ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಕಾರು ಪಲ್ಟಿಯಾಗಿ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದ ಯುವತಿ ಐಶ್ವರ್ಯ ಬಂಡೆ (21) ಮೃತ ಯುವತಿ.
ಭಾನುವಾರ ಕಲಬುರಗಿಯಲ್ಲಿನ ಕೇಂದ್ರದಲ್ಲಿ ಪರೀಕ್ಷೆ ಇತ್ತು. ಕಾರಿನಲ್ಲಿ ಹಾರಕೂಡ ಗ್ರಾಮದ ತನಕ ಕಾರಿನಲ್ಲಿ ತೆರಳಿ ಅಲ್ಲಿಂದ ಬಸ್‌ನಲ್ಲಿ ಕಲಬುರಗಿಗೆ ಹೋಗಬೇಕೆಂದು ಊರಿಂದ ಬೆಳಿಗ್ಗೆ ಹೊರಟಿದ್ದರು. ವೇಗವಾಗಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಕಾರಿನ ಚಾಲಕ ಹಾಗೂ ಮೃತ ಯುವತಿಯ ತಾಯಿ ಮತ್ತು ಸಹೋದರಿಗೆ ಗಂಭೀರ ಗಾಯಗಳಾಗಿವೆ, ಕೂಡಲೇ ಅವರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜನರ ಸಮಸ್ಯೆಗಳ ಜೊತೆಗೆ ನಿಲ್ಲುವುದೇ ರಾಜಕೀಯ : ಸಂಸದ ಸಸಿಕಾಂತ್ ಸೆಂಥಿಲ್
ಸ್ಥಳಕ್ಕೆ ಮುಡಬಿ ಠಾಣೆಯ ಪಿಎಸ್‌ಐ ಜಯಶ್ರೀ ಹೂಡಲೆ ನೇತ್ರತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿದರು. ವಿಷಯ ತಿಳಿದು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.