ಸಿದ್ದರಾಮಯ್ಯ: ‘ಹಠವಾದಿ’ಯಿಂದ ‘ರಾಜಿ’ ರಾಜಕಾರಣದತ್ತ?

Date:

ಕರ್ನಾಟಕ ರಾಜಕಾರಣದ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ನಡೆಗಳು, ದಾವಣಗೆರೆ ಉಪಚುನಾವಣೆಯ ಅಖಾಡ ಮತ್ತು ಮುಸ್ಲಿಂ ಮುಖಂಡರ ಅಸಮಾಧಾನಗಳು ಒಂದಕ್ಕೊಂದು ಬೆಸೆದುಕೊಂಡಿವೆ. ʼಅಹಿಂದʼ ರಾಜಕಾರಣದ ನೇತಾರನಾಗಿ ಗುರುತಿಸಿಕೊಂಡ ಸಿದ್ದರಾಮಯ್ಯನವರಿಗೆ ಈಗ ಸ್ವಪಕ್ಷದೊಳಗಿನ ಭಿನ್ನಮತ ಮತ್ತು ಸಮುದಾಯಗಳ ಬೇಡಿಕೆಗಳನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ.

ಸಿಎಂ ಸಿದ್ದರಾಮಯ್ಯನವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದು ಅಹಿಂದ ರಾಜಕೀಯಕ್ಕೆ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿರುವ ಸತೀಶ್‌ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.  

ಸಿದ್ದರಾಮಯ್ಯ: ‘ಹಠವಾದಿ’ಯಿಂದ ‘ರಾಜಿ’ ರಾಜಕಾರಣದತ್ತ?

- Advertisement -

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸೈದ್ಧಾಂತಿಕ ವಿಚಾರದಲ್ಲಿ ಹಠವಾದಿಯಾಗಿದ್ದರು. ಆದರೆ, ಮುಡಾ ಹಗರಣದ ಆರೋಪಗಳು ಮತ್ತು ಪಕ್ಷದೊಳಗಿನ ಹೈಕಮಾಂಡ್ ಪ್ರಭಾವದ ನಡುವೆ ಸಿದ್ದರಾಮಯ್ಯ ಈಗ ‘ರಾಜಿ ಸೂತ್ರ’ಗಳಿಗೆ ಶರಣಾದಂತೆ ಕಾಣುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದೊಂದಿಗೆ ಅಧಿಕಾರ ಹಂಚಿಕೆ ಅಥವಾ ಹೊಂದಾಣಿಕೆಯ ಅನಿವಾರ್ಯತೆ ಅವರಿಗೆ ಎದುರಾಗಿದೆ.ಇನ್ನು, ಶಾಸಕರ ಅಸಮಾಧಾನ ಶಮನಗೊಳಿಸಲು ಮೇರೆ ಮೀರಿ ‘ಸಮಾಧಾನ ಪಡಿಸುವ’ ರಾಜಕಾರಣಕ್ಕೆ ಅವರು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ಕೂಡ ಕೇಳಿ ಬಂದಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ದಾವಣಗೆರೆ ಉಪಚುನಾವಣೆ: ಪ್ರತಿಷ್ಠೆಯ ಕಣ

