾದಿ ಶರಣರ ತತ್ವ ಸಿದ್ದಾಂತ ಪ್ರಸಾರ ಮಾಡುವ ಹೊಣೆಗಾರಿಕೆ ಈ ಕಾಲದ ಯುವ ಸಮುದಾಯದ ಮೇಲಿದೆ. ಶರಣರ ಚಿಂತನೆಗಳು ಜನ ಸಮುದಾಯಕ್ಕೆ ತಲುಪಿಸಿದವರು ತಾವಾಗಿಯೇ ಅಸ್ಮಿತೆಯನ್ನು ರೂಪಿಸಿಕೊಳ್ಳಲು ಸಾಧ್ಯʼ ಎಂದರು.
ʼಎಲ್ಲ ಸಮುದಾಯಗಳನ್ನು ಒಳಗೊಳ್ಳುವಿಕೆ, ಎಲ್ಲರನ್ನೂ ಗೌರವಿಸುವ, ಆದರಿಸುವುದೇ ಬಸವ ತತ್ವವಾಗಿದೆ. ಸಮಾನತೆಯ ದೃಷ್ಟಿಕೋನ ಬೆಳೆಸುವುದೇ ಬಸವವಾದ.ಹಳ್ಳಿಗರ ಮನಸ್ಸು ಒಡೆಯುವ ಹಲವು ಅಂಶಗಳನ್ನು ಶರಣರ ತತ್ವಾದರ್ಶಗಳ ಓದು ಅಧ್ಯಯನದಿಂದ ಎದುರಿಸಲು ಸಾಧ್ಯʼ ಎಂದು ಹೇಳಿದರು.

ನೇತ್ರತ್ವ ವಹಿಸಿದ್ದ ಬಸವಕಲ್ಯಾಣ ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ʼಬಸವ ಜಯಂತಿ ಸೇರಿ ಶರಣರ ನೆನಪಿನ ದಿನಗಳಂದು ಸಾಮೂಹಿಕ ವಿವಾಹಗಳು ಮಾಡಿರಿ. ಬಸವಣ್ಣನವರ ‘ಕಳಬೇಡ, ಕೊಲಬೇಡ’ ವಚನವೊಂದನ್ನೇ ಅರಿತು ನಡೆದರೆ ಯಾವುದೇ ವ್ಯಾಜ್ಯಯಿರದುʼ ಎಂದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಭಾರತದ ಬಹುದೊಡ್ಡ ತತ್ವಜ್ಞಾನಿ, ಸಾಂಸ್ಕೃತಿಕ ನಾಯಕ ಎಂದು ಕರೆಯಿಸಿಕೊಳ್ಳುವ ಘನತೆ ಬಸವಣ್ಣನವರು ಹೊಂದಿದ್ದಾರೆ. ಅವರು ಹೇಳಿದ ಮೌಢ್ಯ ವಿರೋಧಿ ನಿಲುವು, ಕಂದಾಚಾರ ನಿಷೇಧದ ಆಲೋಚನೆ ಎಂದಿಗೂ ಪ್ರಸ್ತುತʼ ಎಂದರು.
ಹುಲಸೂರ ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ʼಬಸವಣ್ಣನವರು ಜಾತ್ಯತೀತ ಸಮಸಮಾಜ ರೂಪಿಸಿದ ಮಹಾನ್ ಚೇತನ. ಅವರು ನೀಡಿದ ತತ್ವ ಚಿಂತನೆ ಎಲ್ಲರಿಗೂ ದಾರಿ ದೀಪವಾಗಿವೆʼ ಎಂದರು.
ತಾಪಂ ಮಾಜಿ ಸದಸ್ಯ ಶಬ್ಬೀರ್ ಸಾಬ್ ಮಾತನಾಡಿ, ʼಬಸವಣ್ಣನವರು ಮಹಾ ಮಾನವತಾವಾದದ ಪಾಠ ಮಾಡಿದ ಮೇಷ್ಟ್ರು. ಸಮಾಜದ ಎಲ್ಲರನ್ನೂ ತಮ್ಮವನೆಂಬ ಶ್ರೇಷ್ಠ ಭಾವನೆ ಮೂಡಲು ಕಾರಣರಾದವರು. ಅವರ ಚಿಂತನೆಗಳು ಜನಮಾನಸದಲ್ಲಿ ಎಂದಿಗೂ ಜೀವಂತವಾಗಿದೆʼ ಎಂದರು.
