ಚನ್ನಪಟ್ಟಣ | ತಾಲೂಕಿನ ನೀರಾವರಿಗೆ ವೆಂಕಟೇಗೌಡರ ಕೊಡುಗೆ ಅಪಾರ: ರಮೇಶ್‌ಗೌಡ

Date:

Advertisements

ತಾಲೂಕಿನ ನೀರಾವರಿಗೆ ಇಂಜಿನಿಯರ್ ವೆಂಕಟೇಗೌಡರ ಕೊಡುಗೆ ಅಪಾರವಾಗಿದೆ. 1986 ರಿಂದ 2017ರವರೆಗೆ ತಾಲೂಕಿನ ಗರಕಹಳ್ಳಿ ಏತನೀರಾವರಿ ಯೋಜನೆಯಿಂದ ಕಣ್ವ-ಶಿಂಷಾ ಯೋಜನೆ ಪೂರ್ಣವಾಗುವವರೆಗೆ 20 ವರ್ಷಗಳ ತಾಲೂಕಿನ ನೀರಾವರಿಗೆ ತಮ್ಮ ಸೇವೆಯನ್ನು ಮೀಸಲಿಟ್ಟು ತಾಲೂಕಿನ ಲಕ್ಷಾಂತರ ರೈತರ ಬದುಕು ಹಸನಾಗಲು ಶ್ರಮಿಸಿದ ಮಹನೀಯರಲ್ಲಿ ವೆಂಕಟೇಗೌಡರು ಸಹ ಒಬ್ಬರಾಗಿದ್ದಾರೆ. ಅವರ ಅಕಾಲಿಕ ಮರಣದಿಂದ ತಾಲೂಕಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಸಂತಾಪ ಸೂಚಿಸಿದರು.

ಅವರು ಶನಿವಾರ ಚನ್ನಪಟ್ಟಣದ ಕಾವೇರಿ ಸರ್ಕಲ್‌ನಲ್ಲಿ ಕಕಜ ವೇದಿಕೆಯಿಂದ ಶುಕ್ರವಾರ ಹೃದಯಾಘಾತದಿಂದ ನಿಧನರಾದ ಇಂಜಿನಿಯರ್ ವೆಂಕಟೇಗೌಡರ ನಿಧನಕ್ಕೆ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.

ಚುನಾವಣೆಯ ಬಳಿಕ ತಾಲೂಕಿನ 300 ರೈತರನ್ನು ಇಸ್ರೇಲ್ ಪ್ರವಾಸಕ್ಕೆ ಕರೆದೊಯ್ದು ಅವರಿಗೆ ನೀರಿನ ಸದ್ಬಳಕೆ ಮತ್ತು ಅಲ್ಲಿನ ಕೃಷಿಯ ಬಗ್ಗೆ ಅರಿವು ಮೂಡಿಸುವ ಚಿಂತನೆ ಹೊಂದಿದ್ದ ಬಗ್ಗೆ ಗುರುವಾರ ನನ್ನ ಜೊತೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದರು. ಆದರೆ ದುರದೃಷ್ಟವಶಾತ್ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಅವರನ್ನು ಸನ್ಮಾನಿಸಬೇಕು ಎಂದಿದ್ದ ವೇದಿಕೆಯಿಂದ ಅವರ ಶ್ರದ್ಧಾಂಜಲಿ ಸಭೆ ಮಾಡುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisements

ಇದನ್ನು ನೋಡಿದ್ದೀರಾ? ಚನ್ನಪಟ್ಟಣ | ಸಿ.ಪಿ.ಯೋಗೇಶ್ವರ್ ಗೆ ಜೈ ಎಂದ ಮತದಾರ!

ಎಲ್ಲಾ ಅವಮಾನಗಳನ್ನು ಎದುರಿಸಿ ನೀರಾವರಿ ಯೋಜನೆಯನ್ನು ಸಾಕಾರ ಮಾಡಿ ತಾಲೂಕಿನಲ್ಲಿ ಮುಂದಿನ ಪೀಳಿಗೆಗೆ ಶಾಶ್ವತ ನೀರಾವರಿ ಯೋಜನೆಯನ್ನು ನೀಡಿರುವ ಅವರನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡಿ ಅವರನ್ನು ಗೌರವಿಸುವಂತಾಗಬೇಕು. ಅವರ ನೀರಾವರಿ ಸಾಧನೆಯ ಪುಸ್ತಕ ಮುದ್ರಣ ಮಾಡಬೇಕು ಎಂದು ರಮೇಶ್‌ಗೌಡ ಆಗ್ರಹಿಸಿದರು.

