ಯಾದಗಿರಿ | ಬಸವಣ್ಣನವರಿಗೆ ಬಿಜ್ಜಳ ಆಪ್ತರಾಗಿದ್ದರು : ಮಹಾಂತೇಶ ನವಲಕಲ್

Date:

Advertisements

ಬಸವಣ್ಣನವರ ಸದು ವಿನಯ ಹಾಗೂ ನಿಷ್ಠುರವಾಸ ಮಾತುಗಳು ಕಲ್ಯಾಣ ರಾಜ್ಯ ಕಟ್ಟಲು ಸಾಧ್ಯವಾಯಿತು. ಬಿಜ್ಜಳನ ಮಗ ಸೋವಿದೇವನ ಮಹತ್ವಾಕಾಂಕ್ಷೆಯಿಂದಾಗಿ ಪಟ್ಟಭದ್ರರು ಶರಣರನ್ನು ಹಾಗೂ ವಚನ ಸಾಹಿತ್ಯವನ್ನು ನಾಶಪಡಿಸಲು ಬೆನ್ನತ್ತಿದ್ದರು ಎಂದು ಹಿರಿಯ ಚಿಂತಕ ಮಹಾಂತೇಶ ನವಲಕಲ ಹೇಳಿದರು.

ಶಹಾಪುರದಲ್ಲಿ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ವತಿಯಿಂದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ತಿಂಗಳ ಬಸವ ಬೆಳಕು -121ರ ಕಾರ್ಯಕ್ರಮದಲ್ಲಿ ಶರಣ ಸಿದ್ದಲಿಂಗಪ್ಪ ಕಾಕನಾಳೆ ಮತ್ತು ಸರಸ್ವತಿ ಕಾಕನಾಳೆ ಸ್ಮರಣೋತ್ಸವ ನಿಮಿತ್ತದ ಸಭೆಯಲ್ಲಿ ಭಾಗವಹಿಸಿ ಕಲ್ಯಾಣ ಕ್ರಾಂತಿ ಎಂಬ ವಿಷಯ ಕುರಿತು ಮಾತನಾಡಿದರು.

ʼಶರಣರ ಚಳುವಳಿ ಹನ್ನೆರಡನೆಯ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಲು ಸಾಧ್ಯವಾಯಿತು. ತಳ ಸಮೂಹದಿಂದ ಬಂದಿದ್ದ ಬಿಜ್ಜಳ ಚಾಲುಕ್ಯ ತೈಲಪನ ಮಾಂಡಲಿಕನಾಗಿ ನಂತರ ಸ್ವತಃ ತಾನೆ ಪಟ್ಟಕಟ್ಟಿಕೊಂಡಾಗ ಬಸವಣ್ಣನವರ ಸಹಕಾರ ಅತ್ಯಗತ್ಯವಾಗಿತ್ತು. ವಚನ ಸಾಹಿತ್ಯ ಮತ್ತು ಶರಣರ ವಾಸ್ತವ ಬದುಕು ಪರಾವಲಂಬಿ ಜೀವಿಗಳಿಗೆ ನುಂಗದ ತುತ್ತಾಯಿತು. ಹರಳಯ್ಯ ಮಧುವರಸರ ಕುಟುಂಬ ಸಂಬಂಧವನ್ನು ಕಂಡು ಪುರೋಹಿತರು ಕೆಂಡಾಮಡಲವಾದರು. ಬಸವಣ್ಣ ಮತ್ತು ಬಿಜ್ಜಳ ಸ್ನೇಹ ಅನಿವಾರ್ಯವಾಗಿ ಕಡಿದು ಹೋಯಿತು. ಇಂತಹ ಸತ್ಯಗಳು ಇಲ್ಲಿಯವರೆಗೆ ದೊರೆತಿರುವ ಶಾಸನಗಳೇ ಸಾಕ್ಷಿʼ ಎಂದು ವಿವರಿಸಿದರು.

Advertisements

ಶ್ರೀಶೈಲ ಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ಲಿಂಗೈಕ್ಯವಾದ ಸಂಗತಿ ಕೇಳಿ ಆ ನೋವಿನಲ್ಲಿಯೇ ಕೊನೆಯ ಉಸಿರು ಎಳೆದ ಸಂಗತಿ ಅವರೇ ಬರೆದ ಚರಮಗೀತೆಯಲ್ಲಿ ಕಾಣಬಹುದಾಗಿದೆ. ಇತಿಹಾಸವನ್ನು ಓದಿ, ಲಿಂಗಾಯತರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.

