ಗಡಿನಾಡು ಭಾಗದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ನಾಡು ನುಡಿ ಸಾಹಿತ್ಯ ಬೆಳೆಸುವುದು ಅನಿವಾರ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ಗುಡಿಬಂಡೆ ತಾಲೂಕಿನ ಗಾಯಿತ್ರಿ ಪ್ರಸಾದ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಯಪ್ಪನವರಿಂದ ಪದಾಧಿಕಾರಿ ಬಿ ಮಂಜುನಾಥ್ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, “ಕನ್ನಡ ಭಾಷೆಯು ಅತೀ ಪುರಾತನವಾದದ್ದು. ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕೀರ್ತಿ ಕನ್ನಡಕ್ಕಿದೆ. ಖಾಸಗೀಕರಣದ ಪೈಪೋಟಿಯಲ್ಲಿ ಕನ್ನಡ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕ್ಷೀಣಿಸುತ್ತದೆ. ಸಾರ್ವಜನಿಕರು ಜಾಗೃತರಾಗಬೇಕಾದ ಅತ್ಯವಶ್ಯಕತೆ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕರ್ತವ್ಯ ಲೋಪ, ಸರ್ಕಾರದ ಹಣ ದುರುಪಯೋಗ : ವೈದ್ಯಾಧಿಕಾರಿ ಅಮಾನತು
ಈ ಸಂಧರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಅನುರಾಧಾ ಆನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ರಿಯಾಜ್ ಪಾಷಾ, ಶ್ರೀನಿವಾಸ ಗಾಂಧಿ, ಗುಂಪುಮರದ ಆನಂದ್, ಕರುನಾಡು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಫಯಾಜ್ ಅಹಮದ್, ಸ ನ ನಾಗೇಂದ್ರ, ಇಸ್ಮಾಯಿಲ್ ಆಜಾದ್(ಬಾಬು) ಬಾಗೇಪಲ್ಲಿ ತಾಲೂಕು ಕಸಾಪ ಅಧ್ಯಕ್ಷ ಕೃಷ್ಣಾರೆಡ್ಡಿ, ದಲಿತ ಮುಖಂಡ ಗುಡಿಬಂಡೆ ಗಂಗಪ್ಪ, ಡಾ. ಜಿವಿಕ ನಾರಾಯಣಸ್ವಾಮಿ ಸೇರಿದಂತೆ ಕಸಾಪ ಕಾರ್ಯಕಾರಿ ಮಂಡಳಿ ಸದಸ್ಯರುಗಳು ಇದ್ದರು.