ಓವರ್ ಡೆಕ್ ಮಾಡಲು ಹೋಗಿ ಕಾರಿಗೆ ಬೈಕ್ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಅಫಜಲಪುರ ಪಟ್ಟಣದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಭೀಮಾ ನದಿ ಕಾಲುವೆ ಬಳಿ ದುರ್ಘಟನೆ ಸಂಭವಿಸಿದ್ದು, ಮಹಾರಾಷ್ಟ್ರದ ಸಾತಾರಾ ನಗರದ ಅಜಿತ ನಾಡಗೌಡ (44), ಮಹೇಶ ದುರ್ಗಾ (27) ಎನ್ನುವರು ಮೃತಪಟ್ಟವರು.
ಮೃತರು ದೇವಲ ಗಾಣಗಾಪುರದ ದತ್ತಾ ಮಹಾರಾಜರ ದರ್ಶನ ಮುಗಿಸಿಕೊಂಡು ವಾಪಸ್ ಊರಿಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಮಗು ಸೇರಿ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್‌ಗೆ ಬೈಕ್ ಢಿಕ್ಕಿ; ಖಾಸಗಿ ಶಾಲೆ ಶಿಕ್ಷಕ ಸಾವು
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.