ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಕಗ್ಗಲಗುಂದಿ ಗ್ರಾಮದಲ್ಲಿ ನಡೆದಿದೆ.
ಕಗ್ಗಲಗುಂದಿ ಗ್ರಾಮದ ಸುಶೀಲ(6) ಎಂಬಾಕೆ ಗಾಯಗೊಂಡ ಬಾಲಕಿ. ಸೋಮವಾರ ಸಂಜೆ ಮನೆಯ ಮುಂಭಾಗದಲ್ಲಿ ಬಾಲಕಿ ಆಟವಾಡುತ್ತಾ ಕುಳಿತಿದ್ದಳು. ಈ ಸಂದರ್ಭದಲ್ಲಿ ಚಿರತೆಯೊಂದು ಆಕೆಯನ್ನು ಎಳೆದಯ್ದಿದೆ. ಆಕೆ ಚೀರಿಕೊಂಡಿದ್ದು ಗ್ರಾಮಸ್ಥರು ಧಾವಿಸಿ ಜೋರಾಗಿ ಕೂಗಾಡಿದ್ದಾರೆ. ಚಿರತೆ ಬಾಲಕಿಯನ್ನು ಬಿಟ್ಟು ಹೋಗಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಬಕಾರಿ ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಎಚ್ಚರಿಕೆ
ಕೂಡಲೇ ಗಾಯಾಳು ಬಾಲಕಿಯನ್ನು ಕಾಮಗೆರೆಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇನ್ನು ಮಗುವಿನ ಗಂಟಲಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.