ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿಯ ಮನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಚವ್ಹಾಣ ಅವರನ್ನು ವರ್ಗಾವಣೆ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸಿದೆ.
ಈ ಕುರಿತು ಗುರುವಾರ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಸಹಾಯಕ ನಿರ್ದೇಶಕರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
ಎಡಿ ಸಂತೋಷ್ ಚವ್ಹಾಣ ಅವರು ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯ ಇರುವುದಿಲ್ಲ. ಅವರ ಸ್ವಂತ ಮನೆಯಲ್ಲಿಯೇ ಕಂಪ್ಯೂಟರ್ ಆಪರೇಟರ್ ಅವರನ್ನು ಕರೆಯಿಸಿ ಕಚೇರಿ ಕೆಲಸ ಮಾಡಿಸುತ್ತಾರೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸರಿಯಾಗಿ ಸ್ಪಂದಿಸದೆ ತಮಗೆ ಬೇಕಾದ ಜನರ ಕೆಲಸಗಳು ಮಾಡಿಕೊಟ್ಟು ತಾರತಮ್ಯ ಎಸಗುತ್ತಿದ್ದಾರೆʼ ಎಂದು ದೂರಿದರು.
ʼಹಲವು ವರ್ಷಗಳಿಂದ ವರ್ಗಾವಣೆಯಾಗದೇ ಇಲ್ಲಿಯೇ ಬೀಡು ಬಿಟ್ಟು ಸರಿಯಾಗಿ ಕರ್ತವ್ಯ ನಿರ್ವಹಿಸದೇ ರಾಜಕೀಯ ಮಾಡುತ್ತಿರುವ ತಾಲ್ಲೂಕು ಪಂಚಾಯತ್ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ ಯಶಸ್ವಿ | ಅಮಿತ್ ಶಾ ರಾಜೀನಾಮೆ ನೀಡದಿದ್ದರೆ ‘ಚಲೋ ಪಾರ್ಲಿಮೆಂಟ್’ ಎಚ್ಚರಿಕೆ
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ತಾಲ್ಲೂಕಾಧ್ಯಕ್ಷ ಶಂಕರ್ ಫುಲೆ ಸೇರಿದಂತೆ ಪ್ರಮುಖರಾದ ಚೇತನ್ ಕಾಡೆ, ರಾಜು ಸೂರ್ಯವಂಶಿ, ಅಶೋಕ್ ಮಂಠಾಳಕರ್, ಪುಲಿಂದ್ ಹುಬ್ಬಾರೆ, ಮಾರುತಿ ಕಾಂಬಳೆ, ಸಾಗರ್ ರಾಯಗೊಳ್, ಅಂಬರೀಷ್ ಗಜರೆ, ವಿಜಯಕುಮಾರ್ ರನ್ನಮಲ್ಲೇ ಹಾಗೂ ಪ್ರಫುಲ್ ಗಾಯಕವಾಡ್ ಮತ್ತಿತರಿದ್ದರು.