ದಾವಣಗೆರೆ ರಾಜಕಾರಣ ಯಾವಾಗಲೂ ಕುತೂಹಲಕಾರಿ. ದಾವಣಗೆರೆಯಲ್ಲಿ ಇತ್ತೀಚೆಗೆ(ಏ.09) ನಡೆದ ಉಪಚುನಾವಣೆ ಅಥವಾ ಸ್ಥಳೀಯ ರಾಜಕೀಯ ಬೆಳವಣಿಗೆಗಳು ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಂತೂ ನಿಜ. ಮಧ್ಯ ಕರ್ನಾಟಕದಲ್ಲಿ ಅವರ ಹಿಡಿತ ಎಷ್ಟಿದೆ ಎಂಬುದನ್ನೂ ತೋರಿಸುವ ಕಣವಾಗಿಯೂ ಬದಲಾಗಿದೆ. ಅಲ್ಪಸಂಖ್ಯಾತ ಮತಗಳೂ ಹೆಚ್ಚಿನ ಸಂಖ್ಯೆಯಲ್ಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸೃಷ್ಟಿಯಾದ ಸ್ಥಳೀಯ ನಾಯಕರ ಅಸಮಾಧಾನ ಮತ್ತು ಅದರ ಸುತ್ತ ನಡೆದ ರಾಜಕೀಯ ಬೆಳವಣಿಗೆಗಳು, ಪಕ್ಷದ ಹಿರಿಯ ಅಲ್ಪ ಸಂಖ್ಯಾತ ನಾಯಕರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸೋಲಬೇಕು ಎನ್ನುವ ಕಾರಣಕ್ಕೆ ʼಷಡ್ಯಂತ್ರʼ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರ ಜವಾಬ್ದಾರಿಯಿಂದ ವಜಾ, ರಾಜಿನಾಮೆಗಳು ಕಾಂಗ್ರೆಸ್‌ ಮತ್ತು ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಅಕ್ಷರಶ ಹೆಣಗಾಡುವಂತೆ ಮಾಡಿದೆ.

ಕಾಂಗ್ರೆಸ್‌ನ ಅತ್ಯಂತ ನಿಷ್ಠಾವಂತ ಮತಬ್ಯಾಂಕ್ ಎನ್ನಲಾದ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಮತ್ತದಕ್ಕೆ ʼಈ ಅಸಮಾಧಾನವೆಲ್ಲಾ ಚುನಾವಣಾ ರಾಜಕೀಯದಲ್ಲಿ ತೀರಾ ಸಾಮಾನ್ಯʼವೆಂಬಂತೆ ಕಾಂಗ್ರೆಸ್‌ ನಡೆದುಕೊಂಡಿದ್ದು ಪ್ರಶ್ನಾರ್ಹವಾಗಿದೆ.

ಇದನ್ನೂ ಓದಿ : ‘ಅಹಿಂದ’ದಿಂದ ಬೆಳೆದ ಸಿದ್ದರಾಮಯ್ಯ, ‘ಅಹಿಂದ’ಕ್ಕೆ ಬದ್ಧರಾಗಿದ್ದಾರೆಯೇ?

ಸಿದ್ದರಾಮಯ್ಯ ಎಂಬ ರಾಜಕಾರಣಿಯ ಇಡೀ ವ್ಯಕ್ತಿತ್ವ ರೂಪಿತವಾಗಿದ್ದೇ ಅವರ ಸೈದ್ಧಾಂತಿಕ ಬದ್ಧತೆಯ ಮೇಲೆ. ‘ಸೋಷಿಯಲಿಸ್ಟ್’ ಹಿನ್ನೆಲೆಯಿಂದ ಬಂದ ಅವರು, ಲೋಹಿಯಾ ವಾದ ಮತ್ತು ಅಹಿಂದ ಸಿದ್ಧಾಂತವನ್ನು ತಮ್ಮ ರಾಜಕೀಯ ಬಲವನ್ನಾಗಿ ವೃದ್ಧಿಸಿಕೊಂಡವರು. ಆದರೆ, ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, “ಸಿದ್ದರಾಮಯ್ಯ ಸಿದ್ಧಾಂತವನ್ನು ಬಿಟ್ಟು ಕೊಡುತ್ತಿದ್ದಾರೆಯೇ ಅಥವಾ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆಯೇ?” ಎಂಬ ಪ್ರಶ್ನೆ ಗಂಭೀರವಾಗಿ ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯನವರು ಈ ಹಿಂದೆ “ತತ್ವ ಸಿದ್ಧಾಂತಗಳ ವಿಷಯದಲ್ಲಿ ನಾನು ತಲೆಬಾಗುವುದಿಲ್ಲ” ಎನ್ನುತ್ತಿದ್ದರು. ಆದರೆ, ಈಗ ಅವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಕ್ಷದ ಒಳಗಿನ ವಿರೋಧಿ ಬಣಗಳ ಜೊತೆ ಮತ್ತು ಹೈಕಮಾಂಡ್ ಸೂಚನೆಯಂತೆ ರಾಜಿ ಮಾಡಿಕೊಳ್ಳುವುದು ಅನಿವಾರ್ಯದ ಹಾದಿ ಹಿಡಿದಿದ್ದಾರೆ. ಇಲ್ಲಿ ಸಿದ್ಧಾಂತಕ್ಕಿಂತ ‘ಅಧಿಕಾರ ಉಳಿಸಿಕೊಳ್ಳುವ ತಂತ್ರ’ ಮೇಲುಗೈ ಸಾಧಿಸುತ್ತಿದೆ.

