ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ ನಾನು ಈ ಭಾಗಕ್ಕೆ ಬಂದಿರಲಿಲ್ಲ ಆದರೆ ಇಲ್ಲಿನ ನನ್ನ ಸ್ನೇಹಿತರಾದ ಕೋಲಾರ ಲೋಕಸಭಾದ ಮಾಜಿ ಸಂಸದ ಎಸ್.ಮುನಿಸ್ವಾಮಿ,ಆಯೋಜಕರಾದ ಸತ್ಯನಾರಾಯಣ ಮಹೇಶ್,ಹಾಗೂ ಬಿಜೆಪಿ ಮುಖಂಡ ಜಿ.ಎನ್.ವೇಣು ಗೋಪಾಲ್ ಚಿಂತಾಮಣಿಯಲ್ಲಿ ನಡೆಯುತ್ತಿರುವ ದಸರಾಗೆ ಭಾಗವಹಿಸುವಂತೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಭಾಗವಹಿಸಿದ್ದು,ನಾನು ಇಲ್ಲಿಗೆ ಚಿಂತಾಮಣಿ ದಸರಾದಲ್ಲಿ ಭಾಗವಹಿಸಲು ಬಂದಿದ್ದೇನೆಂದರು.
ಮೈಸೂರಿನಲ್ಲಿ ದಸರಾ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತೆ,ಆದರೆ ಚಿಂತಾಮಣಿಯಲ್ಲಿ ಎಲ್ಲ ಜಾತಿಯವರು ಒಗ್ಗೂಡಿ ತಮ್ಮದೆ ಹಣವನ್ನು ಒಗ್ಗೂಡಿಸಿಕೊಂಡು ಮಾಡುತ್ತಿದ್ದು ದೇವಿಯ ಆರಾಧನೆ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದ್ದು,ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಶ್ರೇಯಸ್ಸು,ಚೈತನ್ಯ,ಸುಭಿಕ್ಷೆಯನ್ನು ಕೊಡಲೆಂದು ಆಶಿಸಿದರು.
ಸಿದ್ಧರಾಮಯ್ಯನವರು 8 ವರ್ಷಗಳ ಸುದೀರ್ಘ ಆಡಳಿತ ವನ್ನು ನಡೆಸಿದ್ದು ಅವರ ವಿರುದ್ಧ ನಡೆದಿರುವ ಷಡ್ಯಂತ್ರಗಳಿಗೆ ಅವರು ದೂರು ನೀಡಿದ್ದು ತನಿಖೆ ನಡೆಸುವಂತೆ ಕೇಂದ್ರದ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದು ಸಿಎಂ. ಡಿ.ಕೆ.ಶಿವ ಕುಮಾರ್ ತನಿಖೆಗೆ ಆದೇಶಿಸಿದ್ದು ಅದನ್ನು ದೊಡ್ಡ ವಿಚಾರ ಮಾಡುವಂತಿಲ್ಲವೆಂದರು.ಇದನ್ನು ಪ್ರತಿನಿತ್ಯ ಒಂದು ಧಾರವಾಹಿಯ ರೂಪದಲ್ಲಿ ಬಿಂಬಿಸುವ ಅವಶ್ಯಕತೆ ಯಿಲ್ಲವೆಂದರು.ಸಿದ್ದರಾಮಯ್ಯ ನವರಿಗೆ 45 ವರ್ಷದ ರಾಜಕೀಯ ಹಿನ್ನೆಲೆ ಇದೆ ಅವರಿಗೆ ನಮಗೂ ಸೈದಾಂತಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರಬಹುದು ಆದರೆ ವೈಯುಕ್ತಿಕ ಚಾರಿತ್ರ್ಯವಧೆ ಮಾಡುವಷ್ಟು ಕೀಳುಮಟ್ಟದ ರಾಜಕಾರಣಿ ನಾನು ಮತ್ತು ನಮ್ಮ ಪಕ್ಷಕ್ಕೆ ಇಲ್ಲವೆಂದರು. ರಾಜ್ಯದಲ್ಲಿ ಬರಗಾಲ ದೊಡ್ಡ ಸಮಸ್ಯೆ ಬಹುತೇಕ ತಾಲೂಕು ಗಳು ಬರ ಪೀಡಿತವಾಗಿದ್ದು,ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡುವಲ್ಲಿ,ಯುವ ನಿಧಿ ನೀಡುವಲ್ಲಿ,ನಿರುದ್ಯೋಗ ಭತ್ಯೆ ಒದಗಿಸುವಲ್ಲಿ ಸರ್ಕಾರಿ ವಿಫಲವಾಗಿದ್ದು, 2.84 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿಮಾಡುವಲ್ಲಿ -ವಿಫಲವಾಗಿದೆಯೆಂದು ಸರ್ಕಾರದ ವಿರುದ್ಧ ಗುಡಿಗಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಆಯಾಗಳಿಗೆ 10 ಸಾವಿರ ಸಂಬಳ ಮಾಡುತ್ತೇವೆಂದು ನಿಸಾಯಕವಾಗಿದೆಯೆಂದು ನುಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಮುಖಂಡ ಜಿ.ಎನ್.ವೇಣು ಗೋಪಾಲ್,ಸತ್ಯನಾರಾಯಣ ಮಹೇಶ್,ನಗರ ಘಟಕದ ನಿಕಟಪೂರ್ವ ಅಧ್ಯಕ್ಷ ಮಹೇಶ್ ಬೈ,ಕುರುಟಹಳ್ಳಿ ಡಾಬಾ ಮಂಜುನಾಥ್,ನಗರ ಘಟಕದ ಅಧ್ಯಕ್ಷ ಗೋವಿಂದರಾಜು, ನಿಕಟಪೂರ್ವ ಗ್ರಾಮಾಂತರ ಅಧ್ಯಕ್ಷ ಶಿವಾರೆಡ್ಡಿ, ಮಂಜುನಾಥಚಾರಿ,ಆಂಜನೇಯರೆಡ್ಡಿ,ಗಾಜಲಶಿವ ಸೇರಿದಂತೆ ಹಿಂದೂ ಭಾಂದವರು.ಯುವಕರು,ಮಾತೆಯರು ಇದ್ದರು.
ಚಿಂತಾಮಣಿ | ಸಿದ್ದರಾಮಯ್ಯ ವೈಯಕ್ತಿಕ ಚಾರಿತ್ರ್ಯವಧೆ ಮಾಡುವ ಸಣ್ಣತನ ನಮಗಿಲ್ಲ: ಪ್ರತಾಪ್ ಸಿಂಹ
- Advertisement -
ಪೋಸ್ಟ್ ಹಂಚಿಕೊಳ್ಳಿ:





