ಬೀದರ್ | ಪೋಷಕರಿಲ್ಲದ ಪ್ರತಿಭಾವಂತ ಬಾಲಕಿಯ ಶಿಕ್ಷಣಕ್ಕೆ ಬೇಕಿದೆ ಸಹಾಯಹಸ್ತ

Date:

Advertisements
  • ಸಹಾಯ ಮಾಡಲು ಇಚ್ಛಿಸುವವರು 9353419036 ಸಂಪರ್ಕಿಸಿ
  • ಮೊಮ್ಮಗಳನ್ನು ಓದಿಸುವ ಆಶಯ ಆದರೆ ಆರ್ಥಿಕವಾಗಿ ದುರ್ಬಲರು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಯೊಬ್ಬರು ಪದವಿ ಸೇರಲು ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ ಎದುರಾಗಿದ್ದು, ಶಿಕ್ಷಣ ಅರ್ಧಕ್ಕೆ ಕೈ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದರ್ ಜಿಲ್ಲೆಯ ಔರಾದ ತಾಲೂಕಿನ ಯನಗುಂದಾ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿ, ಬಸವಜ್ಯೋತಿ ಬಾಬುಗೊಂಡ ಎಂಬುವವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92.48ರಷ್ಟು ಅಂಕ ಗಳಿಸಿದ್ದಾರೆ. ಆದರೆ, ಪದವಿ ಸೇರಲು ಆಕೆಯ ಬಳಿ ಹಣವಿಲ್ಲ. ಪ್ರವೇಶಾತಿ ಮಾಡಿಸಲು ಆಕೆಯ ಪೋಷಕರಿಲ್ಲ.

ಹುಟ್ಟುವ ಮುನ್ನವೇ ತಂದೆಯನ್ನು ಕಳೆದುಕೊಂಡ ಬಸವಜ್ಯೋತಿ ಬಾಬುಗೊಂಡ ಅಜ್ಜಿ ಮತ್ತು ತಾತನೊಡನೆ ಬೆಳೆದರು. ವಯಸ್ಸಾದ ಜೀವಕ್ಕೆ ಮೊಮ್ಮಗಳನ್ನು ಓದಿಸುವ ಆಶಯವಿದೆ. ಆದರೆ, ದುಡಿದು ಪದವಿಗೆ ಸೇರಿಸಲು ತ್ರಾಣವಿಲ್ಲ. ಪ್ರತಿಭಾವಂತೆ ಆಗಿದ್ದರೂ ಮುಂದೆ ವಿದ್ಯಾಭ್ಯಾಸ ಮಾಡಿಸಲಾಗದ ಅಸಹಾಯಕ ಪರಿಸ್ಥಿತಿ. ಹೊಟ್ಟೆ ತುಂಬಿದರೆ ಸಾಕು ಎನ್ನುವ ಬಡತನ ಅವರಲ್ಲಿ ಮನೆ ಮಾಡಿದೆ.

Advertisements

ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಕಾಂಗ್ರೆಸ್ ಗ್ಯಾರಂಟಿಗಳ ಜಾರಿಗೆ ಮೊದಲ ಆದ್ಯತೆ: ಪ್ರಿಯಾಂಕ್‌ ಖರ್ಗೆ

ಚೆನ್ನಾಗಿ ಓದಬೇಕು, ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಸಲ್ಲಿಸಬೇಕು ಎಂದು ಕನಸಿನ ಮೂಟೆ ಹೊತ್ತ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರೆಸುವುದು ಹೇಗೆ ಎಂಬುದೇ ಜಟಿಲವಾದ ಪ್ರಶ್ನೆಯಾಗಿದೆ. ಪ್ರತಿಭೆವುಳ್ಳ ಬಸವಜ್ಯೋತಿ ಬಾಬುಗೊಂಡ  ಅವರಿಗೆ ಮುಂದಿನ ಶಿಕ್ಷಣ ಜೀವನಕ್ಕೆ ಸಹಾಯ ಮಾಡಲು ಇಚ್ಛಿಸುವವರು ಅವರ ದೂರವಾಣಿಗೆ 9353419036 ಕರೆ ಮಾಡಿ ಮಾಹಿತಿ ಪಡೆಯಬಹುದು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಮಳೆ ಅಬ್ಬರ : ಮೂರು ದಿನಗಳಲ್ಲಿ 138 ಮನೆಗಳಿಗೆ ಹಾನಿ, 7,775 ಹೆಕ್ಟೇರ್‌ ಬೆಳೆ ನಾಶ!

ಬೀದರ್‌ ಜಿಲ್ಲಾದ್ಯಂತ ಕಳೆದ ಮೂರು ದಿನಗಳಲ್ಲಿ ಮಳೆ ಅಬ್ಬರದಿಂದ ಜಿಲ್ಲೆಯಾದ್ಯಂತ 138...

ಅತಿವೃಷ್ಟಿ ಹಾನಿ | ಔರಾದ ಕ್ಷೇತ್ರಕ್ಕೆ ವಿಶೇಷ ಅನುದಾನ ಕೊಡಿ : ಅಧಿವೇಶನದಲ್ಲಿ ಶಾಸಕ ಪ್ರಭು ಚವ್ಹಾಣ ಆಗ್ರಹ

ಬೀದರ್‌ ಜಿಲ್ಲೆಯ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಲ್ಲಿ ಸುರಿದ...

ಬೀದರ್‌ | ಸೋರುತಿಹದು ನಿಟ್ಟೂರ(ಬಿ) ನಾಡ ಕಚೇರಿ, ಆವರಣದಲ್ಲಿ ಮಳೆ ನೀರು!

ಬೀದರ್‌ ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ...

ಬೀದರ್‌ | ವಿನಯ ಮಾಳಗೆಗೆ ರಾಜ್ಯ ಯುವ ಪ್ರಶಸ್ತಿ ಪ್ರದಾನ

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರೂ ಆದ ಬೀದರ್‌ನ ಟೀಂ ಯುವಾ...

Download Eedina App Android / iOS

X