ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟವಾಗಿದ್ದು, ಜಿಲ್ಲೆಗಳ ರ್‍ಯಾಂಕ್ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಮೂರು ಸ್ಥಾನ ಮೇಲಕ್ಕೇರಿದೆ.ಈ ಬಾರಿ ಜಿಲ್ಲೆಗೆ ಒಟ್ಟು ಶೇ 92.18ರಷ್ಟು ಫಲಿತಾಂಶ ಬಂದಿದೆ.
ಈ ಬಾರಿ ಬೀದರ್ ಜಿಲ್ಲೆಯು ಫಲಿತಾಂಶ ಹಾಗೂ ಸ್ಥಾನ ಎರಡರಲ್ಲೂ ಕೊಂಚ ಸುಧಾರಣೆ ಕಂಡಿದೆ. ಕಳೆದ ವರ್ಷ 31ನೇ ಸ್ಥಾನದಲ್ಲಿದ್ದು ಶೇ 73.35ರಷ್ಟು ಫಲಿತಾಂಶ ಬಂದಿತು. ಈ ಬಾರಿ 3 ಸ್ಥಾನ ಜಿಗಿತ ಕಂಡಿದೆ. ಬೀದರ್ ಜಿಲ್ಲೆ 2023ರಲ್ಲಿ 34ನೇ, 2024ರಲ್ಲಿ 33ನೇ ಹಾಗೂ 2025ರಲ್ಲಿ 31ನೇ ಸ್ಥಾನದಲ್ಲಿತ್ತು. ಈ ಬಾರಿ 28ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಈ ಬಾರಿ ಪರೀಕ್ಷೆಗೆ ಒಟ್ಟು 23,047 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 21,242 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 18.83ರಷ್ಟು ಸುಧಾರಣೆ ಕಂಡಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಳೆದ ಬಾರಿ ಬೀದರ್ ಮೂರನೇ ಸ್ಥಾನದಲ್ಲಿತ್ತು, ಈ ಬಾರಿ ವಿಜಯನಗರ ಮೊದಲ ಸ್ಥಾನದಲ್ಲಿದ್ದರೆ, ಬೀದರ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ, ರಾಜ್ಯದ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ : BREAKING NEWS | SSLC ಫಲಿತಾಂಶ ಪ್ರಕಟ: ಶೇ. 94.01 ವಿದ್ಯಾರ್ಥಿಗಳು ಉತ್ತೀರ್ಣ





