ಬಿಜೆಪಿ ಕೇಂದ್ರ ಸರ್ಕಾರ ಹತ್ತು ವರ್ಷದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಗೊಳಿಸಿ ರಾಜ್ಯಗಳ ಅಧಿಕಾರಗಳು ಕಸಿದುಕೊಳ್ಳುತ್ತಿದೆ. ದಬ್ಬಾಳಿಕೆಯನ್ನು ಪ್ರಶ್ನಿಸುವವರನ್ನು ದೇಶ ವಿರೋಧಿಗಳೆಂದು ಬಿಂಬಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ನಿರಂತರ ದಾಳಿ, ಹಲ್ಲೆ, ದೌರ್ಜನ್ಯ ಖಂಡಿಸಿ ಕರ್ನಾಟಕದ ತೆರಿಗೆ ಪಾಲನ್ನು ಹಂಚಿಕೆಯಲ್ಲಿ ಮಲತಾಯಿ ಧೋರಣೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘದ ಕಾರ್ಯಕರ್ತರು ಶನಿವಾರ ಸಂಸದ ಡಾ. ಉಮೇಶ್ ಜಾಧವ್ ಅವರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
“ರೈತ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರದ ವಿಪರೀತ ದುರ್ಬಳಕೆ ಮಾಡಿಕೊಂಡು ರೈತರ ಮೇಲೆ ಮೋದಿ ಸರ್ಕಾರ ನಡೆಸುತ್ತಿರುವ ಲಾಟಿ ಪ್ರಹಾರ, ರಬ್ಬರ ಬುಲೇಟ್, ಅಶ್ರುವಾಯು ಸಿಡಿಸಿ ಮತ್ತು ಸಾಮೂಹಿಕ ಬಂಧನ ಖಂಡನಾರ್ಹ. ರೈತರ ಮೇಲೆ ಅಶ್ರುವಾಯು ಶೆಲಗಳನ್ನು ಎಸೆಯಲು ಡ್ರೋಣಗಳನ್ನು ಬಳಸಿ ಪಂಜಾಬ್ ಮತ್ತು ಹರಿಯಾಣ ರೈತರ ಮೇಲೆ ನಡೆಸುತ್ತಿರುವ ಪೈಶಾಚಿಕ ದೌರ್ಜನ್ಯ ಕೃತ್ಯವು ಭಯೋತ್ಪಾದಕರಿಗೆ ಭಾರತದಲ್ಲಿ ನುಸುಳುಕೊರರಿಗೆ ನಡೆಸುವಂತೆ ದಾಳಿ ನಡೆಸುತ್ತಿರುವುದು ಅತ್ಯಂತ ಆಘಾತಕಾರಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕಳೆದ ವರ್ಷದಲ್ಲಿ ರೈತರು ನಡೆಸಿದ ಬೃಹತ್ ಹೋರಾಟದ ಸಂದರ್ಭದಲ್ಲಿ 700ಕ್ಕೂ ಅಧಿಕ ರೈತರು ವೀರ ಮರಣವನ್ನು ಹೊಂದಿದ್ದರು. ಆದರೆ ಆ ರೈತರ ಕುಟುಂಬಕ್ಕೆ ಪರಿಹಾರ ನೀಡುವುದು ಮತ್ತು ರೈತರ ಮೇಲೆ ಹೂಡಿರುವ ಸಾವಿರಾರು ಕೇಸುಗಳು ವಾಪಸ್ ಪಡೆಯಲು ಒಬ್ಬ ಮಂತ್ರಿಯ ಮಗ ರೈತರ ಮೇಲೆ ಕಾರನ್ನು ಹಾಯಿಸಿ ಕೊಲೆ ಮಾಡಿರುವುದು ವಿರೋಧಿಸಿ ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮೋದಿ ಸರ್ಕಾರವೇ ಮುಂದೆ ನಿಂತು ದಾಳಿ ನಡೆಸುತ್ತಿರುವುದು ನೋಡಿದರೆ ಸರ್ಕಾರ ಕಾರ್ಪೋರೇಟ್ ಕಂಪೆನಿಯ ಏಜಂಟರು ಎಂದೆನಿಸುತ್ತದೆ” ಎಂದು ಕಿಡಿಕಾರಿದರು.
“ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ದಬ್ಬಾಳಿಕೆ ದೌರ್ಜನ್ಯ ನಿಲ್ಲಿಸಿ ಬೇಡಿಕೆಗಳು ಈಡೇರಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮೋದಿ ಸರ್ಕಾರದ ವಿರುದ್ದ ರೈತ ಸಂಘಟನೆಗಳು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ಪ್ರತಿಭಟನಾಕಾರರು ಎಚ್ಚರಿಸಿದರು
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿಗಳ ಅಸ್ತಿಭಾರದ ಮೇಲೆ ಕಟ್ಟಿದ ಅಹಿಂದ ಬಜೆಟ್
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಚಂದು ಜಾಧವ್ ,ಗೌರವಾಧ್ಯಕ್ಷ ಶಾಂತಪ್ಪ ಪಾಟೀಲ್, ಖಜಾಂಚಿ ಸೋಮಶೇಖರ್ ಸಿಂಗೆ, ಪ್ರಧಾನ ಕಾರ್ಯದರ್ಶಿ ಸುನೀಲ್ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ಜಲೀಲಸಾಬ್ ಮಡಕಿ, ಸಹ ಕಾರ್ಯದರ್ಶಿಗಳಾದ ಸುರೇಶ್ ಹೊಡಲ್, ಅನೀಲ್ ಕೊಳ್ಳೂರೆ, ಬಂಡಯ್ಯಸ್ವಾಮಿ, ಸಿದ್ದಲಿಂಗ್ ಪಾಳಾ, ಹಣಮಂತ್ ಚವ್ಹಾಣ್, ಸಂಗಮೇಶ್ ಕಲಬುರ್ಗಿ, ಕಿರಣ್ ಬಣಗಾರ್ ಸೇರಿದಂತೆ ಇತರರಿದ್ದರು.