ಬಸವ ದಳದ ಅಧ್ಯಕ್ಷ ಅನಿಲಕುಮಾರ ತಾಂಬೋಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸೈನಿಕ ಮಹಾರುದ್ರಪ್ಪಾ ಮಂಠಾಳೆ ಗುರು ಬಸವ ಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿತ್ರಾಬಾಯಿ ಸಂಜುರೆಡ್ಡಿ, ಪಿಡಿಓ ಸುಲೋಚನಾ ಬಂಡೆ, ಬಾಬುರಾವ ಪಾಟೀಲ, ಧೂಳಪ್ಪಾ ಭರಮಶೆಟ್ಟೆ, ಧೂಳಪ್ಪಾ ಹಾಲಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಫುಲೆ, ಸದಸ್ಯರಾದ ದೀಪಕ ಪಾಟೀಲ, ಸಂತೋಷ ಭರಮಶೆಟ್ಟೆ, ಶಹಾಜಿ ದತ್ತಾಸಮಜೆ, ಜಗನ್ನಾಥ ಖ್ಯಾಡೆ, ಗ್ರಾಪಂ ಮಾಜಿ ಅಧ್ಯಕ್ಷ ದತ್ತಾತ್ರೇಯ ರಾಘೋ, ಭೀಮಾಶಂಕರ ಬಿರಾದಾರ, ದತ್ತಾತ್ರಿ ಮೆಟಕಾರೆ, ಸತೀಶ್ ಹಿರೇಮಠ, ಮಹಾರುದ್ರ ಭರಮಶೆಟ್ಟೆ, ಮಡೊಳಪ್ಪಾ ಬಿರಾದಾರ, ಮಹೇಶ ಪಾಟೀಲ, ಮಹೇಶ ಭರಮಶೆಟ್ಟೆ, ಅಜೀಮ್ ಲಿಂಬೋರೆ, ಧನಾಜಿ ಸಮದರೆ, ಶಿವಾಜಿರಾವ ಸೂರ್ಯವಂಶಿ, ಬಾಬುರಾವ್ ಮೇತ್ರೆ, ಸಂಗಮೇಶ ಬಿರಾದಾರ, ಬೀರಪ್ಪ ಮೇತ್ರೆ, ಬಾಬುರಾವ್ ತಾಂಬೋಳೆ, ಕಿಶನ್ ರಾವ್ ಬಿರಾದಾರ ಸೇರಿದಂತೆ ಹಲವರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮದ ಐವತ್ತಕ್ಕೂ ಹೆಚ್ಚು ಜನ ರೈತರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ದೇವಾನಂದ ಕುರದೆ ಸ್ವಾಗತಿಸಿದರು. ಸಂಗಮೇಶ ನಿರೂಪಿಸಿದರು. ಸಂತೋಷ ತಾಂಬೋಳೆ ವಂದಿಸಿದರು.
ಬಸವ ಜಯಂತಿ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಬಸವೇಶ್ವರ ವೃತ್ತದಿಂದ ಬಸವಣ್ಣನವರ ಭಾವಚಿತ್ರ ಮತ್ತು ಪ್ರತಿಮೆಯ ಅದ್ದೂರಿ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಸದಸ್ಯರಾದ ದೀಪಕ ಪಾಟೀಲ ಮತ್ತು ಸಂತೋಷ ಭರಮಶೆಟ್ಟೆ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಫುಲೆ, ಶರಣಬಸಪ್ಪ ಬಿರಾದಾರ, ದೇವೇಂದ್ರ ಆದೇಪ್ಪ , ಸೋಮನಾಥ ಭರಮಶೆಟ್ಟೆ , ಸಂಜುರೆಡ್ಡಿ ಮುಸಾನೆ, ರಾಜಪ್ಪ ಸೋಮಣ್ಣ , ಶಿವಶಂಕರ ತಾಂಬೋಳೆ, ತುಕಾರಾಮ ಮೇತ್ರೆ, ಬಂಡೆಪ್ಪ ಮಿರಕಾಲೆ, ಕಂಟೆಪ್ಪ ಮೇತ್ರೆ, ಮತಾಬ್ ಸಾಬ್, ಅಜೀಮ್ ಲಿಂಬೋರೆ, ಬಾಬುರಾವ್ ತಾಂಬೋಳೆ, ಕಲ್ಯಾಣಿ ಭರಮಶೆಟ್ಟೆ, ಸಂಗಮೇಶ ಭರಮಶೆಟ್ಟೆ ಸೇರಿ ಹಲವರಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ, ಉರ್ದು ಮಾಧ್ಯಮದ 500 ವಿದ್ಯಾರ್ಥಿಗಳಿಗೆ ʼಶಾಹೀನ್ ವಿದ್ಯಾರ್ಥಿ ವೇತನʼ
ಬ್ಯಾಂಡ್ ಭಾಜಾ, ಡಿಜೆ, ಡೊಳ್ಳು ಕುಣಿತ, ಯುವಕರ ನೃತ್ಯದೊಂದಿಗೆ ಮೆರವಣಿಗೆ ನಡೆಯಿತು. ರೈತರು ತಮ್ಮ ತಮ್ಮ ಎತ್ತುಗಳನ್ನು ಶೃಂಗರಿಸಿ, ಮಕ್ಕಳನ್ನು, ಯುವಕರನ್ನು ಹತ್ತಿಸಿಕೊಂಡು 40 ಎತ್ತಿನ ಗಾಡಿಯು ಮೆರವಣಿಗೆ ಉದ್ದಕ್ಕೂ ಗಮನ ಸೆಳೆದವು.
ಬಸವೇಶ್ವರ ವೃತ್ತದಿಂದ ಗಾಂಧಿ ವೃತ್ತಕ್ಕೆ ಹೋಗಿ ಬಸವೇಶ್ವರ ವೃತ್ತದ ಹತ್ತಿರದ ವೇದಿಕೆಗೆ ಬಂದಿತು.