ನರೇಗಾ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಯ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆಯಿಟ್ಟು, ನಗದು ಲಂಚ ಸ್ವೀಕರಿಸುತ್ತಿದ್ದ ಭಾಲ್ಕಿ ತಾಲೂಕಿನ ಕೋಸಂ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಂತ್ರಿಕ ಸಹಾಯಕ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಿಡಿಒ ರಾಹುಲ್ ದಾಂಡೆ ದೂರದಾರರಿಂದ 30 ಸಾವಿರ ಹಾಗೂ ತಾಂತ್ರಿಕ ಸಹಾಯಕ ಸಿದ್ದರಾಮೇಶ್ವರ ಪಾಟೀಲ್ 70 ಸಾವಿರ ರೂಪಾಯಿ ನಗದು ಪಡೆಯುತ್ತಿದ್ದ ವೇಳೆ ಎರಡು ಕಡೆ ಪ್ರತ್ಯೇಕವಾಗಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಗ್ಗೆ ಗುತ್ತಿಗೆದಾರ ಅರವಿಂದ ಭಾಲ್ಕೆ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇಬ್ಬರು ಅಧಿಕಾರಿಗಳಿಗೆ ಖೇಡ್ಡಾಗೆ ಬಿಳಿಸಲು ಯೋಜನೆ ರೂಪಿಸಿದ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿ ಬಂಧಿಸಿದ್ದಾರೆ.
ನೌಬಾದ್‌ನ ಆಟೋ ನಗರ ಬಸ್ ನಿಲ್ದಾಣ ಬಳಿ ಪಿಡಿಒ, ಭಾಲ್ಕಿ ತಾಲೂಕಿನ ಹಲಬರ್ಗಾ ಬಸ್ ನಿಲ್ದಾಣ ಬಳಿ ತಾಂತ್ರಿಕ ಸಹಾಯಕ ದೂರದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪ; ಪ್ರಾಚಾರ್ಯ ವಜಾ
ಲೋಕಾಯುಕ್ತ ಡಿವೈಎಸ್ಪಿ ಹನುಮಂತರಾವ್ ನೇತೃತ್ವದಲ್ಲಿ ಎರಡು ತಂಡಗಳಾಗಿ ಪ್ರತ್ಯೇಕ ದಾಳಿ ನಡೆಸಲಾಗಿದೆ. ಪಿಎಸ್‌ಐಗಳಾದ ಬಾಬಾಸಾಹೇಬ್ ಪಾಟೀಲ್, ಸಂತೋಷ ರಾಠೋಡ, ಅರ್ಜುನಪ್ಪ, ಉದ್ದಂಡಪ್ಪ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.