ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು ಕೂತುಗೋಡು ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಯಿತು.
ಕೂತುಗೋಡು ಗ್ರಾಮದಲ್ಲಿ ನೀಲಿ ತೋರಣಗಳಿಂದ ಕೊಡಿದ್ದು, ಸಂಜೆ 5 ಗಂಟೆಯ ಸಮಯದಲ್ಲಿ ಅಂಬೇಡ್ಕರ್ ಜಯಂತಿ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿಗಳು ಕೆ ಎಲ್ ಅಶೋಕ್ ಅವರು ಮಾತನಾಡಿ ನೂರಾರು ವರ್ಷಗಳಿಂದ ಶೋಷಣೆ, ದಬ್ಬಾಳಿಕೆ, ಕೀಳರಿಮೆ ಜಾತಿ ವ್ಯವಸ್ಥೆ, ಮನುಷ್ಯರಿಗೆ ಹಕ್ಕುಗಳೇ, ಇಲ್ಲದ ಅದೆಷ್ಟೋ ಜನರಿಗೆ ಬದುಕುವ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ.
101 ಜಾತಿಯಲ್ಲಿ ಒಳಮೀಸಲಾತಿ ಕೊಡಬೇಕು ಅಂತಿದ್ದಾರೆ, ಆದರೇ, ಒಟ್ಟಾರೆ ನಮ್ಮ ದೇಶದಲ್ಲಿ 3000 ಜಾತಿಗಳು ಇವೆ. ಅಂಬೇಡ್ಕರ್ ಅವರು ಭಾರತದ ಶೋಷಿತ ಸಮುದಾಯಕ್ಕೆ ಒಂದು ರೂಪಕವಾಗಿದ್ದಾರೆ. ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಜಯಂತಿ ನಡೆಯುತ್ತಿದೆ ಅಂದರೇ, ಅದು ಅಂಬೇಡ್ಕರ್ ಜಯಂತಿ ಮಾತ್ರ, ನಾವೆಲ್ಲ ತಬ್ಬಲ್ಲಿ ಸಮುದಾಯ ಅಲ್ಲ, ಏಕೈಕ ಹೋರಾಟವೇ ಅಂಬೇಡ್ಕರ್ ಆಗಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಕ್ರಮ ಮರಳು ಸಾಗಾಟ: ಪಿಕಪ್ ವಶ
ಭಾರತದಲ್ಲಿ ನಿರ್ದೇಶನ ತತ್ವಗಳು 38-45 ಪರಿಷ್ಕರಣೆ ಇವೆ. 38-55 ಬಂದ್ರೆ ಜಾತಿ ವ್ಯವಸ್ಥೆ, ಅಸಮಾನತೆ ಹೊರಟು ಹೋಗುತ್ತದೆ. 1950ರ ರಾಜಕೀಯದಲ್ಲಿ ಸಮಾನತೆ, ಕಂಡುಕೊಳ್ಳುತ್ತೇವೆ, ಯಾರಿಗೆ ಆಸ್ತಿ ಇದ್ದು ಪದವೀಧರರು ಆಗಿರುತ್ತಾರೆ, ಅವರು ಮಾತ್ರ ಮತ ಚಲಾವಣೆ ಅವಕಾಶ ಪಡೆದುಕೊಂಡರು. ಮೊಟ್ಟ ಮೊದಲು ಮಹಿಳೆಯರಿಗೆ ಆಸ್ತಿ, ಸ್ವಾತಂತ್ರ್ಯ ಕೊಟ್ಟಿದ್ದು ಅಂಬೇಡ್ಕರ್, ಇದಕ್ಕಾಗಿ ರಾಜಕೀಯಕ್ಕೇ ರಾಜೀನಾಮೆ ಕೊಟ್ಟಿದ್ದರು, ಎಂದು ಕಾರ್ಯಕ್ರಮದಲ್ಲಿ ಕೆ ಎಲ್ ಅಶೋಕ್ ಅವರು ಮಾತಾಡಿದರು.