ಸಿದ್ದರಾಮಯ್ಯನವರನ್ನು ತಮ್ಮ ಪರಮೋಚ್ಚ ನಾಯಕ ಎಂದು ನಂಬಿದ್ದ ಮುಸ್ಲಿಂ ಸಮುದಾಯದಲ್ಲಿ ಈಗ ಆತಂಕ ಮೂಡಿದೆ. ಸಿದ್ದರಾಮಯ್ಯನವರು ಬಿಜೆಪಿಯ ‘ಹಿಂದುತ್ವ’ ಸಿದ್ಧಾಂತವನ್ನು ಎದುರಿಸಲು ಹೋಗಿ, ತಮ್ಮದೇ ಆದ ‘ಸೆಕ್ಯುಲರಿಸಂ’ ಸಿದ್ಧಾಂತವನ್ನು ದುರ್ಬಲಗೊಳಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ವಕ್ಫ್ ಆಸ್ತಿ ವಿವಾದದಲ್ಲಿ ಅವರು ತೆಗೆದುಕೊಂಡ ‘ಯೂ-ಟರ್ನ್’ ನಿರ್ಧಾರಗಳು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಸಮಾಧಾನದ ಬಗ್ಗೆ ಸಿದ್ದರಾಮಯ್ಯ ತೆಗೆದುಕೊಂಡ ನಿರ್ಧಾರಗಳೆಲ್ಲಾ ಅವರು ಸಿದ್ಧಾಂತಕ್ಕಿಂತ ‘ಚುನಾವಣಾ ನಷ್ಟ’ವನ್ನು ತಪ್ಪಿಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಸಿದ್ದರಾಮಯ್ಯನವರು ಜೆಡಿಎಸ್ ತೊರೆದಿದ್ದೇ ಅದರ ‘ಜಾತ್ಯತೀತ’ ಸಿದ್ಧಾಂತದ ಮೇಲಿನ ಭಿನ್ನಾಭಿಪ್ರಾಯದಿಂದ. ಆದರೇ, ಈಗ ಬಂಡಾಯ ಸ್ವಭಾವದ ಸಿದ್ದರಾಮಯ್ಯನವರು ಒಂದು ರಾಷ್ಟ್ರೀಯ ಪಕ್ಷದ ಶಿಸ್ತಿಗೆ ಬಾಗಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಲ್ಲಿ ಸಿದ್ಧಾಂತಕ್ಕಿಂತ ‘ಪಕ್ಷದ ಶಿಸ್ತು’ ಮತ್ತು ‘ಪಕ್ಷದ ಸಮಗ್ರ ಹಿತಾಸಕ್ತಿ’ ಮುಖ್ಯವಾಗುತ್ತಿದೆ.

ಇನ್ನು, ಈ ಹಿಂದೆ ‘ನಾಸ್ತಿಕ’ ಅಥವಾ ‘ದೇವಸ್ಥಾನಕ್ಕೆ ಹೋಗುವುದಿಲ್ಲ’ ಎನ್ನುತ್ತಿದ್ದವರು, ಈಗ ಸಾರ್ವಜನಿಕವಾಗಿ ಮಠ-ಮಾನ್ಯಗಳಿಗೆ ಭೇಟಿ ನೀಡುವುದು ಅವರ ಮೂಲ ಸೈದ್ಧಾಂತಿಕ ನಿಲುವಿನಿಂದ ದೂರ ಸರಿಯುತ್ತಿದ್ದಾರೆ ಎನ್ನುವುದಕ್ಕೆ ಪೂರಕ ಸಾಕ್ಷಿಯಾಗಿ ಕಾಣಿಸುತ್ತಿದೆ. ಅಥವಾ ಹೈಕಮಾಂಡ್‌ ನಿರ್ದೇಶನಕ್ಕೆ ತಲೆ ಬಾಗಿದ್ದಾರಾ ಎನ್ನುವ ಸಹಜ ಪ್ರಶ್ನೆ ಇಲ್ಲಿ ಮೂಡುತ್ತಿದೆ.


