ಔರಾದ್ ಪಟ್ಟಣದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರ 301ನೇ ಜಯಂತಿ ಉತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು.
ತಾಲೂಕು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿ, “ಭಾರತದ ದಿಟ್ಟ ಹೋರಾಟಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಅವರು ಅನೇಕ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ” ಎಂದು ಹೇಳಿದರು.
“ಭಾರತದ ದೇಶದ ಸಂಸ್ಕೃತಿ ದ್ರಾವಿಡ ಸಂಸ್ಕೃತಿಯಾಗಿದೆ. ಶಿವನ ಆರಾಧಕರು ದ್ರಾವಿಡ ಸಂಸ್ಕೃತಿಯನ್ನು ಯಾವತ್ತೂ ಮರೆಯಬಾರದು. ಅಹಲ್ಯಾಬಾಯಿ ಹೋಳ್ಕರ್ ಅವರ ಆದರ್ಶಗಳನ್ನು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದೆ. ನಾವೆಲ್ಲರೂ ಅವರ ಚಿಂತನೆಗಳು ಪ್ರೇರಣೆಯಾಗಬೇಕಿದೆ” ಎಂದರು.
ಎಪಿಎಂಸಿ ಸಮೀಪದ ಕನ್ನಡಾಂಬೆ ವೃತ್ತದಲ್ಲಿ ಅಹಲ್ಯಾ ಬಾಯಿ ಹೊಳ್ಕರ್ ಅವರ ಭಾವಚಿತ್ರಕ್ಕೆ ಕಾರ್ಯಕ್ರಮದ ಗೌರವಾಧ್ಯಕ್ಷ ಗೌರವ ದೇಶಮುಖ ಅವರು ಪೂಜೆ ಸಲ್ಲಿಸಿದರು. ಬಳಿಕ ಎಪಿಎಂಸಿ ಕ್ರಾಸಿನಿಂದ ಅಹಲ್ಯಾಬಾಯಿ ಹೊಳ್ಕರ್ ಮಂದಿರದವರೆಗೆ ಭವ್ಯವಾದ ಅಲಂಕೃತದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಇದನ್ನೂ ಓದಿ : ಬೀದರ್ | ಕೇಂದ್ರ ಸರ್ಕಾರ ತೈಲ, ಗ್ಯಾಸ್, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಿಂಪಡೆಯಲು ಆಗ್ರಹ
ಈ ಸಂದರ್ಭದಲ್ಲಿ ಪ್ರಮುಖರಾದ ಲಕ್ಷ್ಮಣ ದೇವಕತ್ತೆ, ಬಾಲಾಜಿ ಟೌರೆ, ದಯಾನಂದ ಘೂಳೆ, ಸುಧಾಕರ್ ಕೊಳ್ಳುರ್, ಅನಿಲ ಸುಸ್ಲಾಡೆ, ಅನೀಲಕುಮಾರ ನಿರ್ಮಳೆ, ಅಭಿಷೇಕ್ ವಾಗ್ಮೊಡೆ, ನರ್ಸಿಂಗ್ ಸೋಲಂಕರ್, ನರ್ಸಿಂಗ ದೇವಕತ್ತೆ, ಅನಿಲ್ ವಾಡಿಕರ್, ಸಂತೋಷ್ ಕಾರಬಾರಿ, ಸಂದೀಪ್ ದೇವಕತ್ತೆ, ವಿಠಲ ನರೋಟೆ ಅನೇಕರಿದ್ದರು.





