ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಜಿಲ್ಲಾ ಸಮಿತಿ ವತಿಯಿಂದ ಜುಲೈ 19 ರ ಭಾನುವಾರ ಬೆಳಗ್ಗೆ 10.30ಕ್ಕೆ ಚಿಕ್ಕಬಳ್ಳಾಪುರ ನಗರದ ಅಂಬಾರಿ ಪ್ಯಾಲೇಸ್ನಲ್ಲಿ ಆಯೋಜಿಸಿರುವ ಚಲವಾದಿ ಹೊಲೆಯ ಬಲಗೈ ಜನ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಮಾಡಬೇಕೆಂದು ಚೇಳೂರು ತಾ. ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷ ಪಾಳ್ಯಕೆರೆ ವೈ.ಶಂಕರ್ ಮನವಿ ಮಾಡಿದರು.
ಅವರು ಇಂದು ಪ್ರವಾಸಿ ಮಂದಿರದಲ್ಲಿ ಮಾತನಾಡಿ ಹಲವಾರು ದಶಕಗಗಳಿಂದ ಸಾವಿರಾರು ಮಂದಿ ಹಿರಿಯರು ಮುಖಂಡರು ಸಮಾಜದ ಯುವಕರು ತಾಯಂದಿರು ಸಂಘಟನೆಗಾಗಿ ಬದುಕನ್ನು ತೇದಿದ್ದಾರೆ. ಅವರೆಲ್ಲರನ್ನು ಸ್ಮರಿಸುತ್ತಲೇ ಪ್ರಸ್ತುತ ಸಂಘಟನೆಯನ್ನು ಬಲಗೊಳಿಸುವ ಸಂಕಲ್ಪ ತೊಡಲಾಗಿದೆ. ಈ ನಿಟ್ಟಿನಲ್ಲಿ ಇಂದು ಕೇವಲ ಒಂದು ಸಮುದಾಯದ ಕಾರ್ಯಕ್ರಮಕ್ಕಾಗಿ ಸಂಭ್ರಮಕ್ಕಾಗಿ ಸೇರಬೇಕಿಲ್ಲ. ಬದಲಿಗೆ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಲು ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಂದಾಗುತ್ತಿದ್ದೇವೆ ಎಂದರು.
ತಾ.ಪ್ರಧಾನ ಕಾರ್ಯದರ್ಶಿ ಉಲಿಬೆಲೆ ವಿ.ಸುಧಾಕರ್ ಮಾತನಾಡಿ ಹೊಲೆಯ ಜನಾಂಗವು ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರಮಜೀವಿ ಸಮುದಾಯವಾಗಿದೆ. ಅನೇಕ ಸಂಕಷ್ಟಗಳು ಸಾಮಾಜಿಕ ಆಸಮಾನತೆಗಳು ಮತ್ತು ತಾರತಮ್ಯಗಳನ್ನು ಎದುರಿಸಿದರೂ ಈ ಸಮುದಾಯ ತನ್ನ ಆತ್ಮಸ್ಥೆರ್ಯ ದುಡಿಮೆ ಮತ್ತು ಸಂಸ್ಕೃತಿಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ನಮ್ಮ ಪೂರ್ವಜರ ಶ್ರಮದಿಂದ ಸಮಾಜ ಕಟ್ಟಲ್ಪಟ್ಟಿದೆ. ಅವರ ತ್ಯಾಗ ಬಲಿದಾನದಿಂದ ಗ್ರಾಮಗಳು ಬೆಳೆದಿವೆ ಮತ್ತು ನಾಗರಿಕತೆ ಮುಂದುವರಿದಿದೆ ಎಂದು ಸ್ಮರಿಸಿ ನಮ್ಮ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಲು ಯಶಸ್ವಿ ಮಾಡಲು ಹೇಳಿದರು.
ಇದನ್ನು ಓದಿದ್ದೀರಾ..?ಕೆಜಿಎಫ್ | ಐತಿಹಾಸಿಕ ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕ ಹಾಗೂ ಐ.ಆರ್.ಬಿ ಕೇಂದ್ರದ ಕಾಮಗಾರಿ ಪರಿಶೀಲಿಸಿದ ಶಾಸಕಿ ಎಂ.ರೂಪಕಲಾ
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಕಾನೂನು ಸಲಹೆಗಾರ ಆಂಜನೇಯ. ಸಂಘದ ಪ್ರತಿನಿಧಿಗಳಾದ ಶ್ರೀನಿವಾಸ ವಿ. ವೆಂಕಟರವಣ. ವಿಶ್ವನಾಥ. ನರಸಿಂಹಮೂರ್ತಿ. ಮಾರುತಿ. ಶ್ರೀನಿವಾಸ. ಗಂಗಾಧರ. ಮಾಚನಪಲ್ಲಿ ಎಂ.ವಿ.ವೆಂಕಟರಮಣ. ಇತರರರು ಹಾಜರಿದ್ದರು.




