ಚಿಕ್ಕಬಳ್ಳಾಪುರ | ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು: ರಾಜ್ಯಾಧ್ಯಕ್ಷ ಹನುಮಂತಗೌಡ ಒತ್ತಾಯ

Date:

Advertisements

ಅತಿಥಿ ಉಪನ್ಯಾಸಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಉನ್ನತ ಶಿಕ್ಷಣ ಸಚಿವರ ಬಗ್ಗೆ ಅವಹೇಳನ ಮಾಡಿರುವ ಅನಾಮಿಕ ವಿದ್ಯಾರ್ಥಿ ಸಂಘಟನೆಯ ನಾಯಕನಿಗೆ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತ ಗೌಡ. ಆರ್ ಕಲ್ಮನಿ ತಿರುಗೇಟು ನೀಡಿದರು.

ಚಿಕ್ಕಬಳ್ಳಾಪುರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ 434 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10,772 ಮಂದಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಕೋರ್ಟಿನ ಆದೇಶಗಳ ಹಿನ್ನೆಲೆಯಲ್ಲಿ ಬೀದಿ ಪಾಲು ಮಾಡದೆ ಸೇವಾ ಹಿರಿತನದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಸರಕಾರವನ್ನು ಒತ್ತಾಯಿಸಿದರು.

Advertisements

ಅತಿಥಿ ಉಪನ್ಯಾಸಕರು ಇವತ್ತು ಏನಾದರೂ ಪಡೆದುಕೊಂಡಿದ್ದರೆ ಅದು ಹೋರಾಟಗಳ ಫಲವಾಗಿ ಮಾತ್ರವಾಗಿದೆ. ಎಲ್ಲ ಸರಕಾರಗಳ ಅವಧಿಗಳಲ್ಲಿ ಕೂಡ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಿದ್ದೇವೆ. ನಾನು ಯಾರ ಪರ, ಯಾರ ವಿರುದ್ಧವೂ ಅಲ್ಲ ಎಂದ ಅವರು, ಈಗಿನ ಸರಕಾರ ಮತ್ತು ಸಚಿವರು ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳನ್ನು ಈಡೇರಿಸಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಸಚಿವರಿಗೆ ಸಂಘವು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದರು.

ಕರ್ತವ್ಯ ನಿರತ ಅತಿಥಿ ಉಪನ್ಯಾಸಕರು ಮರಣ ಹೊಂದಿದಲ್ಲಿ 5 ಲಕ್ಷ ಪರಿಹಾರ ನೀಡುವುದು, ಆರೋಗ್ಯ ವಿಮೆ ವಿಚಾರ, ಇಡುಗಂಟಿನ ವಿಚಾರದಲ್ಲಿ ಈ ಸರಕಾರ ಅತಿಥಿ ಉಪನ್ಯಾಸಕರಿಗೆ ತುಂಬಾ ಸಹಾಯ ಮಾಡಿದೆ. ಇಷ್ಟೊಂದು ಸೌಕರ್ಯವನ್ನು ಯಾವ ಸರ್ಕಾರವು ಒದಗಿಸಿಲ್ಲ ಎಂಬುದು ಸತ್ಯ. ಹೀಗಾಗಿ, ಅತಿಥಿ ಉಪನ್ಯಾಸಕರ ನಡುವೆ ತಾರತಮ್ಯ ಮಾಡದೆ ಸೇವಾ ಹಿರಿತನದ ಆಧಾರದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರ ಆಯ್ಕೆ ನಡೆಯಲಿ. 2009ರಲ್ಲಿ ಎಂಫಿಲ್ ಪಡೆದಿರುವ ಅಭ್ಯರ್ಥಿಗಳನ್ನು ಎನ್‌ಇಟಿಗೆ ಸಮಾನಂತರವಾಗಿ ಸ್ವೀಕರಿಸಬೇಕು. 46 ದಿನಗಳ ಹೋರಾಟದ ಗೌರವಧನ ಬಿಡುಗಡೆ ಮಾಡಬೇಕು. ಪ್ರತಿವರ್ಷ ನೇಮಕಾತಿ ಪ್ರಕ್ರಿಯೆ ನಡೆಸುವುದನ್ನು ಕೈಬಿಟ್ಟು ಸೇವೆಲ್ಲಿರುವವರನ್ನೇ ಮುಂದುವರೆಸಬೇಕು. ಹೆಚ್ಚುವರಿ ಕಾರ್ಯಭಾರಕ್ಕೆ ಹೊಸಬರನ್ನು ತೆಗೆದುಕೊಳ್ಳಬೇಕು. ಯುಜಿಸಿ ಅರ್ಹತೆ ಪಡೆಯಲು 5 ವರ್ಷ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ಬಿಟ್ಟು ಯುಜಿಸಿ ನಿಯಮಾವಳಿ ಆಧಾರದಲ್ಲಿ ನೇಮಕಾತಿಗೆ ಮುಂದಾದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದರು.

ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನಿರಾಜು. ಎಂ ಅರಿಕೆರೆ ಮಾತನಾಡಿ, ಎಕೆಎಸ್‌ಎಸ್‌ಎ ಸಂಘಟನೆಯ ರಾಜ್ಯಾಧ್ಯಕ್ಷ ಎಂಬ ಅನಾಮಿಕ ವ್ಯಕ್ತಿ ಇತ್ತೀಚೆಗೆ ವಿಡಿಯೋ ಒಂದನ್ನು ಹರಿಯಬಿಟ್ಟು ಉನ್ನತ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿರುವುದು ಸರಿಯಲ್ಲ. ಅಷ್ಟಕ್ಕೂ ಈತ ಯಾರೆಂಬುದು ಅತಿಥಿ ಉಪನ್ಯಾಸಕರಿಗೆ ಗೊತ್ತೇ ಇಲ್ಲ.ಈವರೆಗೆ ಈತ ಎಲ್ಲಿದ್ದ, ಯಾವ ಹೋರಾಟ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯಕೊಡಿಸಿದ್ದಾನೆ ಎಂಬುದು ಗೊತ್ತಿಲ್ಲ. 2024-25ನೇ ಸಾಲಿನಲ್ಲಿ ಅತಿಥಿ ಎಂಬ ಪದನಾಮವನ್ನು ಸರಕಾರ ಜಾರಿಗೆ ತಂದಾಗ ಈತ ಎಲ್ಲಿದ್ದ ಎಂಬುದು ಯಾರಿಗೂ ತಿಳಿದಿಲ್ಲ. ಇದೀಗ ದಿಡೀರ್ ಎಂದು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. 2014ರ ಯುಜಿಸಿ ನಿಯಮಾವಳಿಯಂತೆ ಅತಿಥಿ ಉಪನ್ಯಾಸಕರ ಆಯ್ಕೆಯಾಗಲಿ ಎಂದು ಹೇಳುತ್ತಿರುವುದು ನೋಡಿದರೆ ಅತಿಥಿ ಉಪನ್ಯಾಸಕರ ನಡುವೆ ಹುಳಿಯಿಂಡುವ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.

chikkaballapura guest teacher 1

ಈತ ನಿಜವಾದ ವಿದ್ಯಾರ್ಥಿ ಮುಖಂಡನೇ ಆಗಿದ್ದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಎಲ್ಲಿ ಧ್ವನಿ ಎತ್ತಿದ್ದಾರೆ? ಯಾವಾಗ ಹೋರಾಟ ಮಾಡಿದ್ದಾರೆ? ಯಾವ ನ್ಯಾಯ ಕೊಡಿಸಿದ್ದಾರೆ? ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಅದನ್ನು ಬಿಟ್ಟು ಅತಿಥಿ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ಉಪನ್ಯಾಸಕರನ್ನೇ ಪರಿಗಣಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವ ಬೆದರಿಕೆ ಹಾಕಿರುವ ಕ್ರಮವನ್ನು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ತಮ್ಮ ಅವಧಿಯಲ್ಲಿಯೇ ಮುಖ್ಯಮಂತ್ರಿಗಳ ಮನವೊಲಿಸಿ ನಮ್ಮ ಸಮಸ್ಯೆಗೆ ಪೂರ್ಣ ವಿರಾಮ ಇಡಬೇಕು. ಕೋರ್ಟಿನ ತೀರ್ಪುಗಳನ್ನು ಮುಂದಿಟ್ಟುಕೊoಡು ನಮ್ಮನ್ನು ಬೀದಿಪಾಲು ಮಾಡಬೇಡಿ. ಗೌರವಯುತವಾಗಿ ಬದುಕು ನಡೆಸಲು ಅವಕಾಶ ಮಾಡಿಕೊಡಿ ಎಂದು ಕೈಮುಗಿದು ಬೇಡಿಕೊಂಡರು.

