ಬೀದರ್ ವಿಶ್ವವಿದ್ಯಾಲಯದ ಸ್ನಾತಕ ಬಿಬಿಎ, ಬಿಸಿಎ, ಹಾಗೂ ಬಿಎಸ್ಸಿ ಎರಡನೇ ಸೆಮಿಸ್ಟರ್ ಪದವಿ ಫಲಿತಾಂಶವನ್ನು ಬೀದರ್ ವಿವಿ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಶನಿವಾರ ಘೋಷಿಸಿದರು.
ಬೀದರ್ ವಿವಿ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಮಾತನಾಡಿ, ‘ಎಲ್ಲರ ಸಹಕಾರದೊಂದಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಬಂದಿದೆ. ನೂತನ ವಿಶ್ವವಿದ್ಯಾಲಯವಾಗಿದ್ದರೂ ಸಹ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ ಫಲಿತಾಂಶ ನೀಡುವಲ್ಲಿ ಬೀದರ ವಿಶ್ವವಿದ್ಯಾಲಯ ಯಶಸ್ವಿಯಾಗಿದೆ’ ಎಂದರು.
ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ ಮಾತನಾಡಿ, ‘ಸಮಯಕ್ಕೆ ಸರಿಯಾಗಿ ಬೀದರ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸುತ್ತಿರುವುದು ಸಮಾಧಾನಕರ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಬೇರೆ ವಿವಿ ಹೋಲಿಸಿದರೆ ಬೀದರ ವಿವಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಎಲ್ಲಾ ಸಿಬ್ಬಂದಿಗಳು ಅಭಿನಂದನಾರ್ಹರು’ ಎಂದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಕೆ.ಎ.ಎಸ್.ಮಾತನಾಡಿ, ‘ನಿಗದಿತ ಸಮಯಕ್ಕೆ ಫಲಿತಾಂಶ ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಸೂಕ್ತ ಸಮಯಕ್ಕೆ ಫಲಿತಾಂಶದ ನೀಡುವುದು ಅವಶ್ಯಕತೆಯಿದೆ’ ಎಂದರು.
ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯ್ಕ.ಟಿ ಮಾತನಾಡಿ, ‘ಬೀದರ ವಿಶ್ವವಿದ್ಯಾಲಯದಲ್ಲಿ ಬಿಬಿಎ, ಬಿಸಿಎ, ಹಾಗೂ ಬಿಎಸ್ಸಿ ಸ್ನಾತಕ ಪದವಿಯ ಫಲಿತಾಂಶವು ಬಿಡುಗಡೆಗೊಳಿಸಿ ಬೀದರ ವಿವಿ ಮಾದರಿಯಾಗಿದೆ. ಪರೀಕ್ಷೆಗಳು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಸುಸೂತ್ರವಾಗಿ ನಡೆದು ಕಡಿಮೆ ಅವಧಿಯಲ್ಲಿ ಫಲಿತಾಂಶ ಕೊಡುವುದು ಒಂದು ಸವಾಲಿನ ಕಾರ್ಯ. ಆದರೂ ಎಲ್ಲರ ಸಹಕಾರದೊಂದಿಗೆ ಫಲಿತಾಂಶ ಪ್ರಕಟಿಸಿದ್ದು ಅತ್ಯಂತ ಸಂತೋಷದ ಸಂಗತಿ’ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಮಾರುತಿ ಕೋಳಿ ಆಯ್ಕೆ
ಬೀದರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಧ್ಯಾಪಕರಾದ ಡಾ.ಚೆನ್ನಕೇಶವಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.