ಅಂತರ್ಜಾತಿಯ ಯುವಕ ತಮ್ಮ ಮಗಳನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದಾನೆಂದು ಕುಪಿತಗೊಂಡ ಯುವತಿಯ ಪೋಷಕರು ಯುವಕನ ಸಹೋದರನ ಆಟೋಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುರೇಶ್ ಕುಮಾರ್ ಎಂಬ ಯುವಕ ಪರಿಶಿಷ್ಟ ಪಂಗಡ (ನಾಯಕ) ಸಮುದಾಯಕ್ಕೆ ಸೇರಿದ್ದು, ಒಕ್ಕಲಿಗ ಸಮುದಾಯದ ಮೋನಿಕಾ ಎಂಬ ಯುವತಿಯನ್ನು ಪ್ರೀತಿಸಿದ್ದರು. ಸುರೇಶ್ ಕುಮಾರ್ ಕಂಬಿ ಕೆಲಸ ಮಾಡಿಕೊಂಡಿದ್ದು, ಮೋನಿಕಾ ಪಿಯುಸಿಗೆ ಓದು ಕಡಿತಗೊಳಿಸಿ ಮನೆಯಲ್ಲಿಯೇ ಇದ್ದರು.
ಯುವತಿಯ ಎದರು ಮನೆಯಲ್ಲಿಯೇ ಇದ್ದ ಸುರೇಶ್ ಕುಮಾರ್ ಮತ್ತು ಯುವತಿ ಮೋನಿಕಾ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಲು ಜಾತಿಗೆ ಹೆದರಿದ ಇಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ದಲಿತ ಕುಟುಂಬದ ಮನವಿಗೆ ಸ್ಪಂದಿಸದ ತಹಶೀಲ್ದಾರ್; ಕ್ರಮಕ್ಕೆ ಆಗ್ರಹ
ಅಂತರ್ಜಾತಿಯ ಯುವಕ ತನ್ನ ಮಗಳನ್ನು ಕರೆದೊಯ್ದಿದ್ದಾನೆಂದು ಸಿಟ್ಟಿಗೆದ್ದ ಯುವತಿಯ ಪೋಷಕರು ಯುವಕನ ಸಹೋದರ ಮೋಹನ್ ಕುಮಾರ್ ಎಂಬುವವರ ಆಟೋಗೆ ಬೆಂಕಿ ಹಚ್ಚಿದ್ದು, ಯುವತಿ ಕಾಣೆಯಾಗಿದ್ದಾಳೆಂದು ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.