ಬೈಕ್ ಸವಾರ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಕಡೂರು ಬಳಿಯ ವಿಮಾನ ನಿಲ್ದಾಣದ ಸಮೀಪ ತಡರಾತ್ರಿ 12.30ರಲ್ಲಿ ನಡೆದಿದೆ.
ನಿಶ್ಚಿತ್(20) ಮೃತ ದುರ್ದೈವಿ. ಮದುವೆಯೊಂದಕ್ಕೆ ಹೋಗಿದ್ದ ರಾತ್ರಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯುವಕ ಸ್ಥಳದಲ್ಲೇ ಸಾಪನ್ನಪ್ಪಿದ್ದಾನೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಯುವ ಪ್ರೇಮಿಗಳನ್ನು ಅಪರಾಧಿಗಳಂತೆ ನೋಡುವುದೇಕೆ?
ಶಿವಮೊಗ್ಗದ ತುಂಗಾ ಪೊಲೀಸ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.