ಚಿಂತಕ ತಿಮ್ಮೇಶ್‌ಪ್ರಭು ಮಾತನಾಡಿ, ಕಣ್ವ-ಶಿಂಷಾ ಯೋಜನೆಯ ಸಂಪೂರ್ಣ ರೂವಾರಿ ಇಂಜಿನಿಯರ್ ವೆಂಕಟೇಗೌಡರು, ಅವರಿಗೆ ಹಲವರು ಸಹಕಾರ ನೀಡಿದ್ದಾರೆ. ತಾಲೂಕಿನ ನಿಜವಾದ ಭಗೀರಥ ಎಂದರೆ ಅದು ವೆಂಕಟೇಗೌಡರು ಎಂದರೆ ತಪ್ಪಾಗಲಾರದು. ಅವರು ಅಕಾಲಿಕ ನಿಧನರಾಗಿರುವುದು ನಮ್ಮ ತಾಲೂಕಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಧಿಸಿದರು.

ಬ್ರಹ್ಮಣೀಪುರ ಕೆಂಪರಾಜು ಮಾತನಾಡಿ, ವೆಂಕಟೇಗೌಡರು ತಾಲೂಕಿನ ನೀರಾವರಿ ಅಭಿವೃದ್ಧಿಗೆ ಶ್ರಮಿಸಿದ್ದು, ಈ ಯೋಜನೆ ಸಾಕಾರ ಮಾಡುವ ವೇಳೆ ಯಾರು ಏನೇ ಮಾತನಾಡಿದರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ನನಗೆ ತಾಲೂಕಿನ ನೀರಾವರಿ ಮುಖ್ಯ ಎಂದು ತನ್ನ ಕೆಲಸದ ಮೇಲೆ ಹೆಚ್ಚು ಗಮನ ನೀಡುತ್ತಿದ್ದರು. ಇಂದು ರೈತರು ಸ್ವಾವಲಂಬಿಗಳಾಗಿ ಬದುಕು ಮಾಡುತ್ತಿದ್ದಾರೆ ಎಂದರೆ ಅದಕ್ಕೆ ವೆಂಕಟೇಗೌಡರು ಪ್ರಮುಖರಾಗಿದ್ದಾರೆ ಎಂದು ಬಣ್ಣಿಸಿದರು.

ಸಿ.ವಿ.ರಾಮು ಮಾತನಾಡಿ, ನೀರಾವರಿ ಹರಿಕಾರ ವೆಂಕಟೇಗೌಡರ ನಿಧನ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿದರು.

ಇದನ್ನು ಓದಿದ್ದೀರಾ? ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆಲುವು: ನಿಂದನೆಗಳಿಂದ ಬಚಾವಾದ ಸಚಿವ ಜಮೀರ್

ನಿವೃತ್ತ ಪ್ರಾಂಶುಪಾಲ ಹಾಗೂ ಚನ್ನಪಟ್ಟಣ ಸ್ಪೋಟ್ಸ್ ಕ್ಲಬ್ ಅಧ್ಯಕ್ಷರಾದ ನಿಂಗೇಗೌಡರು (ಎನ್‌ಜಿ) ಮಾತನಾಡಿ, ಉಪಚುನಾವಣೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ರಾಜಕೀಯ ನಾಯಕರು ನಮ್ಮ ಕೊಡುಗೆ, ನಮ್ಮ ಕೊಡುಗೆ ಎಂದು ಕ್ರೆಡಿಟ್ ವಾರ್ ಮಾಡುತ್ತಿದ್ದಾರೆ. ಸರ್ಕಾರಗಳು ಅನುದಾನ ನೀಡಬಹುದು, ಶಾಸಕರು ಇಚ್ಚಾಶಕ್ತಿಯಿಂದ ಯೋಜನೆ ಮಾಡಿಸಬಹುದು. ಆದರೆ ಈ ಯೋಜನೆಯನ್ನು ರೂಪಿಸುವ ಅಧಿಕಾರಿಗಳ ಶ್ರಮವೇ ಹೆಚ್ಚಿದೆ. ಅವರ ನೀರಾವರಿ ಯೋಜನೆ ನಮ್ಮ ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಯುವಂತಹವಾಗಿದೆ ಎಂದರು.

ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಮಾತನಾಡಿ, ಇಂಜಿಯರ್ ವೆಂಕಟೇಗೌಡರ ದೂರದೃಷ್ಠಿಯಿಂದ ರೂಪಿಸಿದ ಕಣ್ವ-ಶಿಂಷಾ ಕುಡಿಯುವ ನೀರು ಯೋಜನೆ, ಹಾಗೂ ಸತ್ತೇಗಾಲ ಯೋಜನೆಯಿಂದ ಮುಂದಿನ ಪೀಳಿಗೆಗೂ ನೀರಿನ ಅನುಕೂಲ ಮಾಡಿದ್ದಾರೆ. ಅವರನ್ನು ತಾಲೂಕಿನ ಜನತೆ ಶಾಸ್ವತವಾಗಿ ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಶ್ರಮಿಸೋಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಚೌ.ಪು.ಸ್ವಾಮಿ ಮಾತನಾಡಿ, ಇಂಜಿನಿಯರ್ ವೆಂಕಟೇಗೌಡರು ಕಾವೇರಿ ನೀರನ್ನು ಚನ್ನಪಟ್ಟಣದ ಜನತೆಗೆ ನೀಡಬೇಕು ಎಂದು ಸಿಪಿವೈರ ಜೊತೆ ಹಗಲಿರುಳು ಶ್ರಮಿಸಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಾಮರಸ್ಯ ಮೂಡುವುದು ಕಷ್ಟ. ಆದರೆ ಸಿಪಿವೈ ಹಾಗೂ ವೆಂಕಟೇಗೌಡರು ಒಟ್ಟಾಗಿ ನೀರಾವರಿ ಯೋಜನೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇಂದು ತಾಲೂಕಿನಲ್ಲಿ ಶಾಶ್ವತ ನೀರಾವರಿ ಆಗುತ್ತಿದೆ ಎಂದರೆ ಅದಕ್ಕೆ ವೆಂಕಟೇಗೌಡರು ಕಾರಣ. ಅವರನ್ನು ತಾಲೂಕಿನಲ್ಲಿ ಮುಂದಿನ ಪೀಳಿಗೆಯೂ ಸ್ಮರಿಸುವ ನಿಟ್ಟಿನಲ್ಲಿ ಅವರ ಹೆಸರು ಶಾಶ್ವತವಾಗಿಸಲು ಶ್ರಮಿಸಬೇಕು ಎಂದು ಒತ್ತಾಯಿಸಿದರು.

ಎ.ವಿ.ಹಳ್ಳಿ ಚೌಡೇಗೌಡ ಮಾತನಾಡಿ, ಅವರ ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಅವರು ಮತ್ತೆ ತಾಲೂಕಿಗೆ ಬಂದು ನಿವೃತ್ತಿಯ ನಂತರವೂ ತಾಲೂಕಿನ ನೀರಾವರಿ ಯೋಜನೆಗೆ ಶ್ರಮಿಸಬೇಕು ಎಂದು ಹಾಗೂ ರೈತರಿಗೆ ನೀರಿನ ಬಳಕೆ ಮತ್ತು ವೈಜ್ಞಾನಿಕ ಕೃಷಿ ಬಗ್ಗೆ ಅರಿವು ಮೂಡಿಸುವ ಸಂಕಲ್ಪ ಮಾಡಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ತಾಲೂಕಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು.

ತಿಮ್ಮರಾಜು (ಎಂಟಿಆರ್) ಮಾತನಾಡಿ, ತಾಲೂಕಿನ ನೀರಾವರಿಗೆ ಇಂಜಿನಿಯರ್ ವೆಂಕಟೇಗೌಡರ ಕೊಡುಗೆ ಅಪಾರವಾಗಿದೆ. ಸರ್ಕಾರ ಹಣ ನೀಡಬಹುದು. ಆದರೆ ಯೋಜನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿರುವ ವೆಂಕಟೇಗೌಡರ ಕೊಡುಗೆ ಅಪಾರವಾಗಿದೆ. ಅವರ ನಿಧನದಿಂದ ತಾಲೂಕಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಷಾದಿಸಿದರು.

ಇದನ್ನು ಓದಿದ್ದೀರಾ? ಚನ್ನಪಟ್ಟಣ : ಸೋತ ಬಳಿಕ ಮತ್ತೆ ಮುಸ್ಲಿಮರ ಮೇಲೆ ಗೂಬೆ ಕೂರಿಸಿದ ನಿಖಿಲ್ ಕುಮಾರಸ್ವಾಮಿ

ಎ.ವಿ.ಹಳ್ಳಿ ಸಿದ್ದೇಗೌಡ ಮಾತನಾಡಿ, ತಾಲೂಕಿಗೆ ಶಾಶ್ವತವಾಗಿ ನೀರ ನೀಡುವ ಮೂಲಕ ತಾಲೂಕಿನ ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಸಲು ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಮಳೂರು ಪಟ್ಟಣದ ಚಂದ್ರು, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಚಿಕ್ಕಣ್ಣಪ್ಪ, ಮರಿಅಂಕೇಗೌಡ, ಜಿಲ್ಲಾಧ್ಯಕ್ಷ ಯೋಗೀಶ್‌ ಗೌಡ, ಅಪ್ಪಾಜಿ, ಜೆಸಿಬಿ ಲೋಕೇಶ್, ತಿಮ್ಮರಾಜು, ಸಿದ್ದಪ್ಪ, ಬೀರೇಶ್, ಸಿದ್ದಪ್ಪಾಜಿ ಶಂಕರ್ ಇತರರು ಇದ್ದು ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X