ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಯುಗಾದಿ ಕವಿಗೋಷ್ಠಿ , ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ, ಸಂಗೀತ ಕಾರ್ಯಕ್ರಮ ಜರುಗಿತು.
ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಮಾತನಾಡಿ, ʼಇತ್ತೀಚಿನ ದಿನಗಳಲ್ಲಿ ನಮ್ಮ ಪೂರ್ವಜರ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಇಂದಿನ ತರಣರು ನಮ್ಮ ಮೂಲ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಸಾಹಿತಿಗಳು, ಕವಿಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಮುಂದಿನ ಜನಾಂಗಕ್ಕೆ ಸಾಹಿತ್ಯಿಕ ಸಂಸ್ಕೃತಿ ಪರಂಪರೆ ಮುಂದುವರೆಯಬೇಕು. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕವಿತೆ ರಚಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕುʼ ಎಂದು ತಿಳಿಸಿದರು.
ಡಾ.ಜಗದೇವಿ ತಿಬಶೆಟ್ಟಿ ಆಶಯ ನುಡಿಯಲ್ಲಿ, ʼಕವಿ-ಕವಯಿತ್ರಿಯರು ಹೆಚ್ಚಿನ ಓದು ಮೈಗೂಡಿಸಿಕೊಂಡು ಜ್ಞಾನ ಸಂಪಾದಿಸಿಕೊಳ್ಳಬೇಕು. ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ನಾಡಿನ ಹೆಸರಾಂತ ಲೇಖಕರ ಸಾಹಿತ್ಯ ಓದುವ ಮೂಲಕ ಅತ್ಯುತ್ತಮ ಕವಿತೆ ರಚನೆಗೆ ಮುಂದಾಗಬೇಕುʼ ಎಂದು ಸಲಹೆ ನೀಡಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪುಣ್ಯವತಿ ವಿಸಾಜಿ ಅವರು ಮಾತನಾಡಿ, ʼಆಳವಾದ ಅಧ್ಯಯನ ಹಾಗೂ ಅನುಭವಗಳಿಂದ ಸೊಗಸಾದ ಕಾವ್ಯ ರಚಿಸಬಹುದು. ಸಮಾಜದ ಆಗುಹೋಗುಗಳ ಕುರಿತು ಜವಾಬ್ದಾರಿಯುತವಾದ ಗಟ್ಟಿ ಸಾಹಿತ್ಯ ಬರಬೇಕುʼ ಎಂದರು.

ಸಾಹಿತಿ ರಘುಶಂಖ ಭಾತಂಬ್ರಾ ಅವರು ಎಂ.ಜಿ.ದೇಶಪಾಂಡೆ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು. ಪ್ರಮುಖರಾದ ವಿಜಯಕುಮಾರ್ ಸೋನಾರೆ, ಶಂಭುಲಿಂಗ ವಾಲ್ದೊಡ್ಡಿ, ವಿಶ್ವನಾಥ ಮುಕ್ತಾ, ವೀರಭದ್ರಪ್ಪ ಉಪ್ಪಿನ್, ಮೋಹನ ಪಾಟೀಲ್ ಮನ್ನಳ್ಳಿ ಎಂ.ಜಿ.ದೇಶಪಾಂಡೆ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಗಾಯಕರಾದ ರೇಖಾ ಸೌದಿ ಅವರಿಗೆ ʼಗಾಯಕಿ ಲತಾ ಮಂಗೇಶ್ಕರ್ ಪ್ರಶಸ್ತಿʼ ಮತ್ತು ಸಮಾಜ ಸೇವಕರಾದ ಸಂಗಮೇಶ ಬಿರಾದಾರ ಅವರಿಗೆ ʼಸಮಾಜ ಚೂಡಾಮಣಿ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.
ಕವಿಗೋಷ್ಠಿಯಲ್ಲಿ ಬಸವರಾಜ ದಯಾಸಾಗರ, ಜಗದೇವಿ ದುಬುಲಗುಂಡೆ, ರೂಪಾ ಪಾಟೀಲ, ಮಾಧುರಿ ಕುಲಕರ್ಣಿ, ಮಲ್ಲಿಕಾರ್ಜುನ ಸ್ವಾಮಿ ಸಂಗಮ, ಡಾ.ಸುಜಾತಾ ಹೊಸಮನಿ, ಅರವಿಂದ ಕುಲಕರ್ಣಿ, ಸಂಗಮೇಶ್ವರ ಜ್ಯಾಂತೆ, ರವಿದಾಸ್ ಕಾಂಬಳೆ, ಪ್ರಭು ಮಾಲೆ, ಸಂಗೀತಾ ಕಾಂಬಳೆ, ವೀರೇಶ್ವರಿ ಮೂಲಗೆ, ಚಂದ್ರಶೇಖರ ಸಿಂಧೆ ಅವರು ಸ್ವರಚಿತ ಕವಿತೆ ವಾಚಿಸಿದರು.
ಪ್ರಕಾಶ ಕುಲಕರ್ಣಿ ಮುಗನೂರು ಹಾಸ್ಯ ನಡೆಸಿಕೊಟ್ಟರು. ಕರಬಸಪ್ಪ ವಿಶ್ವಕರ್ಮ, ಮಲ್ಲಿಕಾರ್ಜುನ ರಾಂಪುರೆ, ಬಸವರಾಜ ಯರನಳ್ಳಿ, ಪವನ ಗೌಡ, ಗಂಗಮ್ಮ, ರಾಂಪುರೆ ಅಕ್ಕನ ಬಳಗದವರು ಜಾನಪದ, ಭಾವಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಆಸ್ತಾ ಬಚ್ಚನ್ ಬಾಲಕಿ ನೃತ್ಯ ನಡೆಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ರಂಜಾನ್ | ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ, ಸಚಿವ ಜಮೀರ್ ಭಾಗಿ
ಪ್ರಮುಖರಾದ ಅಂಕಿತಾ ಬಚ್ಚನ, ಆರ್.ಎಸ್.ಬಿರಾದಾರ, ಜಗನ್ನಾಥ ಯರನಳ್ಳಿ, ಮಹೇಶಕುಮಾರ ಮಜಗೆ, ಸುಧಾಕರ ಯರನಳ್ಳಿ, ಶಿವರಾಜ್ ಕಾಳಶೆಟ್ಟಿ, ರಮೇಶ ಇಟಗೆ, ಸುರೇಶ್ ಬಾಬು, ಬಸವರಾಜ ಮೂಲಗೆ, ರೇವಣಪ್ಪ ಮೂಲಗೆ ಸೇರಿದಂತೆ ಮತ್ತಿತರರಿದ್ದರು. ಪ್ರೇಮಾ ಅವಿನಾಶ ಸ್ವಾಗತಿಸಿದರು. ಶಿಲ್ಪಾ ರಾಯವಾಡೆ ಪ್ರಾರ್ಥನೆ ಗೀತೆ ಹಾಡಿದರು. ಪುಷ್ಪಾ ಪಾಟೀಲ್ ಸಂಗಡಿಗರು ನಾಡಗೀತೆ ನಡೆಸಿಕೊಟ್ಟರು. ಯೋಗೇಂದ್ರ ಯದಲಾಪೂರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಮಜಗೆ ನಿರೂಪಿಸಿದರು. ಬಾಬುರಾವ ಗೊಂಡಾ ವಂದಿಸಿದರು.