ಪಶ್ಚಿಮ ಘಟ್ಟಗಳ ಬಗ್ಗೆ ಕೇಂದ್ರದ ಕರಡು ಘೋಷಣೆ: ಗ್ರಾಮ, ವಾರ್ಡ್ ಸಭೆ ನಿರ್ಧರಿಸಲಿ; ಕೃಷಿ ತಜ್ಞರ ಸಲಹೆ

Date:

Advertisements

ಇತ್ತೀಚೆಗೆ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ಪಶ್ಚಿಮ ಘಟ್ಟಗಳ ಕರಡು ಘೋಷಣೆಯನ್ನು ತಿರಸ್ಕರಿಸಲು ತೆಗೆದುಕೊಂಡ ತೀರ್ಮಾನ ಅತ್ಯಂತ ವಿಷಾದಕರ ತೀರ್ಮಾನವಾಗಿದೆ. ಪಶ್ಚಿಮ ಘಟ್ಟಗಳ ಕೇಂದ್ರ ಸರ್ಕಾರದ ಘೋಷಣೆಗಳ ಬಗ್ಗೆ ಗ್ರಾಮ, ವಾರ್ಡ್ ಸಭೆಗಳು ನಿರ್ಧರಿಸಬೇಕು ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಕೃಷಿ ತಜ್ಞರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ತುಮಕೂರು ಗಾಂಧಿ ಸಹಜ ಬೇಸಾಯ ಆಶ್ರಮದ ಡಾ ಎಚ್ ಮಂಜುನಾಥ್, ರವೀಶ್, ಸಿ.ಯತಿರಾಜು, “ಎಲ್ಲ ರಾಜಕೀಯ ಪಕ್ಷಗಳು ಪರಿಸರ ವಿನಾಶಕ ಅಭಿವೃದ್ಧಿಯನ್ನೇ ಅಭಿವೃದ್ಧಿ ಎಂದು ಬಿಂಬಿಸುತ್ತಾ ಬಂದಿವೆ. ಜನರ ಜೀವನೋಪಾಯಗಳು ಪರಿಸರಾವಲಂಬಿಗಳಾಗಿವೆ. ಈ ಅಂಶವನ್ನು ಬಹುಪಾಲು ಪಕ್ಷಗಳು ನಿರ್ಲಕ್ಷಿಸಿವೆ. ಪರಿಸರಕ್ಕೆ ಸಂಬಂಧಿಸಿದಂತೆ ಶಾಸನಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸತತವಾಗಿ ಸರ್ಕಾರಗಳು ವಿಫಲವಾಗಿರುವುದರಿಂದ ನಾವಿಂದು ಪಶ್ಚಿಮ ಘಟ್ಟಗಳಂತಹ ಹಲವಾರು ಪರಿಸರ ದುರಂತಗಳನ್ನು, ಪರಿಸರವನ್ನು ಅವಲಂಬಿಸಿ ಬದುಕುತ್ತಿರುವ ಜನರ ಜೀವನೋಪಾಯಗಳಿಗೆ ಧಕ್ಕೆಯುಂಟಾಗಿದೆ. ಈ ಸರಿಪಡಿಸಲಾಗದ ಗಂಡಾಂತರಗಳಿಂದ ಈ ಜನರನ್ನು ಕಾಪಾಡಬೇಕಾಗಿದೆ” ಎಂದು ತಿಳಿಸಿದ್ದಾರೆ.

