ರಕ್ತದಾನ ಎಲ್ಲದ ದಾನಕ್ಕೂ ಶ್ರೇಷ್ಠ ಮತ್ತು ಮಹಾ ಜೀವದಾನವಾಗಿದೆ ಎಂದು ಸ್ಪಂದನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮುತ್ತಣ್ಣ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ನಗರದ ನಾರಾಯಣ ಆಸ್ವತ್ರೆಯ ಆವರಣದಲ್ಲಿ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಅಪಘಾತ, ಎಲ್ಲರಲ್ಲೂ ಅನಾರೋಗ್ಯ ಕಾಡುತ್ತಿದ್ದು ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ಯುವಕರು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸುವ ಕೆಲಸ ಮಾಡುವ ಮೂಲಕ ಸಮಾಜಮುಖಿಯಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ತಮ್ಮ ವಿಶ್ವ ಮಾನವ ತತ್ವಗಳನ್ನು ಮನುಕುಲಕ್ಕೆ ಸಾರಿದ ಅವರ ಆದರ್ಶ ಬದುಕು, ಬರಹಗಳು ಸರ್ವರಿಗೂ ದಾರಿ ದೀಪವಾಗುತ್ತದೆ. ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ತುಂಬುವ ವಿಚಾರ ಸ್ವಾತಂತ್ರ್ಯಕ್ಕೆ ಕರೆಕೊಟ್ಟ ಮಹಾಕವಿ ಕುವೆಂಪು ಒಂದು ದೈತ್ಯ ಪ್ರತಿಭೆ, ಹಲವು ಪ್ರಥಮತೆಗೆ ಬುನಾದಿ ಹಾಕಿ ಕನ್ನಡ ನಾಡು ಹಾಗೂ ನುಡಿ ಬಗೆಗೆ ಅಪಾರ ಪ್ರೇಮವನ್ನು ಹೊಂದಿದ್ದವರು, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲು ಕೈಯಾಡಿಸಿದ ಅವರು ರೈತರನ್ನು ನೇಗಿಲಯೋಗಿ ಎಂದು ಕರೆದ ರಸಋಷಿ ಅವರ ಸಾಹಿತ್ಯವನ್ನು ಅಭ್ಯಾಸ ಮಾಡುತ್ತಾ ಅವರ ಆದರ್ಶಗಳನ್ನು ಜೀವನನುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ವಿಶ್ವಮಾನವರಾಗಿ ಬೆಳೆಯಬೇಕು ಎಂದರು.
ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಪಟೇಲ್ ಸಿ.ರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಆಯೋಜಿಸುವ ಜನ ಸಾಮಾನ್ಯರಿಗೆ ಅವಶ್ಯಕವಿರುವ ರಕ್ತದಾನ ಶಿಬಿರಗಳು ಸದಾ ಕಾಲ ಕೈಜೋಡಿಸಿ, ಸಹಕಾರ ನೀಡುವುದಾಗಿ ತಿಳಿಸಿದರು.
ಜೀವಾಮೃತ ರಕ್ತ ನಿಧಿ ಮಾಲೀಕ ವಿ.ಸಿ.ಚಂದ್ರೇಗೌಡ ಮಾತನಾಡಿ, ಅಪಘಾತ ಮತ್ತು ಮಹಿಳೆಯರು ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ಹಲವರು ಪ್ರಾಣ ಕಳೆದುಕೊಂಡ ಸನ್ನಿವೇಶ ನೋಡಿ ಜೀವಾಮೃತ ರಕ್ತ ನಿಧಿ ಸ್ಥಾಪಿಸಿದ್ದು, ಸರಕಾರ ನಿಗಧಿ ಮಾಡಿರುವ ದರದಲ್ಲಿ ರಕ್ತ ನೀಡಲಾಗುತ್ತಿದ್ದು, ರಕ್ತ ನೀಡಿದ ದಾನಿಗಳಿಗೆ ತುರ್ತ ಸಮಯದಲ್ಲಿ ನಮ್ಮ ರಕ್ತ ನಿಧಿ ಉಚಿತವಾಗಿ ರಕ್ತ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾರಾಯಣ ಆಸ್ವತ್ರೆಯ ಮಾಲೀಕರಾದ ಡಾ.ಮಧಸೂದನ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಿರತರವಾಗಿ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರಗಳಿಗೆ ಪ್ರತಿ ಹಂತದಲ್ಲು ಎಲ್ಲ ರೀತಿಯಲ್ಲಿ ಸಹಕಾರ, ಸಹಾಯ ಮಾಡಲಾಗುತ್ತದೆ. ಎಂದ ಅವರು ಆಧುನಿಕ ಕಾಲದ ಮಹಾಕವಿ ಕುವೆಂಪು ಪ್ರಕಾಂಡ ಪಾಂಡಿತ್ಯವನ್ನು ಹೊಂದಿ ಕನ್ನಡ ನಾಡು, ನುಡಿಯನ್ನು ಮುಗಿಲೆತ್ತರಕ್ಕೆ ಕೊಂಡ್ಯೊಯ್ದ ಅಪ್ರತಿಮ ಕವಿ ಎಂದರು.
ಇದನ್ನು ಓದಿದ್ದೀರಾ? ಮದ್ದೂರು | ಕುವೆಂಪು ರಾಮಾಯಣದ ನೋವಿನ ಪಾತ್ರಗಳಿಗೆ ತಮ್ಮ ಕೃತಿಗಳ ಮೂಲಕ ಜೀವ ತುಂಬಿದರು : ಹೆಚ್.ಹನುಮಂತರಾಯಪ್ಪ
ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಮಾನತಾಡಿ, ಕಳೆದ ಎಂಟು ವರ್ಷಗಳಿಂದ ಡಾ.ಮಧಸೂದನರ ಸಹಕಾರದಿಂದ ರಕ್ತದಾನ ಶಿಬಿರಗಳನ್ನು ಕಸಾಪ ಹಮ್ಮಿಕೊಂಡು ಬರುತ್ತಿದ್ದು, ನೂರಾರೂ ಯುವಕ ತಮ್ಮ ರಕ್ತದಾನ ಮಾಡಿ ಹಲವಾರು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ದಾನಿ ಡೈರಿ ವೆಂಕಟೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿ ಬಿ.ಟಿ.ರಾಜೇಂದ್ರ, ಲಕ್ಕಸಂದ್ರ ಮಹದೇವ, ಸಮದ್, ಕರೀಗೌಡ, ಚೇತನ್ ಗುನ್ನೂರು, ಕಿರಣ್ ನಂದೀಶ್ ಮತ್ತು ಆಸ್ವತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇದನ್ನು ನೋಡಿದ್ದೀರಾ? ಮುಸ್ಲಿಂ ಮುಖಂಡನ ಮನೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು!
ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು ರಕ್ತದಾನ ಮಾಡಿದರು. ಶಿಬಿರದಲ್ಲಿ ೫೮ ಮಂದಿ ರಕ್ತದಾನ ಮಾಡಿದರು.