ಸಿದ್ಧಾಂತವೋ? ಅಸ್ತಿತ್ವವೋ?

ಯಾವುದೇ ಒಬ್ಬ ರಾಜಕಾರಣಿಗೆ ಸಿದ್ಧಾಂತ ಇರುವುದು ಆತ ಅಧಿಕಾರಕ್ಕೆ ಬರುವವರೆಗೆ ಮಾತ್ರ ಎಂಬ ಮಾತಿದೆ. ಸಿದ್ದರಾಮಯ್ಯನವರು ಸಿದ್ಧಾಂತವನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದ್ದಾರೆ ಎಂದು ಹೇಳುವುದು ಕಷ್ಟವಾದರೂ, “ಅಸ್ತಿತ್ವ ಉಳಿಸಿಕೊಳ್ಳಲು ಸಿದ್ಧಾಂತವನ್ನು ಗಾಳಿಗೆ ತೂರುತ್ತಿದ್ದಾರೆ” ಎಂಬ ಟೀಕೆಯಲ್ಲಿ ಹುರುಳಿಲ್ಲದಿಲ್ಲ. ಸಿದ್ದರಾಮಯ್ಯನವರು ಈಗ ಒಬ್ಬ ‘ಸೈದ್ಧಾಂತಿಕ ಪ್ರತಿಪಾದಕ’ನಿಗಿಂತ ಒಬ್ಬ ‘ಚಾಣಾಕ್ಷ ರಾಜತಾಂತ್ರಿಕ’ನಾಗಿ ಬದಲಾಗುತ್ತಿದ್ದಾರೆ. ರಾಜಕೀಯದಲ್ಲಿ ಇದು ಸಾಮಾನ್ಯ ಸಂಗತಿಯಾದರೂ, ಅವರ ರಾಜಕೀಯ ಅನುಯಾಯಿಗಳಲ್ಲಿ ಇದು ಅಸಮಾಧಾನ ಮೂಡಿಸಿದೆ ಎನ್ನುವುದಂತೂ ಸತ್ಯ. ಸಿದ್ಧಾಂತದ ಹಾದಿಯಲ್ಲಿ ನಡೆದರೆ ಅಧಿಕಾರ ಹೋಗಬಹುದು ಎಂಬ ಭಯ, ಅವರನ್ನು ರಾಜಿ ಹಾದಿಗೆ ತಳ್ಳಿದೆ ಎಂದೇ ಕಾಣಿಸುತ್ತಿದೆ. ಇದು ಅವರ ಬೆಂಬಲಿಗರಿಗೆ ನಿರಾಸೆ ಮೂಡಿಸಿದರೆ, ರಾಜಕೀಯ ವಿರೋಧಿಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ.

ಸಿದ್ಧಾಂತ ಎನ್ನುವುದು ದಾರಿದೀಪವಾಗಬೇಕೇ ಹೊರತು ಅಧಿಕಾರದ ಹಾದಿಯಲ್ಲಿ ಅಡ್ಡಬರುವ ಕಲ್ಲಾಗಬಾರದು ಎಂಬುದು ಸತ್ಯ. ಇಲ್ಲಿ, ಸಿದ್ದರಾಮಯ್ಯರಿಗೆ ಸಿದ್ಧಾಂತ ದಾರಿದೀಪವೇ ಆಗಲಿ ಎನ್ನುವುದೇ ಮುಖ್ಯ ಉದ್ದೇಶ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...