ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.
ಬೀದರ್ ನಗರದ ಮಂಗಲಪೇಟ್ನ ಹೋಲಿ ಶೆಫರ್ಡ್ ಪ್ರೌಢ ಶಾಲೆಯಲ್ಲಿ ಈಚೆಗೆ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ನಡೆದ ವಿದ್ಯಾರ್ಥಿ ಪ್ರೇರಣೆ ಹಾಗೂ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಲು ಯೋಜನಾ ಬದ್ಧವಾಗಿ ಓದಬೇಕು. ಟಿವಿ, ಮೊಬೈಲ್, ದುಶ್ಚಟಗಳಿಂದ ದೂರ ಇರಬೇಕು. ದೇಶ ಹಾಗೂ ಸಮಾಜವನ್ನು ಪ್ರೀತಿಸಬೇಕು” ಎಂದು ಹೇಳಿದರು.
ಚರ್ಮ ರೋಗ ತಜ್ಞ ಡಾ.ಅಶೋಕುಮಾರ ಬಿ.ನಾಗೂರೆ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಅನೇಕ ಚರ್ಮ ರೋಗಗಳನ್ನು ದೂರ ಇರಿಸಬಹುದು. ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜಂಕ್ ಫುಡ್ ಸೇವಿಸಬಾರದು” ಎಂದು ಹೇಳಿದರು.
ಕಾರ್ಯಕ್ರಮ ಆಯೋಜಿಸಿದ್ದ ಡಾ.ದೇವಕಿ ನಾಗೂರೆ ಮಾತನಾಡಿ, “14 ವರ್ಷದ ಹೆಣ್ಣು ಮಕ್ಕಳು ಕ್ಯಾನ್ಸರ್ ತಡೆಗಟ್ಟುವ ಎಚ್.ಪಿ.ವಿ. ಲಸಿಕೆಯನ್ನು ತಪ್ಪದೆ ಪಡೆಯಬೇಕು. ಲಸಿಕೆ ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಔರಾದ-ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ: ಶಾಸಕ ಪ್ರಭು ಚವ್ಹಾಣ ಆಗ್ರಹ
ವೈದ್ಯಾಧಿಕಾರಿ ಡಾ. ವೀರೇಶ್ ಮೂಲಗೆ, ಶಾಲೆಯ ಪ್ರಾಚಾರ್ಯೆ ದ್ಯಾನಾ ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.





