ಚಿಕ್ಕಬಳ್ಳಾಪುರ | ಭೂಮಿ, ವಸತಿ ಹಕ್ಕುಗಳಿಗಾಗಿ ಅನಿರ್ದಿಷ್ಟಾವಧಿ ಧರಣಿ

Date:

Advertisements

ಭೂಮಿ ಮತ್ತು ವಸತಿ ವಂಚಿತರಿಗೆ ಭೂಮಿ ಮತ್ತು ವಸತಿ ಒದಗಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ. ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

“ರಾಜ್ಯದ ಪ್ರತಿ ಹಳ್ಳಿಹಳ್ಳಿಯಲ್ಲೂ ಇಂದು ಬಡವರ ಪಾಲಿಗೆ ಮನೆ, ನಿವೇಶನಗಳ ಸಮಸ್ಯೆ ಹೇರಳವಾಗಿದೆ. ಬೇಸಾಯ ಭೂಮಿಯ ಸಮಸ್ಯೆಯು ಬಡವರನ್ನು ಕಂಗಾಲು ಮಾಡಿದೆ. ಬೇಸಾಯ ಭೂಮಿ ಮತ್ತು ಮನೆ ನಿವೇಶನ ಈ ಎರಡೂ ಇಂದು ಭೂಗಳ್ಳರ, ಲ್ಯಾಂಡ್ ಮಾಫಿಯಾಗಳ ಮುಷ್ಟಿಯಲ್ಲಿವೆ. ಆದರೆ ಆಳುವವರಿಗೆ ಅದರ ಪರಿವೆಯೇ ಇಲ್ಲ. ಬಡವರಿಗೆ ಭೂಮಿ-ಮನೆ ದೊರಕಿಸುವ ಯೋಗ್ಯತೆ, ಕಾಳಜಿ ಚಿಂತನೆ ಯಾವುದೇ ಸರ್ಕಾರಗಳಿಗೆ ಇಲ್ಲವಾಗಿದೆ. ಹೋರಾಟ ಚಳವಳಿ ಮಾಡಿದಾಗ, ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಮಾತು ಕೊಟ್ಟು ನಂತರ ಮರೆಯುತ್ತಾರೆ. ಹೋರಾಟ ಮಾಡುವ ಬಡ ಜನರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ ಹಿಂಸಿಸುತ್ತಿದ್ದಾರೆ” ಎಂದು ಹೋರಾಟಗಾರರು ಆರೋಪಿಸಿದರು.

“ರಾಜ್ಯದಾದ್ಯಂತ ಭೂಮಿ-ವಸತಿ ಸಮಸ್ಯೆ ಹಲವು ಬಗೆಯದಾಗಿದೆ. ಎಷ್ಟೋ ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಅದನ್ನು ಸಕ್ರಮಗೊಳಿಸಿ ಕೊಡುವ ಜೊಳ್ಳು ಭರವಸೆ ಇನ್ನೂ ಈಡೇರಿಲ್ಲ. ಪಟ್ಟಣ-ನಗರಗಳ ಶ್ರಮಿಕ ವಸತಿಗಳಾದ ಕೊಳಚೆ ಪ್ರದೇಶಗಳು ಸಾವಿರಾರು ಸಂಖ್ಯೆಯಲ್ಲಿದ್ದರೂ, ಅದನ್ನು ಅಭಿವೃದ್ಧಿಪಡಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಕೊಟ್ಟು ಗೌರವಯುತ ನಾಗರಿಕರಾಗಿ ಬದುಕು ನೀಡಲು ವಸತಿ ಇಲಾಖೆ ನಿರ್ವಹಿಸುತ್ತಿರುವವರಿಗೆ ಬಿಡುವಿಲ್ಲ” ಎಂದು ಟೀಕಿಸಿದರು.

