ಬೀದರ್‌ | ತಪ್ಪು ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಿ : ಎಸ್ಪಿ ಪ್ರದೀಪ ಗುಂಟಿ

Date:

ಅಪರಾಧವು ಕೇವಲ ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಆತನ ಕುಟುಂಬ, ಸಮಾಜ ಹಾಗೂ ಮುಂದಿನ ಪೀಳಿಗೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಕ್ಷಣಿಕ ಕೋಪ, ದುಸ್ಸಾಹಸ ಅಥವಾ ತಪ್ಪು ನಿರ್ಧಾರದಿಂದ ಜೀವನವಿಡೀ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಯಾವುದೇ ತಪ್ಪು ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂದು  ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಕಿವಿಮಾತು ಹೇಳಿದರು.

- Advertisement -

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು, ಜಾನಪದ ಕಲಾವಿದರ ಬಳಗ (ರಿ), ಬೀದರ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬೀದರ ಜಿಲ್ಲಾ ಕಾರಾಗೃಹ ಕೇಂದ್ರದಲ್ಲಿ ಸೋಮವಾರ “ಜೈಲಲ್ಲಿ ಜಾನಪದ” ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಕೈದಿಗಳು ಶಿಕ್ಷೆಯನ್ನು ಕೇವಲ ದಂಡನೆಯಾಗಿ ಪರಿಗಣಿಸದೆ, ತಮ್ಮ ಬದುಕನ್ನು ತಿದ್ದಿಕೊಳ್ಳುವ ಅವಕಾಶವನ್ನಾಗಿ ಸ್ವೀಕರಿಸಬೇಕು. ಮನಃ ಸಾಕ್ಷಿಯೊಂದಿಗೆ ಆತ್ಮಾವಲೋಕನ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಮರಳಬೇಕು. ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಬದುಕಿದಾಗ ಮಾತ್ರ ಗೌರವ, ವಿಶ್ವಾಸ ಮತ್ತು ಸ್ವಾಭಿಮಾನ ದೊರೆಯುತ್ತದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಮತ್ತೊಂದು ಅವಕಾಶ ಸಿಗುತ್ತದೆ; ಅದನ್ನು ಸದುಪಯೋಗಪಡಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, “ಪ್ರತಿಯೊಬ್ಬ ಮನುಷ್ಯನು ತಾಯಿಯ ಗರ್ಭದಿಂದ ಜನಿಸುವಾಗ ನಿರಪರಾಧಿಯಾಗಿಯೇ ಜನಿಸುತ್ತಾನೆ. ಯಾರೂ ಅಪರಾಧಿಯಾಗಿ ಅಥವಾ ಆಯುಧ ಹಿಡಿದು ಹುಟ್ಟುವುದಿಲ್ಲ. ಸಂದರ್ಭ, ಪರಿಸ್ಥಿತಿ, ತಪ್ಪು ಸಂಗಡಿಗರು ಹಾಗೂ ತಪ್ಪು ನಿರ್ಧಾರಗಳಿಂದ ಕೆಲವರು ಅಪರಾಧದ ದಾರಿಯನ್ನು ಹಿಡಿಯುತ್ತಾರೆ. ಆದರೆ ಮನುಷ್ಯನ ಬದುಕಿನಲ್ಲಿ ಪರಿವರ್ತನೆಗೆ ಯಾವಾಗಲೂ ಅವಕಾಶವಿದೆ” ಎಂದು ಹೇಳಿದರು.

“ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮನುಷ್ಯನಲ್ಲಿಯೇ ಅಡಗಿವೆ. ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕು. ತತ್ವಪದ, ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬದುಕಿನ ಮೌಲ್ಯಗಳನ್ನು ಬೋಧಿಸುವ ಶಕ್ತಿಯುತ ಮಾಧ್ಯಮಗಳಾಗಿವೆ. ಇಂತಹ ಕಾರ್ಯಕ್ರಮಗಳು ಕೈದಿಗಳಲ್ಲಿ ಹೊಸ ಚೈತನ್ಯ, ಆತ್ಮವಿಶ್ವಾಸ ಹಾಗೂ ಉತ್ತಮ ಬದುಕಿನ ಆಶಯವನ್ನು ಮೂಡಿಸುತ್ತವೆ” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿ, “ಜಾನಪದ ಕಲೆ, ಜನಪದ ಸಾಹಿತ್ಯ ಹಾಗೂ ತತ್ವಪದಗಳಲ್ಲಿರುವ ಜೀವನ ಮೌಲ್ಯಗಳನ್ನು ಕೈದಿಗಳಿಗೆ ಪರಿಚಯಿಸಿ, ಅವರಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಜಾನಪದ ಹಾಗೂ ತತ್ವಪದ ಕಲಾವಿದರು ತಮ್ಮ ವಿಶಿಷ್ಟ ಕಲಾ ಪ್ರದರ್ಶನಗಳ ಮೂಲಕ ಕೈದಿಗಳು ಹಾಗೂ ಪ್ರೇಕ್ಷಕರ ಮನ ಗೆದ್ದರು. ಜಾನಪದ ಗೀತೆಗಳು, ತತ್ವಪದಗಳು, ಗೀಗಿ ಪದಗಳು ಹಾಗೂ ಸಾಂಪ್ರದಾಯಿಕ ಜಾನಪದ ನೃತ್ಯಗಳ ಮೂಲಕ ಮಾನವೀಯ ಮೌಲ್ಯಗಳು, ಸಾಮಾಜಿಕ ಸಾಮರಸ್ಯ, ಜೀವನದ ಸತ್ಯ ಹಾಗೂ ಪರಿವರ್ತನೆಯ ಸಂದೇಶವನ್ನು ಸಾರಲಾಯಿತು.

