- ಪ್ರವಾಸಕ್ಕೆ ತೆರಳಿದ ಕಾನೂನು ವಿದ್ಯಾರ್ಥಿ ಸಾವು
- ಆಂದ್ರಪ್ರದೇಶದ ಆಲೂರು ಸಮಿಪದಲ್ಲಿ ನಡೆದ ಘಟನೆ
ಸ್ನೇಹಿತರೊಡನೆ ಪ್ರವಾಸಕ್ಕೆಂದು ತೆರಳಿದ ವಿದ್ಯಾರ್ಥಿಯೊಬ್ಬ ಕಾರು ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ಸಣ್ಣ ರುದ್ರಪ್ಪ ಕಾನೂನು ವಿದ್ಯಾಲಯದಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ರಮೇಶ (25) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಆಂದ್ರಪ್ರದೇಶದ ಆಲೂರು ಸಮಿಪದಲ್ಲಿ ಈ ಘಟನೆ ಜರುಗಿದೆ. ಕಾರಿನಲ್ಲಿ ಏಳು ಜನರಿದ್ದರು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಇನ್ನುಳಿದವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮೃತ ರಮೇಶ ಕಾಲೇಜಿನಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನು. ರಮೇಶ್ ಅಗಲಿಕೆಗೆ ಉಪನ್ಯಾಸಕರು , ಸ್ನೇಹಿತರು ಕಾಲೇಜು ಆವರಣದಲ್ಲಿ ಮೌನಾಚರಣೆ ನಡೆಸಿ ಕಂಬನಿ ಮಿಡಿದಿದ್ದಾರೆ.