ದೇವನಹಳ್ಳಿ ಚಲೋ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಪ್ರತಿಭಟಿಸುತ್ತಿದ್ದ ರೈತರನ್ನು ಸರ್ಕಾರ ಕಡೆಗಣಿಸುತ್ತಿರುವುದನ್ನು ಖಂಡಿಸಿ, ರೈತಹೋರಾಟವನ್ನು ಬೆಂಬಲಿಸಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹಾಗಲಗಂಚಿಯಲ್ಲಿ ರೈತರು ಹಾಗೂ ಕಾರ್ಮಿಕ ಬಳಗದವರಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ದೇವನಹಳ್ಳಿಯಲ್ಲಿ ನಡೆಯುತ್ತಿರುವ ಹೋರಾಟ, ರೈತರ ಭೂಮಿಯನ್ನು ಕಬಳಿಸುತ್ತಿರುವ ಈ ಆಡಳಿತ ಸರ್ಕಾರ ಯೋಗ್ಯ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುತ್ತಿದೆ. ರೈತರ ಬದುಕನ್ನು ಈ ಸರ್ಕಾರ ನಿರ್ನಾಮ ಮಾಡಲು ಹೊರಟಿದೆ ಎಂದು ರೈತ ವೆಂಕಟೇಶ ಹಾಗಲಗಂಚಿ ಅವರು ಈದಿನ. ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.
ದೇವನಹಳ್ಳಿಯಲ್ಲಿ ನಡೆಯುತ್ತಿರುವ ಇಂತಹ ಹೋರಾಟಗಳನ್ನು ನಾಡಿನ ಎಲ್ಲ ರೈತರೂ ಬೆಂಬಲಿಸಿ ಜೊತೆಗೆ ನಿಲ್ಲಬೇಕಾಗಿದೆ. ನಮ್ಮ ಭೂಮಿಯನ್ನು ನಾವೇ ಹೋರಾಟ ಮಾಡಿ ಪಡೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ರೈತರ ಭೂಮಿಯನ್ನು ಕಬಳಿಸಿ ಖಾಸಗಿಕರಣ ಮಾಡಲು ಹೊರಟಿರುವ ಈ ಸರ್ಕಾರಕ್ಕೆ ಧಿಕ್ಕಾರ ಎಂದು ಸಾಮಾಜಿಕ ಹೋರಾಟಗಾರರಾದ ಗುರುಮೂರ್ತಿ ಜೋಗಿಬೈಲ್ ಅವರು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಾಹನ ಅಪಘಾತ: ಇಬ್ಬರಿಗೆ ಗಂಭೀರ
ಈ ವೇಳೆ ಸುತ್ತಮುತ್ತಲಿನ ಗ್ರಾಮದ ಐವತ್ತಕ್ಕೂ ಹೆಚ್ಚು ರೈತರು ಹಾಗೂ ಕಾರ್ಮಿಕರು ಭಾಗವಹಿಸಿ ಪ್ರತಿಭಟನೆ ನಡೆಸಿದರು.