WhatsApp Image 2026 07 14 at 5.37.24 AM
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿದರು.

ಕಲಾವಿದರಾದ ಶಂಭುಲಿಂಗ ವಾಲ್ಗೊಡ್ಡಿ, ಮಾರುತಿ ಕೋಳಿ, ಮಧುಕರ್ ಘೋಡಕೆ ಹಾಗೂ ಸಂಗಮೇಶ ಬೆಲ್ದಾಳ ಅವರು ಜಾನಪದ ಗಾಯನವನ್ನು ಪ್ರಸ್ತುತಪಡಿಸಿದರು. ದಿಲೀಪ ಕಾಡವಾದ, ಮಲ್ಲಿಕಾರ್ಜುನ ಸ್ವಾಮಿ, ಶಂಕರ ಚೊಂಡಿ ಹಾಗೂ ಸಂಜುಕುಮಾರ ಸ್ವಾಮಿ ಮತ್ತು ತಂಡ ತತ್ವಪದ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ದೇವದಾಸ ಚಿಮಕೋಡ ಅವರ ತಂಡ ಗೀಗಿ ಪದ ಹಾಗೂ ಶಾಂತಮ್ಮಾ ವಾಡೆ ಅವರ ತಂಡ ಸಾಂಪ್ರದಾಯಿಕ ಜಾನಪದ ಕುಣಿತವನ್ನು ಮನೋಜ್ಞವಾಗಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ಕಾರ್ಯಕ್ರಮ ಉದ್ದಕ್ಕೂ ಕೈದಿಗಳು ಕಲಾವಿದರ ಗಾಯನ ಹಾಗೂ ನೃತ್ಯಗಳನ್ನು ಆಸಕ್ತಿಯಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಾನಪದ ಕಲೆ ಮತ್ತು ತತ್ವಪದಗಳಲ್ಲಿರುವ ಬದುಕಿನ ಮೌಲ್ಯಗಳು ಹಾಗೂ ನೈತಿಕ ಸಂದೇಶಗಳು ಕೈದಿಗಳ ಮನಸ್ಸನ್ನು ಸ್ಪರ್ಶಿಸಿದವು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕೈದಿಗಳಲ್ಲಿ ಮಾನಸಿಕ ನೆಮ್ಮದಿ, ಆತ್ಮಾವಲೋಕನ ಹಾಗೂ ಉತ್ತಮ ಬದುಕಿನ ಸಂಕಲ್ಪ ಮೂಡಿಸಲು ಸಹಕಾರಿಯಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಇದನ್ನೂ ಓದಿ : ಬೀದರ್‌ | ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನೇತ್ರತ್ವದಲ್ಲಿ ಎಸ್‌ಐಆರ್ ಜಾಗೃತಿ ಜಾಥಾ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಜಿಲ್ಲಾ ಕಾರಾಗೃಹ ಕೇಂದ್ರದ ಅಧೀಕ್ಷಕ ದತ್ತಾತ್ರಿ ಮೇಧಾ, ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಅಭಿಯಂತರ ಸುನೀಲ ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸೇರಿದಂತೆ ಬೀದರ ಜಿಲ್ಲಾ ಕಾರಾಗೃಹ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಿಯಮಿತ ಜಾನಪದ ಕಲಾವಿದರು, ಆಹ್ವಾನಿತರು  ಭಾಗವಹಿಸಿದರು, ಕೈದಿಗಳು ಮತ್ತಿತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ  ಸ್ವಾಗತಿಸಿದರು. ಚಂದ್ರಕಾಂತ ಹಳ್ಳಿಖೇಡಕರ್ ನಿರೂಪಿಸಿದರು. ಪತ್ರಕರ್ತ ಸುನೀಲ ಭಾವಿಕಟ್ಟಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...