ಚಿಕ್ಕಬಳ್ಳಾಪುರ | ಗೃಹಲಕ್ಷ್ಮಿ ಸಾಕು, ರಾಜಲಕ್ಷ್ಮಿ ಯಾಕೆ ಬೇಕು ಎಂದು ಕಾಂಗ್ರೆಸ್‌ ಭಾವಿಸಿದೆ :ಸಂಸದ ಡಾ.ಕೆ.ಸುಧಾಕರ್‌

Date:

ಕಳೆದ 60 ವರ್ಷಗಳಿಂದ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ತರದ ಕಾಂಗ್ರೆಸ್‌, ನಾರಿ ಶಕ್ತಿ ವಂದನಾ ಅಧಿನಿಯಮವನ್ನು ವಿರೋಧಿಸಿ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್‌ ಸೀಟು ಕೊಡುವ ಕಾಂಗ್ರೆಸ್‌, ವಿಧಾನಸೌಧಕ್ಕೆ ಹೋಗಲು ಸೀಟು ಕೊಡುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್‌ ಟೀಕಿಸಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ನಾರಿ ಶಕ್ತಿ ವಂದನಾ ಅಧಿನಿಯಮ ತಿದ್ದುಪಡಿ ಮಸೂದೆ ಜಾರಿ ಮಾಡಲು ಮುಂದಾಗಿದ್ದರು. ಆದರೆ ಕಾಂಗ್ರೆಸ್‌ ಸೇರಿದಂತೆ ಇಂಡಿ ಕೂಟದ ಸದಸ್ಯರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದಾರೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಎಂದಿಗೂ ಮಹಿಳಾ ಮೀಸಲಾತಿ ನೀಡಲಿಲ್ಲ. 1996 ರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಹಿಳಾ ಮೀಸಲಾತಿ ತರುವ ಪ್ರಯತ್ನ ಮಾಡಿದಾಗ, ಯಾರೂ ಬೆಂಬಲ ಕೊಡಲಿಲ್ಲ. ಇದೇ ರೀತಿ ಅಟಲ್‌ ಬಿಹಾರಿ ವಾಜಪೇಯಿ ಪ್ರಯತ್ನ ಮಾಡಿದ್ದರು. ಡಾ.ಮನಮೋಹನ್‌ ಸಿಂಗ್‌ ಕಾಲದಲ್ಲೂ ರಾಜ್ಯಸಭೆಯಲ್ಲಿ ಮಾತ್ರ ಮಸೂದೆ ಪಾಸ್‌ ಆಗಿತ್ತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದು ಇತಿಹಾಸ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಮಹಿಳೆಯರಿಗೆ 2,000 ರೂ. ಕೊಟ್ಟರೆ ಸಾಕು, ಅವರಿಗ್ಯಾಕೆ ರಾಜಕಾರಣ ಎಂದು ಕಾಂಗ್ರೆಸ್‌ ಅಂದುಕೊಂಡಿದೆ. ಗೃಹಲಕ್ಷ್ಮಿ ಸಾಕು, ರಾಜಲಕ್ಷ್ಮಿ ಯಾಕೆ ಬೇಕು ಎಂದು ಕಾಂಗ್ರೆಸ್‌ ಭಾವಿಸಿದೆ. ಒಂದು ಸಮುದಾಯದ ಪ್ರಗತಿಯನ್ನು ಅಳೆಯಬೇಕೆಂದರೆ, ಆ ಸಮುದಾಯದಲ್ಲಿನ ಮಹಿಳೆಯರ ಪ್ರಗತಿಯನ್ನು ಅಳೆಯಬೇಕು ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿದ್ದರು. ಬಿ.ಆರ್.ಅಂಬೇಡ್ಕರ್‌‌ ಹಿಂದೂ ಬಿಲ್‌ ಕೋಡ್‌ ತಂದಾಗ ಕಾಂಗ್ರೆಸ್‌ ಅದನ್ನು ವಿರೋಧಿಸಿತ್ತು. ಇದು ಮಹಿಳೆಯರಿಗೆ 33% ಮೀಸಲು ನೀಡುವ ಮಸೂದೆಯಾಗಿದ್ದು, ಇದನ್ನು ಕಾಂಗ್ರೆಸ್‌ ಯಾಕೆ ವಿರೋಧಿಸುತ್ತಿದೆ? ಎಂದು ಪ್ರಶ್ನಿಸಿದರು.

ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಅನಿಲ ಸಂಪರ್ಕ ನೀಡಲಾಗಿದೆ. 10 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಿಳೆಯರ ಹೆಸರಲ್ಲಿ 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮುದ್ರಾ, ಲಕ್‌ಪತಿ ದೀದಿ ಮೊದಲಾದ ಯೋಜನೆಗಳು ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನೆರವಾಗಿದೆ. ಇದರ ಜೊತೆಗೆ ರಾಜಕೀಯ ಶಕ್ತಿ ನೀಡಿದ್ದರೆ, ಮಹಿಳೆಯರು ಶಾಸಕರು, ಸಂಸದರು ಆಗುತ್ತಿದ್ದರು. ಇದರಿಂದ ದೊಡ್ಡ ಬದಲಾವಣೆಯಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರ ಬಸ್‌ ಸೀಟು ಕೊಟ್ಟರೆ ಸಾಕೆಂದು ಅಂದುಕೊಂಡಿದೆ. ಅದರ ಬದಲು ವಿಧಾನಸೌಧದಲ್ಲಿ ಸೀಟು ಕೊಡಬೇಕಿತ್ತು. ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಲು ಸೀಮಿತ ಎಂದು ಕಾಂಗ್ರೆಸ್‌ ಅಂದುಕೊಂಡಿದೆ. ಮಹಿಳೆಯರು ಸಾಲಿನಲ್ಲಿ ನಿಂತು ಮತ ಮಾತ್ರ ಹಾಕಬೇಕು. ಮತ ಕೊಡಲು ಮಾತ್ರ ಮಹಿಳೆಯರು ಬೇಕು, ಮತ ಪಡೆಯಲು ಮಹಿಳೆಯರಿಗೆ ಅರ್ಹತೆ ಇಲ್ಲವೇ? ಈ ಮಸೂದೆಯ ಸೋಲು ದೇಶದ 70 ಕೋಟಿ ಮಹಿಳೆಯರ ಸೋಲು. ಮಸೂದೆ ಸೋತ ದಿನ ಭಾರತದ ಪ್ರಜಾಪ್ರಭುತ್ವದ ಕರಾಳ ದಿನ ಎಂದರು.

ಡಿಎಂಕೆ ಸದಸ್ಯರು ಉತ್ತರ-ದಕ್ಷಿಣ ಎಂದು ವಿಭಾಗ ಮಾಡಿದ್ದಾರೆ. ಈ ಹಿಂದೆ ಸಿಎಎ, 370 ರದ್ದು, ಜಿಎಸ್‌ಟಿ, ರಾಮಮಂದಿರ ನಿರ್ಮಾಣ, ರಾಷ್ಟ್ರೀಯ ಶಿಕ್ಷಣ ನೀತಿ ಮೊದಲಾದ ಸಂದರ್ಭಗಳಲ್ಲೂ ಇವರು ಹೀಗೆಯೇ ವಿರೋಧ ಮಾಡಿದ್ದರು. ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಇಲ್ಲವಾದರೂ ಯುವಜನರು ಬೀದಿಗೆ ಬರುವಂತೆ ಮಾಡಿದ್ದಾರೆ. ಪ್ರಗತಿಪರ ಚಿಂತನೆಗೆ ಕಾಂಗ್ರೆಸ್‌ ಯಾವಾಗಲೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ಪಾಕಿಸ್ತಾನದ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌, ಆಪರೇಶನ್‌ ಸಿಂದೂರ ಮೊದಲಾದ ಸಮಯದಲ್ಲೂ ವಿರೋಧ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರು ದೇಶದ ಪ್ರಗತಿಗೆ ಕಂಟಕವಾಗಿದ್ದಾರೆ. ಡಿಎಂಕೆ ಜೊತೆ ಕಾಂಗ್ರೆಸ್‌ ಸ್ನೇಹ ಹೊಂದಿದೆ. ಹಾಗಾದರೆ ಚುನಾವಣೆ ಮುಗಿಯುವ ವೇಳೆಗೆ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಗಬಹುದು ಎಂದು ವ್ಯಂಗ್ಯವಾಡಿದರು.

2029 ರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ತರಬೇಕೆಂಬ ಕಾರಣಕ್ಕೆ ಈ ತಿದ್ದುಪಡಿ ತರಲಾಗಿದೆ. ಸಂವಿಧಾನದ ವಿಧಿ 82 ರಲ್ಲಿ ಹೇಳಿರುವ ಪ್ರಕಾರ, ಜನಗಣತಿ ಬಳಿಕ ಮರುವಿಂಗಡಣೆಯ ಸಮಿತಿ ರಚಿಸಬೇಕು. ಜನಸಂಖ್ಯೆಯ ಆಧಾರದಲ್ಲೇ ಮರುವಿಂಗಡಣೆ ನಡೆಯಬೇಕೆಂದು ಹೇಳಲಾಗಿದೆ. ಹಾಗೆ ಮಾಡಿದ್ದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿತ್ತು. ಏಕೆಂದರೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿ ಆರ್ಥಿಕವಾಗಿ ಸುದೃಢವಾಗಿವೆ. ಐಟಿ ಕ್ಷೇತ್ರದಲ್ಲಿ ಕರ್ನಾಟಕ 40% ಪಾಲು ಹೊಂದಿದೆ. ಆದರೆ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಸಮರ್ಪಕವಾಗಿ ಜಾರಿಯಾಗಿಲ್ಲ. ಜನಸಂಖ್ಯೆಯ ಆಧಾರದಲ್ಲೇ ಮಾಡಿದ್ದರೆ ಕರ್ನಾಟಕದಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಸೂದೆಯಲ್ಲಿ ತಿದ್ದುಪಡಿ ತಂದು ಮತ್ತೆ ಮಂಡಿಸಿದ್ದಾರೆ. ಇದರಿಂದಾಗಿ ಎಲ್ಲ ರಾಜ್ಯಗಳಲ್ಲಿ ಶೇ.50 ರಷ್ಟು ಕ್ಷೇತ್ರ ಹೆಚ್ಚಿಸಲಾಗಿದೆ. ಇದು ಜಾರಿಯಾಗಿದ್ದರೆ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42 ಕ್ಕೆ ಏರುತ್ತಿತ್ತು. ತಮಿಳುನಾಡಲ್ಲಿ 39 ರಿಂದ 59 ಕ್ಕೆ, ಕೇರಳದಲ್ಲಿ 20 ರಿಂದ 30 ಕ್ಕೆ ಏರಿಕೆಯಾಗುತ್ತಿತ್ತು ಎಂದರು.

