ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಾಕಾರಿ ಹೇಳಿಕೆ ಮತ್ತು ಏಕವಚನದಲ್ಲಿ ನಿಂದಿಸಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಶಾಸಕ ಜೆ.ಟಿ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀಳಗಿಯ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಅನಂತಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರಣಾಡಗೌಡ್ರು, “ರಾಮಮಂದಿರ ಕಟ್ಟುತ್ತೇವೆಂದು ಬಿಜೆಪಿಗರು ರಾಮನನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಆದರೆ, ನಾವು ನಿಜವಾದ ಹಿಂದುಗಳು. ನಾವು ಕೆಲಸ ಮಾಡುತ್ತೇವೆ. ನಮ್ಮ ಕೆಲಸ ನೋಡಿ ಮತ ನೀಡಿ ಅಂತ ಜನರನ್ನು ಕೇಳುತ್ತೇವೆ” ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಆರ್ ಪಾಟೀಲ್, ಶ್ರೀಮಂತ ಬಸಪ್ರಭು ಸರನಾಡಗೌಡ, ಹನಮಂತ ಕಾಖಂಡಕಿ, ಅದೃಷ್ಯಪ್ಪ ದೇಸಾಯಿ, ಬಸವರಾಜ್ ಹಳ್ಳದಮಣಿ, ಅಬುಷಮಾ ಕಾಜೀ, ಅನಿಲ್ ಗಚ್ಚಿನಮಣಿ, ಮಹಾದೇವ್ ಹಾದಿಮನಿ, ಸಿದ್ದು ಸಾರಾವಾರಿ ಸೇರಿದಂತೆ ಹಲವರು ಇದ್ದರು.
ಧರ್ಮ – ಸಂಸ್ಕೃತಿ – ಆಚಾರ – ವಿಚಾರ – ಇತಿಹಾಸಗಳ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ , ಕಾಂಗ್ರೆಸ್ ನಾಯಕ ಹಾಗೂ ಸಂಸದರೂ ಆಗಿರುವ ರಾಹುಲ್ ಗಾಂಧಿಯವರನ್ನು ಕೆಲವು ತಿಂಗಳುಗಳ ಹಿಂದೆ ‘ಮೂರ್ಖರ ನಾಯಕ ‘ ಎಂದು ಝರಿದಿದ್ದರು.
ರಾಹುಲ್ ಗಾಂಧಿಯವರನ್ನು ‘ ಮೂರ್ಖ ‘ ಎಂದು ಹೀಗಳಿಯುವುದು ಅವರ ಮಾತಿನ ಮುಖ್ಯ ಉದ್ದೇಶವಿದ್ದಿರಬೇಕು. ಆದರೆ ಟೀಕಿಸುವ ಭರದಲ್ಲಿ ಅವರಾಡಿದ ‘ಮೂರ್ಖರ ನಾಯಕ ‘ ಎಂಬ ಅತ್ಯಂತ ಕೆಟ್ಟ ಪದ ರಾಹುಲ್ ಗಾಂಧಿಯವರನ್ನು ಮೆಚ್ಚಿ ಬೆಂಬಲಿಸುವ ಕೋಟ್ಯಂತರ ಜನರ ಮನಸ್ಸನ್ನು ಘಾಸಿಗೊಳಿಸಿತು.
ರಾಹುಲ್ ಗಾಂಧಿಯವರನ್ನು ಮಾತ್ರವಲ್ಲ , ಅವರ ಕೋಟ್ಯಂತರ ಬೆಂಬಲಿಗರನ್ನು ಮೂರ್ಖರು ಎಂದು ಝರಿದ ಮೋದಿ ಅವರ ಈ ಮಾತುಗಳನ್ನು ಸುಸಂಸ್ಕೃತರೆಲ್ಲರೂ ಖಂಡಿಸಲೇಬೇಕು.