ಪರಿಸರ ಮತ್ತು ಜೀವಿಗಳು ಉಳಿಯಬೇಕೆಂದರೆ ಚಾಲಕರು ಹೊಗೆರಹಿತ ವಾಹನ ಚಲಾಯಿಸಲು ಮುಂದಾಗಬೇಕು. ಸುಸ್ಥಿತಿಯಲ್ಲಿರುವ ವಾಹನಗಳನ್ನು ಮಾತ್ರ ರಸ್ತೆಗೆ ತರಬೇಕು. ವಾಹನಗಳಿಗೆ ಕಲಬೆರಕೆ ಇಂಧನ ಬಳಸದಂತೆ ನಿಗಾವಹಿಸಬೇಕು ಎಂದು ಆರ್‌ಟಿಒ ಅಧೀಕ್ಷಕ ಪ್ರಹ್ಲಾದ್ ತಿಳಿಸಿದರು.
ಚಿಕ್ಕಮಗಳೂರು ನಗರದ ಎಂಇಎಸ್ ಕಾಲೇಜಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಯುಮಾಲಿನ್ಯ ನಿಯಂತ್ರಣ ಕುರಿತು ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಾನವ ತನ್ನ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಪ್ರಕೃತಿದತ್ತ ವನಸಿರಿಯನ್ನು ಹಾಳುಗೆಡುವುವ ಮೂಲಕ ಆರೋಗ್ಯ ಬದುಕಿಗೆ ತಾನಾಗಿಯೇ ಕುತ್ತು ತಂದೊಡ್ಡುತ್ತಿದ್ದಾನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು
ಈ ವೇಳೆ ಎಂಇಎಸ್ ಕಾಲೇಜಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಮುಖ್ಯಸ್ಥರು, ಮಲೆನಾಡು ವಿದ್ಯಾಸಂಸ್ಥೆ ಮುಖಂಡರು, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.
