ಬೀದರ್ ನಗರ ಹೊರವಲಯದ ನರಸಿಂಹ ಸ್ವಾಮಿ ಝರಣಿ ಸಮೀಪದ ಖಾಸಗಿ ಈಜುಕೊಳದಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ನಗರದ ಅಬ್ದುಲ್ ಫೈಜ್ ದರ್ಗಾದ ನಿವಾಸಿ ಸಯ್ಯದ್ ಅಫಾನ್ (19) ಮೃತ ಯುವಕ ಎಂದು ಗುರುತಿಸಲಾಗಿದೆ.
ಸಹೋದರರ ಜೊತೆ ಈಜಾಡಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಜಿಗಿಯುವ ವೇಳೆ ತಲೆಗೆ ಗಂಭೀರವಾಗಿ ಮುಳುಗಿ ಸಾವನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.