ಚಿಕ್ಕಬಳ್ಳಾಪುರ | ಸಂವಿಧಾನದ ಪೀಠಿಕೆ ಅಡಿಯಲ್ಲಿ ಕೆಲಸ ಮಾಡಬೇಕು: ಎನ್ ವೆಂಕಟೇಶ್

Date:

Advertisements

ಸಮಾನತೆ, ಸಹೋದರತೆ ಭ್ರಾತೃತ್ವವನ್ನು ಸಾರುವ ಭಾರತದ ಸಂವಿಧಾನದ ಪೀಠಿಕೆ ಅಡಿಯಲ್ಲಿ ನಾವು ಕೆಲಸ ಮಾಡಬೇಕು. ಸಂವಿಧಾನದ ಆಶಯದಂತೆ ಎಲ್ಲರು ಸಮಾನತೆಯಿಂದ ಬದುಕಲು ನಾವೆಲ್ಲ ಕೆಲಸ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಹಿರಿಯ ಮುಖಂಡ ಎನ್ ವೆಂಕಟೇಶ್ ಹೇಳಿದರು.

ಚಿಕ್ಕಬಳ್ಳಾಪುರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದಸಂಸ ಆಯೋಜಿಸಿದ್ದ ’ಬಡವರ ಗ್ಯಾರಂಟಿಗಳು ದೇಶದ ವಾರಂಟಿಗಳು’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ದೇಶವನ್ನು ಕಟ್ಟುವುದರಲ್ಲಿ ಭಾಗಿಯಾಗುತ್ತಿರುವ ಬಡವರ ದೃಷ್ಟಿಕೋನದಿಂದ ಯೋಚಿಸಿ ಸರ್ಕಾರಗಳು ಯೋಜನೆಗಳನ್ನು ರೂಪಿಸುವುದು ಅತ್ಯಾವಶ್ಯವಾಗಿದೆ” ಎಂದರು.

ಉಪನ್ಯಾಸಕ ಬಿ.ಸಿ ಬಸವರಾಜ್ ಮಾತನಾಡಿ, “ಮುಖ್ಯ ವಾಹಿನಿಯ ಮಾಧ್ಯಮಗಳು ‘ಗ್ಯಾರಂಟಿ ಯೋಜನೆಗಳಿಂದ ಆಗುವ ಪ್ರಯೋಜನ ಏನು? ಅನಾನುಕೂಲ ಏನು’ ಎಂಬ ಚರ್ಚೆ ಮಾಡಬೇಕಿತ್ತು. ಆದರೆ, ಅವರು ಅತ್ಯಂತ ಬೇಜಾವಾಬ್ದಾರಿಯಿಂದ ಗ್ಯಾರಂಟಿ ಯೋಜನೆಗಳ ವಿರುದ್ದ ಯುದ್ಧೋಪಾದಿಯಲ್ಲಿ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಕಾಂಗ್ರೆಸ್‌ ಸಚಿವರಲ್ಲಿಯೇ ಮಾಹಿತಿ ಕೊರತೆ ಇದೆ. ಇಂತಹ ಚರ್ಚೆ ಹಾಗೂ ಕಾರ್ಯಾಗಾರಗಳನ್ನು ಮೊದಲು ಕಾಂಗ್ರೆಸ್‌ ಸಚಿವರಿಗೆ ಮಾಡಬೇಕಿದೆ. ಕಲ್ಯಾಣ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ. ಶ್ರೀಮಂತ ಕಂಪನಿಗಳಿಗೆ ಅನಾವಶ್ಯಕ ಸಾಲಗಲನ್ನು ಕೊಡಲಾಗಿದೆ. ಆ ಸಾಲಗಳು ನಿಜವಾದ ಬಿಟ್ಟಿ ಭಾಗ್ಯಗಳು” ಎಂದು ಹೇಳಿದರು.

Advertisements

ಕಾರ್ಯಕ್ರಮದಲ್ಲಿ ಈದಿನ.ಕಾಮ್‌ನ ಡಾ. ಎಚ್.ವಿ ವಾಸು, ದಸಂಸ ಮುಖಂಡ ರಾಜಕಾಂತ್, ಮುನಿರೆಡ್ಡಿ, ಸಿ.ಜಿ ಗಂಗಪ್ಪ, ಬಿ.ವಿ ಆನಂದ್, ಬಿ.ವಿ ವೆಂಕಟರವಣಪ್ಪ, ಚಲಪತಿ ಸೇರಿದಂತೆ ಹಲವರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X