ಚನ್ನಪಟ್ಟಣದಲ್ಲಿ ಉಪಚುನಾವಣೆಯ ರಂಗು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ನಡುವೆಯೇ ಜೆಡಿಎಸ್‌ನ ಕೆಲವು ಮುಖಂಡರು, ಮುಸ್ಲಿಮ್ ಮತದಾರರನ್ನು ಒಲೈಸಲು ಮುಂದಾಗಿದ್ದು, ಕುರ್‌ಆನಿನ ಪ್ರತಿಯೊಂದಿಗೆ ಹಣ ಹಂಚಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯ ಸಂಬಂಧ ಚನ್ನಪಟ್ಟಣದ ಮುಸ್ಲಿಂ ಸಮುದಾಯದ ಹಿರಿಯರೋರ್ವರು ನೀಡಿರುವ ಹೇಳಿಕೆಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಚನ್ನಪಟ್ಟಣದಲ್ಲಿ ಉಪಚುನಾವಣೆಯ ರಂಗು ದಿನದಿಂದ ದಿನಕ್ಕೆ ರಂಗೇರುತ್ತಿರುವ ನಡುವೆಯೇ ಜೆಡಿಎಸ್‌ನ ಕೆಲವು ಮುಖಂಡರು, ಮುಸ್ಲಿಮ್ ಮತದಾರರನ್ನು ಓಲೈಸಲು ಮುಂದಾಗಿದ್ದು, ಕುರ್‌ಆನಿನ ಪ್ರತಿಯೊಂದಿಗೆ ಹಣ ಹಂಚಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮುಸ್ಲಿಂ ಸಮುದಾಯದ ಹಿರಿಯರೋರ್ವರು ನೀಡಿರುವ ಹೇಳಿಕೆ ವೈರಲಾಗಿದೆ. pic.twitter.com/Z01MVvjBYA
— eedina.com ಈ ದಿನ.ಕಾಮ್ (@eedinanews) November 9, 2024
ಸದ್ಯ ಹರಿದಾಡಿರುವ ಫೋಟೋ ಹಾಗೂ ವಿಡಿಯೋದಲ್ಲಿ ಒಂದು ಕವರ್‌ನಲ್ಲಿ ಒಂದು ಸಾವಿರ ಹಣ, ಮುಸ್ಲಿಮರು ನಮಾಜ್ ಮಾಡುವ ಮುಸಲ್ಲ(ಶುದ್ಧವಾದ ಬಟ್ಟೆ) ಹಾಗೂ ಕುರ್‌ಆನಿನ 36ನೇ ಪವಿತ್ರ ಸೂಕ್ತವಾದ ‘ಸೂರಃ ಯಾಸೀನ್’ನ ಒಂದು ಪ್ರತಿ ಹಾಗೂ ಮತ ನೀಡುವಂತೆ ಕರಪತ್ರ ನೀಡಿರುವುದು ಕಂಡುಬಂದಿದೆ.
ಈ ಬೆಳವಣಿಗೆಗೆ ಸಂಬಂಧಿಸಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮುಸ್ಲಿಂ ಬಾಂಧವರು ಆಕ್ರೋಶ ಹೊರಹಾಕಿದ್ದು, “ನಿಮಗೆ ಮತ ನೀಡಲು ನಮ್ಮ ಧಾರ್ಮಿಕ ನಂಬಿಕೆಗಳನ್ನು ಬಳಸಿಕೊಳ್ಳಬೇಡಿ. ಎಚ್.ಡಿ.ಕುಮಾರಸ್ವಾಮಿ ಅವರು ಕುರ್‌ಆನ್‌ನ ಪ್ರತಿಯ ಜೊತೆಗೆ 1000 ರೂ.ಗಳ ಲಂಚ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.

“ದಯವಿಟ್ಟು ಇಂತಹ ರಾಜಕೀಯದಿಂದ ದೂರವಿರಿ. ನಮ್ಮ ಈಮಾನ್(ಧರ್ಮ ವಿಶ್ವಾಸ)ವನ್ನು ನಿಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ನಮ್ಮಲ್ಲಿ ಬಂದು ಮತ ಕೇಳಿ. ಆದರೆ, 1000 ರೂ ಹಣ ತೆಗೆದುಕೊಂಡು, ಕುರಾನ್ ಮೇಲೆ ನಿಮ್ಮ ಮತವನ್ನು ನೀಡಿ ಎಂದು ಪ್ರತಿಜ್ಞೆ ಮಾಡಿಸುವ ನಿಮ್ಮ ಈ ಕೆಲಸವನ್ನು ನಾವು ಯಾರೂ ಒಪ್ಪುವುದಿಲ್ಲ. ನಿಮ್ಮ ಮಗನ ಜಯಕ್ಕಾಗಿ, ಈ ರೀತಿಯ ಕೆಲಸಕ್ಕೆ ಕೈ ಹಾಕಬೇಡಿ. ಇದು ನಮ್ಮ ಧಾರ್ಮಿಕ ನಂಬಿಕೆಯ ವಿಚಾರವನ್ನು ಬಳಸಿಕೊಳ್ಳಬೇಡಿ” ಎಂದು ಚನ್ನಪಟ್ಟಣದ ಮುಸ್ಲಿಂ ಮುಖಂಡರು ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆ ಸಂಬಂಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.
ಈಗೂ ಉಂಟೇ…?!@JanataDal_S @hd_kumaraswamy @Nikhil_Kumar_k pic.twitter.com/AbMStYUKd9
— Shwetha Kiran / ಶ್ವೇತಾ ಕಿರಣ್ (@ShwethaKiru) November 9, 2024

ತುರುಕರ ನಿಯತ್ತು ಗೊತ್ತಿದ್ದರೂ ಸುಮ್ಮನೆ waste ಮಾಡಿದ್ದಾನೆ. ಅದೇ ಕಾಸು ಗೌಡರಿಗೆ ಕೊಟ್ಟಿದ್ರೆ ಸಾಲಿಡ್ ಆಗಿರೋದು