ಅಲ್ಲಿಯ ಮೂಲ ನಿವಾಸಿಗಳಿಗೆ ಅರಣ್ಯ ಹಕ್ಕು ಶಾಸನವನ್ನು ಜಾರಿಗೊಳಿಸಿ ಅವರಿಗೆ ಇದ್ದ ಭೂಮಿ ಹಕ್ಕುಗಳನ್ನು ನೀಡಿಲ್ಲ. ಅರಣ್ಯ ಉಪ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟಕ್ಕೆ ನೀಡಬೇಕಾದ ಪ್ರೋತ್ಸಾಹ ಕ್ರಮಗಳನ್ನು ತೆಗೆದುಕೊಂಡಿಲ್ಲ. ಎಲ್ಲ ಸರ್ಕಾರಗಳು ಅವರ ಜೀವನೋಪಾಯ ಮತ್ತು ಭೂಮಿ ಹಕ್ಕಿನಿಂದ ವಂಚಿಸಿವೆ. ಭಾರತದ ಹವಾಮಾನವನ್ನು ನಿರ್ಧರಿಸುವ, ವಾಯುಮಾಲಿನ್ಯ ನಿಯಂತ್ರಿಸುವ, ಕುಡಿಯಲು 59ಕ್ಕೂ ಅಧಿಕ ನಗರಗಳಿಗೆ ನೀರು ಸರಬರಾಜಾಗುತ್ತಿರುವುದು ಈ ಪಶ್ಚಿಮಘಟ್ಟಗಳಿಂದ ಎಂಬುವುದು ಮರೆಯದಿರೋಣ. ಇವು ಭಾರತದ ವಾಯುಗೋಳವಾಗಿ ಮಾಲಿನ್ಯವನ್ನು ಹೀರಿಕೊಂಡು ಜೀವಪ್ರದಾಯಕ ಆಮ್ಲಜನಕವನ್ನು ನೀಡುತ್ತವೆ. ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಅಗತ್ಯವಾಗಿರುವ ನೀರನ್ನು ಒದಗಿಸುತ್ತವೆ, ಅಲ್ಲಿರುವ ಜಲ ವಿದ್ಯುತ್ ಯೋಜನೆಗಳಿಂದ ನಮಗೆಲ್ಲರಿಗೂ ಅಗತ್ಯವಾದ ವಿದ್ಯುತ್ ಶಕ್ತಿಯನ್ನು ಅತ್ಯಂತ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿವೆ. ಇಡೀ ದೇಶದ ಇಂಧನ ಸುಭದ್ರತೆ, ಆಹಾರ ಸುಭದ್ರತೆ, ಜೀವನೋಪಾಯ ಸುಭದ್ರತೆ, ಸೇವೆಗಳನ್ನು ಕರುಣಿಸಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನಾವೆಲ್ಲ ಇಂದು ಅನಿವಾರ್ಯವಾಗಿ ಧಾವಿಸಬೇಕಾಗಿದೆ. ಇವುಗಳನ್ನು ಸಂರಕ್ಷಿಸಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ. ತಮ್ಮ ವೈಫಲ್ಯಗಳನ್ನು ಮರೆಮಾಚಿ ಅಭಿವೃದ್ಧಿಯ ನಾಟಕವನ್ನು ಎಲ್ಲ ಪಕ್ಷಗಳು ಮಾಡುತ್ತಿವೆ. ಇದು ಹೀಗೆ ಮುಂದುವರೆಯಲು ಬಿಟ್ಟರೆ ಭಾರತದ ಜನರ ಆರೋಗ್ಯ ಅಭಿವೃದ್ಧಿ ಮತ್ತು ಜೀವನೋಪಾಯಗಳಿಗೆ ಕೊಡಲಿ ಪೆಟ್ಟು ಬಿದಂತಾಗುತ್ತದೆ ಮತ್ತು ನಾವೇ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ನಾವು ಕುಡಿಯುವ ಗಾಳಿ, ನೀರು, ಜೀವನೋಪಾಯದಾರಿತ ಉದ್ಯೋಗಗಳು ನಾಶಗೊಳ್ಳುವ ಅಪಾಯವಿದೆ ಎಂದಿದ್ದಾರೆ.

Advertisements

ವಿಧಾನಸೌಧಗಳಲ್ಲಿ ಕುಳಿತು ತೀರ್ಮಾನ ಮಾಡುವ ಪರಿಪಾಟವನ್ನು ಕೈ ಬಿಟ್ಟು, ಗ್ರಾಮ, ವಾರ್ಡ್ ಸಭೆಗಳಲ್ಲಿ ಕೇಂದ್ರ ಸರ್ಕಾರದ ಘೋಷಣಾ ಪತ್ರದ ಬಗ್ಗೆ ವ್ಯಾಪಕ ಸಾರ್ವಜನಿಕ ಸಮಾಲೋಚನೆಗಳನ್ನು ಸರ್ಕಾರ ನಡೆಸಿ ಅದರ ಆಧಾರದಲ್ಲಿ ನಿರ್ಣಯ ಮಾಡಲಿ. ಪರಿಸರದ ಶಾಸನಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ವಿಫಲವಾಗಿರುವ ಶಾಸಕರು ಹಲವಾರು ಶ್ರೇಷ್ಠ ನ್ಯಾಯಾಲಯ, ರಾಜ್ಯ ಹೈಕೋರ್ಟ್ ಹಾಗೂ ಹಸಿರು ನ್ಯಾಯ ಮಂಡಳಿಗಳ ತೀರ್ಪುಗಳ ಉಲ್ಲಂಘನೆ ಮಾಡಿರುವುದರ ಮೇಲೆ ನ್ಯಾಯಾಂಗ ನಿಂಧನೆ ಆರೋಪಗಳನ್ನು ಹೊರಿಸಿ, ವಿಚಾರಣೆಯ ನಡೆಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನು ಓದಿದ್ದೀರಾ? ಶಿರೂರು ದುರಂತ | ಶೋಧ ಕಾರ್ಯಾಚರಣೆಯ ವೇಳೆ ಎರಡು ಮಾನವ ಮೂಳೆ ಪತ್ತೆ

ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಮಾನವ ಚಟುವಟಿಕೆಗಳ ಆಧಾರಿತ ಅಭಿವೃದ್ಧಿ ಯೋಜನೆಗಳಿಂದ ಉಂಟಾಗುತ್ತಿರುವ ಪರಿಸರ ದುರಂತಗಳ ಆಸ್ತಿಪಾಸ್ತಿ ಹಾನಿ, ಪ್ರಾಣ ಹಾನಿಗಳಿಗೆ ರಾಜ್ಯದ ಶಾಸಕರು ಮತ್ತು ಮಂತ್ರಿಗಳು ಹೊಣೆಗಾರರನ್ನಾಗಿಸಿ ಅವರಿಂದ ಈ ಅವಘಡಗಳಿಗೆ ಪರಿಹಾರದ ಹಣವನ್ನು ವಸೂಲು ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X