Advertisements
ವಸತಿ ಭೂಮಿಗಾಗಿ ಹೋರಾಟ

“ದಶಕಗಳ ಹಿಂದೆಯೇ ಭೂ ನ್ಯಾಯ ಮಂಡಳಿಗಳಿಂದ ಮಂಜೂರಾದ ಭೂಮಿ ಹಳೆಯ ಭೂಮಾಲೀಕರ ವಶದಲ್ಲಿಯೇ ಇರುವ ಹಲವು ಪ್ರಕರಣಗಳಿವೆ. ವಿವಿಧ ರೀತಿಯ ಸರ್ಕಾರಿ ಅಥವಾ ಸಾರ್ವಜನಿಕ ಜಾಗಗಳಲ್ಲಿ ಜಮೀನು ಮಾಡಿಕೊಂಡು ಫಾರಂ ನಂ. 53-57ರಲ್ಲಿ ಅರ್ಜಿ ಹಾಕಿ ಎರಡು ದಶಕಗಳಾದರೂ ಲಕ್ಷಾಂತರ ಅರ್ಜಿಗಳು ಸರ್ಕಾರಿ ಕಚೇರಿಗಳ ಅಟ್ಟಗಳಲ್ಲಿ ಧೂಳು ಹಿಡಿದಿವೆಯೇ ಹೊರತು ಮಂಜೂರಾಗಿಲ್ಲ. ಕರ್ನಾಟಕಾದ್ಯಂತ ಬಡವರಿಗೆ ಜಮೀನು ಮಂಜೂರು ಮಾಡುವುದಿರಲಿ, ಒಂದು ಗುಡಿಸಲು ಕಟ್ಟಿಸಿಕೊಡಲೂ ಸಾಧ್ಯವಾಗಿಲ್ಲ. ವಿಷಪೂರಿತ ಆಕ್ರಮ ಮದ್ಯ ಮಾರಾಟದಿಂದ ಬಡವರ ದುಡಿಮೆ ಮತ್ತು ಆರೋಗ್ಯ ದುರ್ಬಲವಾಗುತ್ತಿದೆ. ಇದನ್ನು ಪ್ರಜ್ಞಾಪೂರ್ವಕವಾಗಿ ಸರ್ಕಾರ ರವಾನಿಸಿ ಬೆಂಬಲಿಸುತ್ತಿರುವುದು ಅನ್ಯಾಯ ಮತ್ತು ಆಕ್ರಮವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಕಾರ್ಯಕರ್ತ ಸಂಜಯ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಂದಾಯ ಇಲಾಖೆಯ ನಿರ್ಲಕ್ಷ, ಸರ್ವೆ ಇಲಾಖೆಯು ಸೃಷ್ಟಿಸಿರುವ ಗೊಂದಲಗಳಿಂದ ಜೋಡಿ ಕೃಷ್ಣಾರಾಜಪುರ ಗ್ರಾಮದ ಗೇಣಿದಾರರಿಗೆ ತೊಂದರೆಯಾಗಿರುವುದನ್ನು ಕೂಡಲೇ ಸರಿಪಡಿಸಬೇಕು. ಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂ.105 ರಲ್ಲಿ ಭೂ ಕಬಳಕೆಯಾಗಿದ್ದು, ದಲಿತರ ಜಮೀನುಗಳಿಗೆ ಹೋಗಿ-ಬರಲು ರಸ್ತೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸಬೇಕು. ಚೀಲಾಗುಂಟೆ, ಮರಿಪಡಗು, ಚನ್ನಬೈರೇನಹಳ್ಳಿ (ಗುವ್ವಲಹಳ್ಳಿ), ಮಲ್ಲೇನಹಳ್ಳಿ, ಹಕ್ಕಿಪಿಕ್ಕಿ ಕಾಲೋನಿ, ಕುಡುಮಲಕುಂಟೆ ಹಾಗೂ ಉಪ್ಪರಹಳ್ಳಿ ಗ್ರಾಮಗಳ ನಿವೇಶನ ರಹಿತ ದಲಿತರಿಗೆ ನಿವೇಶನ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.

“ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ದಲಿತರ ಜಮೀನುಗಳಿಗೆ ಹೋಗಿ ಬರುವ ರಸ್ತೆಗಳ ಒತ್ತುವರಿ ತೆರವುಗೊಳಿಸಬೇಕು. ಈಗಾಗಲೇ ಮಂಜೂರಾಗಿರುವ ಚಿಕ್ಕಕುರುಗೋಡು ಗ್ರಾಮದ ಸರ್ವೆನಂ, 69ರಲ್ಲಿ ನಿವೇಶನಗಳ
ಲೇಔಟ್ ಮಾಡಿ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ತಜ್ಞ ವೈದ್ಯರ ನೇಮಿಸುವಂತೆ ಡಿವೈಎಫ್‌ಐ ಒತ್ತಾಯ

“ಮಾಜಿ ಸೈನಿಕ ಆರ್, ಅಂಗಾಚಾರಿ ಇವರು ಭಾರತೀಯ ಸೈನ್ಯದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ
ನಿವೃತ್ತರಾಗಿದ್ದಾರೆ. ಅವರಿಗೆ ಸರ್ಕಾರದ ವತಿಯಿಂದ 5 ಎಕರೆ ಜಮೀನು ಮಂಜೂರು ಮಾಡಬೇಕು. ನಾಗಯ್ಯರೆಡ್ಡಿ ಬಡಾವಣೆಯ ಸ್ಮಶಾನಕ್ಕೆ ಜಾಗ ಗುರುತಿಸಬೇಕು. ಗೌರಿ ಬಿದನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ರೇಡಿಯೋಲಾಜಿ, ಸ್ಕ್ಯಾನ್, ಕ್ಷ-ಕಿರಣ ತಜ್ಞರ ಕೊರತೆಯಿದೆ. ಈ ಸಮಸ್ಯೆಯ ಕೂಡಲೇ ಪರಿಹರಿಸಬೇಕು” ಎಂದು ಆಗ್ರಹಿಸಿದರು.

ದಸಂಸ ಕಾರ್ಯಕರ್ತರುಗಳಾದ ಸೋಮಯ್ಯ, ಶ್ರೀರಂಗಚಾರಿ, ಬಾಲಪ್ಪ, ಆದಿ ನಾರಾಯಣಪ್ಪ, ನಗರಗೆರೆ ಲಕ್ಷ್ಮೀ ನಾರಾಯಣ, ಸಂಜಯ್, ಪಿ.ನರಸಿಂಹಮೂರ್ತಿ, ಕೆ ಎಸ್ ತಿಪ್ಪಯ್ಯ ಸೇರಿದಂತೆ ತಾಲೂಕಿನ ಎಲ್ಲ ಜನಪರ ಕಾಳಜಿಯುಳ್ಳವರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X