ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು; ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು

Date:

Advertisements

ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಬುಲೆಟ್‌ ರೈಲು ಓಡಿಸುವ ಯೋಜನೆ ಹಲವಾರು ರೈತರನ್ನು ಕಂಗಾಲಾಗಿಸಿದೆ. ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿರುವ ರಾಮನಗರ ಜಿಲ್ಲೆಯ ರೈತರು, ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ನಿಯಮಿತ (ಎನ್‌ಎಚ್‌ಎಸ್‌ಆರ್‌ಸಿಎಲ್) ಮುಂದಾಗಿದೆ. ಅದಕ್ಕಾಗಿ, ರಾಮನಗರ ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಾದ 28 ಗ್ರಾಮಗಳ ಕಂದಾಯ ನಕ್ಷೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಎನ್‌ಎಚ್‌ಎಸ್‌ಆರ್‌ಸಿಎಲ್ ಮನವಿ ಸಲ್ಲಿಸಿದೆ. ನಕ್ಷೆ ರಚಿಸಲು ಜಿಲ್ಲಾಡಳಿತ ಮುಂದಾಗಿದೆ.

ಯೋಜನೆಯ ಸಲಹಾ ಸೇವೆಗಳನ್ನು ಖಾಸಗಿ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗಿದೆ. ಈ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿ ಅಗತ್ಯ ನೆರವು ನೀಡಬೇಕು ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಕೋರಿದೆ. ಅದಕ್ಕಾಗಿ, ಕಾರಿಡಾರ್‌ಗೆ ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನುಗಳ ಸರ್ವೆ ನಂಬರ್‌ಗಳು, ಜಮೀನಿನ ವಿಸ್ತೀರ್ಣ ಮತ್ತು ಆ ಜಮೀನುಗಳ ಮಾಲೀಕರ ವಿವರಗಳನ್ನು ಸಂಗ್ರಹಿಸಿ, ಜಿಲ್ಲಾಡಳಿತವು ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದೆ.

Advertisements

ಯೋಜನೆಯಲ್ಲಿ ತೊಡಗಿರುವ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಆಧಾರ್ ಕಾರ್ಡ್ ಸಂಗ್ರಹಿಸುತ್ತಿದ್ದಾರೆ. ಯೋಜನಾ ತಂಡವು ಗ್ರಾಮಸ್ಥರಿಗೆ ತಮ್ಮ ಜಮೀನಿನ ಮೂಲಕ ರೈಲು ಮಾರ್ಗ ಹಾದು ಹೋಗಬಹುದು ಎಂದು ತಿಳಿಸುತ್ತಿದೆ. ಡಿಪಿಆರ್ ಸಿದ್ಧಪಡಿಸಿದ ಬಳಿಕ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

”ನಮ್ಮ ಹಳ್ಳಿಗಳಲ್ಲಿ ಪ್ರಸ್ತಾವಿತ ಮಾರ್ಗವಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಜಮೀನಿಗೆ ಪರಿಹಾರ ಸಿಗುತ್ತದೆ. ಆದರೆ, ನಮ್ಮ ಮುಖ್ಯ ಜೀವನಾಧಾರವಾದ ಕೃಷಿಯೇ ಇಲ್ಲವಾದರೆ ಏನು ಮಾಡುವುದು” ಎಂದು ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.

“ತೆಂಗು, ಹಿಪ್ಪುನೇರಳೆ, ಬಾಳೆ, ಭತ್ತ, ರಾಗಿ, ಮಾವು ಸೇರಿದಂತೆ ನೂರಾರು ಎಕರೆ ಕೃಷಿ ಭೂಮಿ ರೈತರ ಕೈತಪ್ಪಲಿದೆ. ಕೃಷಿಯನ್ನೇ ಆಧರಿಸಿದ್ದ ರೈತರು, ಪರಿಹಾರ ಪಡೆದು, ಏನು ಮಾಡಲು ಸಾಧ್ಯ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೋದಿ ಸರ್ಕಾರದ ವಿರುದ್ಧ ಮಾತಾಡಿದ್ರೆ ಟ್ವಿಟರ್ ಖಾತೆ ಬ್ಲಾಕ್

“ಕೆರೆ ತುಂಬಿಸುವ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಗ್ರಾಮಸ್ಥರು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಜೀವನ ನಡೆಸುತ್ತಿದ್ದಾರೆ. ಹೆಚ್ಚಿನ ಭೂಮಿ ಹೊಂದಿರುವವರಿಗೆ ಒಂದೆಡೆ ಭೂಮಿ ಹೋದರೂ, ಮತ್ತೊಂದೆಡೆ ಭೂಮಿ ಇರುತ್ತದೆ. ಆದರೆ, ತುಂಡು ಭೂಮಿ ಹೊಂದಿರುವವರು ತೀವ್ರ ತೊಂದರೆಗೆ ಸಿಲುಕುತ್ತಾರೆ. ಅವರು ಏನು ಮಾಡಬೇಕು. ಎಲ್ಲಿಗೆ ಹೋಗಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ತಾಳಕುಪ್ಪೆ, ಕೆ.ಜಿ.ಭೀಮನಹಳ್ಳಿ, ಬೆಳಕೆಂಪನಹಳ್ಳಿ, ಬಾನಂದೂರು, ಬಾದಾಡಿ, ಕೆಂಚನಕುಪ್ಪೆ, ಕಲ್ಲುಗೋಪನಹಳ್ಳಿ, ಕೆಂಪನಹಳ್ಳಿ, ಮಾಯಗೊಂಡನಹಳ್ಳಿ, ಕೇತೋಹಳ್ಳಿ, ಬಸವನಪುರ, ಕೊತ್ತೀಪುರ, ಶಿಡ್ಕಲ್ಲು, ಅಚ್ಚಲು, ಅಚ್ಚಲು ರಾಜ್ಯ ಅರಣ್ಯ, ವಿಭೂತಿಕೆರೆ, ಬ್ರಹ್ಮನಮ್ಮನಹಳ್ಳಿ, ಹೊಮ್ಮನಹಳ್ಳಿ, ಹೊಮ್ಮನಹಳ್ಳಿ, ತಿಮ್ಮನಹಳ್ಳಿ, ಬ್ರಹ್ಮನಹಳ್ಳಿ, ತಿ. ಕೂಡ್ಲೂರು, ಹೊಟ್ಟಿಗಾನಹೊಸಹಳ್ಳಿ, ಚಕ್ಕೆರೆ, ಕುರಣಗೆರೆ, ಚಕ್ಕಲೂರು ಮತ್ತು ಕುಕ್ಕೂರು ಗ್ರಾಮಗಳ ಮೂಲಕ ರೈಲು ಮಾರ್ಗ ಹಾದುಹೋಗಲಿದೆ ಎಂದು ಹೇಳಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಕೊಲೆಯಾದ ದಲಿತ ವಿದ್ಯಾರ್ಥಿನಿ ಮನೆಗೆ ಎಸ್ಎಫ್ಐ ನಿಯೋಗ; ಪೋಷಕರ ಭೇಟಿ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಕೊಲೆಗೀಡಾದ ದಲಿತ ವಿದ್ಯಾರ್ಥಿನಿ...

ಸಿಎಂ ಸ್ಥಾನ ಸಿಗುತ್ತೆ ಎಂದರೆ ನಾನು ಕೂಡ ಆರ್‌ಎಸ್‌ಎಸ್‌ ಗೀತೆ ಹಾಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ

ಆರ್‌ಎಸ್‌ಎಸ್‌ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ...

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

Download Eedina App Android / iOS

X