ರಾಜ್ಯ ಸರಕಾರ 2025-26ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವಾಗ ಯುಜಿಸಿ ನಾನ್ ಯುಜಿಸಿ ಎಂದು ಭೇದ ಭಾವ ಮಾಡದೆ ಸೇವಾ ಹಿರಿತನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು. 12 ತಿಂಗಳು ವೇತನವನ್ನು ನೀಡಬೇಕು. ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಸಂಘವು ಅವರ ಪರವಾಗಿ ನಿಲ್ಲಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜಶೇಖರ್, ಸದಾಶಿವ ಆರಾಧ್ಯ, ಮಾಲೂರು ರಮೇಶ್, ಗದಗ್ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ದೇಸಾಯಿಗೌಡ,ಗುಲ್ಬರ್ಗ ಜಿಲ್ಲಾಧ್ಯಕ್ಷ ಡಾ.ಚಂದ್ರಕಾoತ್ ಶಿರೋಳೆ ಮತ್ತಿತರರು ಮಾತನಾಡಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆನ್‌ಲೈನ್‌ ಗೇಮಿಂಗ್:‌ ಹದ್ದುಬಸ್ತಿನಲ್ಲಿಡುವುದು ಸಾಧ್ಯವೇ?

ಈ ವೇಳೆ ಗದಗಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ದೇಸಾಯಿಗೌಡ, ಸದಸ್ಯ ಮಹಂತೇಶ್ ಕರ್ಲವಾಡ್, ಗುಲ್ಬರ್ಗ ಜಿಲ್ಲಾಧ್ಯಕ್ಷ ಡಾ.ಚಂದ್ರಕಾoತ್ ಶಿರೋಳೆ, ಉಪನ್ಯಾಸಕ ಡಾ.ಪ್ರಭುನಾರಾಯಣ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನಿರಾಜು. ಎಂ ಅರಿಕೆರೆ, ಗೌರವಾಧ್ಯಕ್ಷ ಸದಾಶಿವ ಆರಾಧ್ಯ, ಕೋಲಾರ ರಮೇಶ್, ಚಿಂತಾಮಣಿ ರಮಾನಂದ, ರಾಘವೇಂದ್ರ, ಸತ್ಯನಾರಾಯಣ, ವೆಂಕಟರಮಣ, ರಾಜಶೇಖರ್, ಗೀತಾ, ಸುರೇಶ್‌ಬಾಬು,ರಾಮಾಂಜಿನಪ್ಪ ಮತ್ತಿತರರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ಜಾಗೃತಿ ಅಭಿಯಾನ: ಜೇಬ್ರಿನ್ ಖಾನ್

"ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ಆಗಸ್ಟ್...

ಉತ್ತರ ಕನ್ನಡ | ಲಾಟರಿ, ಮಟ್ಕಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳಿಂದ ಸ್ಕ್ವಾಡ್ ರಚನೆ

ಕರ್ನಾಟಕ ರಾಜ್ಯ ಲಾಟರಿ ರೆಗ್ಯೂಲೇಶನ್ ಆ್ಯಕ್ಟ್ 1998 ಮತ್ತು ಸರ್ಕಾರದ ಆದೇಶದಂತೆ...

ಚಿಕ್ಕಬಳ್ಳಾಪುರ | ಒಳ ಮೀಸಲಾತಿ: ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹ; ಪಟ್ರೇನಹಳ್ಳಿ ಕೃಷ್ಣ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಭಂದ ಬಲಗೈ ಹಾಗೂ ಎಡಗೈ...

ರಾಯಚೂರು | ಸೈಬರ್ ವಂಚನೆ, ಜೂಜಾಟ, ವ್ಯಸನದ ವಿರುದ್ಧ ಸಾಲಿಡಾರಿಟಿ ಜಾಗೃತಿ ಅಭಿಯಾನ : ಸೈಯದ್ ತನ್ವೀರ್

ಯುವ ಪೀಳಿಗೆಯನ್ನು ಸೈಬರ್ ವಂಚನೆ, ಆನ್‌ಲೈನ್ ಜೂಜಾಟ ಹಾಗೂ ಗೇಮಿಂಗ್ ವ್ಯಸನದ...

Download Eedina App Android / iOS

X