ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಸಂಘವು ರಾಜ್ಯವ್ಯಾಪ್ತಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ.
ಕನಿಷ್ಠ ವೇತನ, ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಬೇಕು, ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಾಹಣ ಮೌಲ್ಯಮಾಪನ ಕೈಬಿಡಬೇಕು, ನಗರ ಆಶಾಗಳಿಗೆ 2000 ಗೌರವಧನ ಹೆಚ್ಚಳ ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಜಿಲ್ಲಾಡಳಿತದ ಭವನದ ಎದುರು ಆಶಾ ಕಾರ್ಯಕರ್ತೆಯರು ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ. ನೂರಾರು ಆಶಾ ಕಾರ್ಯಕರ್ತೆಯರು ನಮ್ಮ ಕಷ್ಟಗಳನ್ನು ಸರ್ಕಾರ ನೋಡಲಿ ನಾವು ಪಡುವ ಶ್ರಮದ ಪ್ರತಿಫಲ ಕನಿಷ್ಠ ವೇತನ ಸರ್ಕಾರ ನೀಡಲೆಂದು ಸರ್ಕಾರಕ್ಕೆ ಇದೆ ವೇಳೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಸರಸ್ವತಮ್ಮ ಹಾಗೂ ಕಾರ್ಯಕರ್ತೆ ಪಾರ್ವತಮ್ಮ ಮಾತನಾಡಿ ಎಷ್ಟೇ ಒತ್ತಡ ಇದ್ದರೂ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಇನ್ನು ಕೋವಿಡ್ ಸಮಯದಲ್ಲಿ ಎಲ್ಲರೂ ಮನೆಯಲಿದ್ದರೆ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ಜನರ ಸೇವೆ ಮಾಡುತ್ತಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ | ಜಿ.ಪಂ. ಕಾರು ಚಾಲಕ ಬಾಬು ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ: ಕಾಂಗ್ರೆಸ್‌ನಿಂದ ಪ್ರತಿಭಟನೆ
ಇನ್ನೂ ಹಗಲಿರುಳು ಶ್ರಮಿಸಿರುವ ನಮ್ಮ ಶ್ರಮದ ಪ್ರತಿಫಲ ನೀಡಲು ಸರ್ಕಾರಕ್ಕೆ ಕಾಳಜಿಯಿಲ್ಲ ಇಂತಹ ಪರಿಸ್ಥಿತಿಯಲ್ಲಿ ನಮ್ಮ ನೋವು ಯಾರ ಬಳಿ ತೋರಿಕೊಳ್ಳಲ್ಲಿ ಎಂದು ಅಳಲು ತೋಡಿಕೊಂಡ ಅವರು ಕನಿಷ್ಠ ವೇತನ ಜೊತೆಗೆ ಗೌರವ ಧನ ಹೆಚ್ಚಿಸಬೇಕು,ಜನರ ಸೇವೆಗೆ ಸದಾ ಮುಂದಿರುವ ಆಶಾ ಕಾರ್ಯಕರ್ತೆಯರಿಗ ಗೌರವಪೂರ್ವಕವಾಗಿ ಸರ್ಕಾರ ನಡೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ರೇಷ್ಮ, ಮಂಜುಳಾ, ಲಕ್ಷ್ಮಿ, ಜಯಮ್ಮ, ಸುಶೀಲಮ್ಮ, ಸುಜಾತ, ಯುವಜನ ಮುಖಂಡರಾದ ಜಯಣ್ಣ, ರಾಜಶೇಖರ್ ಮತ್ತು ಇತರರು ಹಾಜರಿದ್ದರು.