ಪತ್ರಕರ್ತ ಪ್ರಕಾಶ ದೊರೆ ಮಾತನಾಡಿ, ʼಬಸವಮಾರ್ಗದ ಪರಿಚಯ ಮಾಡಿಕೊಟ್ಟು ಸತ್ಯ ನ್ಯಾಯದ ಪರವಾಗಿ ನಿಲ್ಲಲು ಮತ್ತು ಜನಸಾಮಾನ್ಯರ ಬದುಕಿನ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಮೌಲ್ಯಗಳನ್ನು ಕಲಿಸಿದವರು ಲಿಂಗಣ್ಣ ಸತ್ಯಂಪೇಟೆಯವರುʼ ಎಂದು ಅಭಿಪ್ರಾಯಪಟ್ಟರು.

ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ʼಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಆತ್ಮೀಯತೆ ಮರೆತು ಬಿಡುತ್ತಿದ್ದೇವೆ. ಸತ್ಯ ತುಂಬಾ ಕಠೋರವಾಗಿರುತ್ತದೆ. ಆದರೆ ಅದು ಸಮಾಜವನ್ನು ತಿದ್ದುತ್ತದೆ. ಸತ್ಯವನ್ನು ಪ್ರತಿಪಾದಿಸದಿದ್ದರೆ ನಮ್ಮ ಸಮಾಜ ಕಣ್ಣ ಮುಂದೆ ಕೊಳೆತು ಹೋಗುತ್ತದೆ. ಶರಣರ ಮಾರ್ಗವನ್ನು ನಾವು ಅನುಸರಿಸಿ ಸಮಾಜದ ಓರೆಕೋರೆಗಳನ್ನು ತಿದ್ದಬೇಕುʼ ಎಂದು ತಿಳಿಸಿದರು.

ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ʼಲಿಂ.ಸಿದ್ಧಲಿಂಗಪ್ಪ ಕಾಕನಾಳೆ ಸಮಾಜ ಸೇವೆಯೆನನ್ನ ಗುರಿ ಎಂದು ದುಡಿದವರು. ಸಹಕಾರ ಕ್ಷೇತ್ರದಲ್ಲಿ ಅವರದು ಅದ್ವಿತೀಯ ಹೆಸರು. ಪ್ರಾಮಾಣಿಕತೆ, ಸಾಮಾಜಿಕ ಕಾಳಜಿಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕಾಕನಾಳೆ ನಮ್ಮೆಲ್ಲರಿಗೂ ಆದರ್ಶʼ ಎಂದು ತಿಳಿಸಿದರು.

ಫಜಲುದ್ದೀನ್ ರಹಮಾನ , ಮಹೇಶ ಪತ್ತಾರ ಹಾಗೂ ಬಸವಮಾರ್ಗದ ಚಿಣ್ಣರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಾಂತಾ ಗಿರೀಶ ಕಾಕನಾಳೆ ಭಾಲ್ಕಿ ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ಆನ್‌ಲೈನ್ ಗೇಮಿಂಗ್‌ : ಹಣ ಕಳೆದುಕೊಂಡ ಯುವಕ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಹೇರುಂಡಿ, ಶಿವಯೋಗಪ್ಪ ಮುಡಬೂಳ, ಮಲ್ಲಿಕಾರ್ಜುನ ಗುಡಿ, ಭೀಮಣ್ಣ ಮೇಟಿ, ಷಣ್ಮುಖ ಸಾಹು, ಶಿವಕುಮಾರ ಆವಂಟಿ, ಬಸವರಾಜ ಆನೇಗುಂದಿ, ಅಕ್ಕಮಹಾದೇವಿ ಬಳಗ ಶಹಾಪುರ,ಅಡಿವೆಪ್ಪ ಜಾಕಾ, ನಾಗಪ್ಪ ಬೊಮ್ಮನಳ್ಳಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದರಾಮ ಹೊನ್ಕಲ್, ಹಂಪಯ್ಯ ಚಂದ್ರಕಲಾ ಕೆಂಭಾವಿ, ರೇಖಾ ಯಡ್ರಾಮಿ, ಖಾಜಾ ಪಟೇಲ್, ತಿಪ್ಪಣ್ಣ ಜಮಾದಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಪ್ಪ ನಾಡಗೌಡ, ದೇವಿಂದ್ರಪ್ಪ ಬಡಿಗೇರ, ವಿರೂಪಾಕ್ಷಿ ಸಿಂಪಿ, ಭಂಡಾರಿ ವಕೀಲ,ಚೆನ್ನಪ್ಪ ಗುಂಡಾನೋರ, ಮಲ್ಲಣ್ಣ ಶಿರವಾಳ, ಭೀಮರಾಯ ಶಿರವಾಳ, ಸಿದ್ದಲಿಂಗಪ್ಪ ಆನೇಗುಂದಿ, ಗಣೇಶ ನಗರದ ಸಮಸ್ತ ಬಸವ ಬಳಗದವರು ಹಾಜರಿದ್ದರು. ಚೇತನ ಮಾಲಿ ಪಾಟೀಲ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಶಿವಕುಮಾರ ಕರದಳ್ಳಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X