ತಾಯಿಯ ಜೊತೆ ಚಿನ್ನದ ಅಂಗಡಿಗೆ ಬಂದಿದ್ದ ಅಪ್ರಾಪ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಆಭರಣ ವ್ಯಾಪಾರಿಯನ್ನು ಥಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಆರೋಪಿ ಅಮೀರ್ ಮಾಲೀಕತ್ವದ ಆಭರಣ ಮಳಿಗೆಗೆ ಶುಕ್ರವಾರ ತಾಯಿ-ಮಗಳು ತೆರಳಿದ್ದರು.
ಮಾತನಾಡುವ ನೆಪದಲ್ಲಿ ಆರೋಪಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ವೇಳೆ ಘಟನೆಯ ಬಗ್ಗೆ ಬಾಲಕಿ ತನ್ನ ತಾಯಿಗೆ ದೂರು ನೀಡಿದಾಗ, ಕೋಪಗೊಂಡ ತಾಯಿ ಅಮೀರನಿಗೆ ತಮ್ಮ ಪಾದರಕ್ಷೆಗಳಿಂದ ಹೊಡೆದಿದ್ದಾರೆ.
ಸಾರ್ವಜನಿಕರೂ ಕೂಡ ಆಕೆಯೊಂದಿಗೆ ಸೇರಿಕೊಂಡು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | 5 ಗಂಟೆ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಎಂ ಡಿ ಭರವಸೆ
ಈ ಹಿಂದೆಯು ಆರೋಪಿ ತನ್ನ ಅಂಗಡಿಗೆ ಬಂದ ಮಹಿಳೆಯರು ಮತ್ತು ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದನು ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ತರೀಕೆರೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.