ಇದನ್ನು ಓದಿದ್ದೀರಾ..? ಕೋಲಾರ | ನಸೀರ್ ಅಹಮದ್‌ ವಜಾ ಮಾಡಿದ್ದಕ್ಕೆ ಉಲಮಾಗಳ ಆಕ್ರೋಶ

ಬೆಂಗಳೂರಿನ ಆಡಳಿತಕ್ಕೆ ಜಿಬಿಎ ರಚಿಸಿದ ಕಾಂಗ್ರೆಸ್‌ ಸರ್ಕಾರ ಐದು ಪಾಲಿಕೆಗಳನ್ನು ರಚಿಸಿದ್ದು, ವಾರ್ಡ್‌ಗಳ ಸಂಖ್ಯೆ 198 ರಿಂದ 369 ಆಗಿದೆ. ಕೊತ್ತನೂರು ವಾರ್ಡ್‌ನಲ್ಲಿ 10,926 ಮತದಾರರಿದ್ದರೆ, ರಾಜರಾಜೇಶ್ವರಿನಗರ ವಾರ್ಡ್‌ನಲ್ಲಿ 49,530 ಮತದಾರರಿದ್ದಾರೆ. ಇದರಿಂದಾಗಿ ಒಂದು ಮತ ಒಂದು ಮೌಲ್ಯ ಎಂಬ ತತ್ವಕ್ಕೆ ಧಕ್ಕೆಯಾಗಿದೆ. ಇದೇ ರೀತಿ ದೇಶದ ವಿವಿಧ ಕ್ಷೇತ್ರಗಳಲ್ಲೂ ತಾರತಮ್ಯವಾಗಿದೆ. ಸುಷ್ಮಾ ಸ್ವರಾಜ್‌, ಉಮಾ ಭಾರತಿ, ವಸುಂಧರಾ ರಾಜೇ, ಆನಂದಿ ಬೆನ್‌ ಪಟೇಲ್‌, ರಾಷ್ಟ್ರಪತಿ ದ್ರೌಪದಿ ಮುರ್ಮು ಹೀಗೆ ಅನೇಕ ಮಹಿಳೆಯರಿಗೆ ಬಿಜೆಪಿಯಿಂದ ಉನ್ನತ ಹುದ್ದೆಗಳ ಅವಕಾಶ ನೀಡಲಾಗಿದೆ. 60 ವರ್ಷ ಮಹಿಳೆಯರ ಬಗ್ಗೆ ಕರುಣೆ ತೋರಿದ ಕಾಂಗ್ರೆಸ್‌, ಮಹಿಳಾ ಮೀಸಲಾತಿಯನ್ನು ವಿರೋಧ ಮಾಡಿ ಮುಖವಾಡ ಕಳಚಿಕೊಂಡಿದೆ. ಒಬಿಸಿ ಬಗ್ಗೆ ಮಾತಾಡುವ ರಾಹುಲ್‌ ಗಾಂಧಿಯವರು ಮಂಡಲ್‌ ವರದಿಯನ್ನು ವಿರೋಧಿಸಿದ್ದು ಯಾರೆಂದು ಹೇಳಬೇಕಿದೆ. ಈ ಹಿಂದೆ ಯುಪಿಎ ಹತ್ತು ವರ್ಷ ಆಡಳಿತದಲ್ಲಿದ್ದರೂ ಜಾತಿ ಸಮೀಕ್ಷೆ ಯಾಕೆ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ; ಮಳೆಯಲ್ಲೂ ಮುಂದುವರಿದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ...

ಉಡುಪಿ | 110 ಕೋಟಿ ರೂ. ವೆಚ್ಚದ ಆಸ್ಪತ್ರೆಗೆ ಹಳೆಯ ಪರಿಕರಗಳ ಅಳವಡಿಕೆ ಸಲ್ಲದು: ಫ್ರ್ಯಾಂಕಿ ಡಿಸೋಜ

ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಉಡುಪಿ ಜಿಲ್ಲಾ...

ಹಾಸನ | ಮನೆಯಲ್ಲಿಯೇ ವ್ಯಕ್ತಿ ಹತ್ಯೆ; ಪ್ರಕರಣ ದಾಖಲು 

ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ...