ಮುರುಘಾಶ್ರೀ ಪ್ರಕರಣ | ಆರೋಪಿ ಶಿವಮೂರ್ತಿ ಶರಣರ ಮೇಲೆ ದೋಷಾರೋಪ ನಿಗದಿ

Date:

  • ಮಾ. 21ಕ್ಕೆ ದೋಷಾರೋಪ ಪಟ್ಟಿಯ ವಿಚಾರಣೆ
  • ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಆದೇಶ

ವಸತಿ ನಿಲಯದಲ್ಲಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮಕ್ಕಳ ರಕ್ಷಣೆ (ಪೋಕ್ಸೊ) ಹಾಗೂ ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿನವಾಗಿರುವ ಶಿವಮೂರ್ತಿ ಶರಣರ ಮೇಲಿನ ದೋಷಾರೋಪವನ್ನು ಜಿಲ್ಲಾ ನ್ಯಾಯಾಲಯ ನಿಗದಿಪಡಿಸಿದೆ.

ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ತನಿಖೆ ನಡೆಸಿದ್ದ ಚಿತ್ರದುರ್ಗ ಪೊಲೀಸರು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ 2 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದರು.

ಇದರ 1 ಅರ್ಜಿಯ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಒಂದು ದೋಷಾರೋಪ ಪಟ್ಟಿಯನ್ನು ನಿಗದಿಪಡಿಸಿ, ಅದರ ವಿಚಾರಣೆಯನ್ನು ಇದೇ ತಿಂಗಳ 21ಕ್ಕೆ ಮುಂದೂಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? : ಚುನಾವಣೆ 2023 | ಒಲ್ಲದ ಮನಸ್ಸಿನಲ್ಲೇ ವರುಣಾದೆಡೆಗೆ ಸೋಮಣ್ಣ; ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ

ನ್ಯಾಯಾಲಯದ ಕಲಾಪದ ಅವಧಿ ಮುಕ್ತಾಯವಾಗಿದ್ದರಿಂದ ಉಳಿದ ಇನ್ನೊಂದು ದೋಷಾರೋಪ ಪಟ್ಟಿಯ ವಿಚಾರಣೆಯನ್ನು ಇದೇ ತಿಂಗಳ 15ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.

ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರ ತಮ್ಮ ಮೇಲೆ ಶ್ರೀಗಳಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹಾಸ್ಟೆಲ್‌ನ ಮಹಿಳಾ ವಾರ್ಡ್‌ನ್ ಹಾಗೂ ಮಠದ ವ್ಯವಸ್ಥಾಪಕರಾಗಿದ್ದ ಪರಮಶಿವಯ್ಯ ವಿರುದ್ಧ ದೂರು ಸಲ್ಲಿಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ಚಿತ್ರದುರ್ಗ ಪೊಲೀಸರು ಕಳೆದ ವರ್ಷ ಅ. 27ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | 40 ದಲಿತ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ; ಕ್ರಮಕ್ಕೆ ಆಗ್ರಹಿಸಿ ಮನವಿ

ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ವಾರ್ಡ್ ನಂಬರ್ 3ರಲ್ಲಿ ಇರುವ ದಲಿತರ...

ಬೀದರ್‌ | ಸಾಮಾಜಿಕ ಬದಲಾವಣೆಗೆ ಶಿಕ್ಷಣ ಪ್ರಬಲ ಅಸ್ತ್ರ : ನಾಗಶೆಟ್ಟಿ ಗಾದಗೆ

ಶಿಕ್ಷಣದಿಂದ ಮಾತ್ರ ತಳವರ್ಗ ಸಮುದಾಯಗಳ ಏಳಿಗೆ ಸಾಧ್ಯ ಎಂಬ ಬಾಬಾ ಸಾಹೇಬ್‌...

ಬೀದರ್‌ | ನಮಗೆ ಬೇಕಾಗಿರುವುದು ಸಮಾನತೆ, ಸಮೃದ್ಧ ಭಾರತ : ಅಪ್ಪಗೆರೆ ಸೋಮಶೇಖರ

ದೇಶದ ಎಲ್ಲ ಧರ್ಮಗಳಿಗೆ ರಕ್ಷಾ ಕವಚವಾಗಿರುವ ಸಂವಿಧಾನದ ಕತೃ ‌ಬಾಬಾ ಸಾಹೇಬ್‌...

ದಾವಣಗೆರೆ | ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಾಗರ್

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ. ಪ್ರಭಾ...