ಸಂಸತ್‌ನಲ್ಲಿ ಬಣ್ಣದ ಹೊಗೆ ಸಿಡಿಸಿದ ದಾಳಿಕೋರರಿಗೆ ಸಂಸತ್ ಒಳಗೆ ಪ್ರವೇಶಿಸಿಲು ಪಾಸ್‌ಗಳನ್ನು ಕೊಡಿಸಿರುವ ಪ್ರತಾಪ್ ಸಿಂಹ ಒಬ್ಬ ದೇಶದ್ರೋಹಿ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರತಾಪ್ ಸಿಂಹನಷ್ಟು ಅಯೋಗ್ಯ, ಮುಟ್ಟಾಳ ಮತ್ತೊಬ್ಬನಿಲ್ಲ. 45 ವರ್ಷ ರಾಜಕೀಯ ಅನುಭವ ಹೊಂದಿರುವ ಸಿದ್ಧರಾಮಯ್ಯನವರ ಬಗ್ಗೆ ಮಾತಾಡ್ತಾರೆ” ಎಂದು ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಅವರೇ ಬಾಯ್ ಮುಚ್ಚಿಕೊಂಡು ಇರಬೇಕು. ನಿಮ್ಮ ಬಾಯಿ ತೆವಲು ಕಡಿಮೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರ ಗೈರು ಕುರಿತು ಪ್ರತಿಕ್ರಿಯಿಸಿದ ಶಾಸಕರು, ಶ್ರೀರಾಮ ಹಿಂದೂಗಳ ಆರಾಧ್ಯ ದೈವ. ನಾನೂ ಕೂಡ ಶ್ರೀರಾಮ ಭಕ್ತ. ಶ್ರೀರಾಮನನ್ನ ಆರಾಧಿಸುತ್ತೇವೆ.
ಅಲ್ಲಾ, ಏಸುವನ್ನ ಗೌರಿವಿಸುತ್ತೇವೆ. ಬಿಜೆಪಿಯವರ ತರ ಧರ್ಮಗಳ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್‌ನವರು ಎಲ್ಲಾ ಧರ್ಮಗಳನ್ನ ಸಮಾನವಾಗಿ ಕಾಣುತ್ತೇವೆ ಎಂದು ಹೇಳಿದರು.
ಮುಂದುವರಿದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ. ಸುಧಾಕರ್ ಅಖಾಡಕ್ಕಿಳಿದರೆ ಅವರಿಗೆ ಎದುರಾಳಿಯಾಗಿ ನಾನೇ ನಿಲ್ಲುತ್ತೇನೆ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿ ಲೋಕಸಭೆ ಚುನಾವಣೆಯಲ್ಲಿ ಎದುರಾಳಿಯಾಗಿ ಮತ್ತೆ ಸೋಲಿಸುತ್ತೇನೆ ಎಂದು ಗುಡುಗಿದರು.